Asianet Suvarna News Asianet Suvarna News

ನಟ ಕಬೀರ್‌ ಬೇಡಿ ಆತ್ಮಕಥನ ಮಾರಾಟಕ್ಕೆ ನಿರ್ಬಂಧ ಇಲ್ಲ: ಹೈಕೋರ್ಟ್ ಆದೇಶ

ಚಿತ್ರನಟ ಕಬೀರ್ ಬೇಡಿ ಅವರ ಆತ್ಮಕಥನದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಆ ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕಬೀರ್ ಬೇಡಿ ಅವರ ಹಿರಿಯ ಸಹೋದರ ಟಿ.ಆರ್. ಬೇಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

No ban on sale of actor Kabir Bedi autobiography Says High Court gvd
Author
First Published Feb 8, 2024, 6:23 AM IST

ಬೆಂಗಳೂರು (ಫೆ.08): ಚಿತ್ರನಟ ಕಬೀರ್ ಬೇಡಿ ಅವರ ಆತ್ಮಕಥನದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಆ ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕಬೀರ್ ಬೇಡಿ ಅವರ ಹಿರಿಯ ಸಹೋದರ ಟಿ.ಆರ್. ಬೇಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಕಬೀರ್ ಬೇಡಿ ಅವರ ‘ಸ್ಟೋರಿಸ್ ಐ ಮಸ್ಟ್ ಟೆಲ್; ಡಿ ಎಮೋಷನಲ್ ಲೈಫ್ ಆಫ್ ಆ್ಯನ್ ಆಕ್ಟರ್’ ಪ್ರಕಟಣೆಯನ್ನು ನಿರ್ಬಂಧಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮೇಲ್ಮನವಿ ಪುರಸ್ಕರಿಸಲು ಸೂಕ್ತ ಕಾರಣಗಳು ಕಂಡುಬಂದಿಲ್ಲ. ಜತೆಗೆ 2021ರಲ್ಲಿಯೇ ಪುಸ್ತಕ ಪ್ರಕಟಗೊಂಡು, ಮಾರಾಟವಾಗಿದೆ. ಪುಸ್ತಕ ಮಾರಾಟಕ್ಕೆ ನಿರ್ಬಂಧ ವಿಧಿಸಲು ನಿರಾಕರಿಸಿ ವಿಚಾರಣಾ ನ್ಯಾಯಾಲಯ 2022ರ ಸೆ.27ರಂದು ಆದೇಶಿಸಿದೆ. ಇದಾದ 9 ತಿಂಗಳ ನಂತರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಕೃತಿ ಪ್ರಕಟಣೆ ಹಾಗೂ ಮಾರಾಟಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ತೆರಿಗೆ ನ್ಯಾಯಕ್ಕಾಗಿ ಚಲೋ ದಿಲ್ಲಿ: ಸಿದ್ದು ನೇತೃತ್ವದಲ್ಲಿ #ನನ್ನತೆರಿಗೆನನ್ನಹಕ್ಕು ಹ್ಯಾಶ್‌ಟ್ಯಾಗ್‌ ಅಡಿ ಹೋರಾಟ

ಕೃತಿಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಅವಹೇಳನಕಾರಿ ಅಂಶಗಳಿರುವ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ಹಾಗೂ ಪ್ರಕಾಶನಕ್ಕೆ ನಿರ್ಬಂಧ ಹೇರಬೇಕು. ತಮ್ಮ ವಿರುದ್ಧ ಸುಳ್ಳು ಹೇಳಿಕೆ ದಾಖಲಿಸಿ ಮಾನನಷ್ಟು ಉಂಟು ಮಾಡಿರುವುದಕ್ಕೆ ವಾರ್ಷಿಕ ಶೇ.24ರಷ್ಟು ಬಡ್ಡಿ ದರದಲ್ಲಿ ಒಂದು ಕೋಟಿ ಪರಿಹಾರ ನೀಡಲು ಎಂದು ಕೃತಿಕಾರರು ಹಾಗೂ ಪ್ರಕಾಶಕರಿಗೆ ನಿರ್ದೇಶಿಸುವಂತೆ ಕೋರಿ ಟಿ.ಆರ್‌.ಬೇಡಿ ಅವರು 2021ರಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ಮನವಿ ತಿರಸ್ಕರಿಸಿ 2022ರ ಸೆ.27ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Follow Us:
Download App:
  • android
  • ios