Asianet Suvarna News Asianet Suvarna News

ಐಶ್ವರ್ಯಾ ರೈ-ಅಭಿಷೇಕ್ ಮದುವೆಯಲ್ಲಿ ಕಪಿಲ್ ಕೊಟ್ಟ ಗಿಫ್ಟ್ ಏನು; ಐಶೂ ನಕ್ಕಿದ್ದೇಕೆ?

ನಟಿ ಐಶ್ವರ್ಯಾ ರೈ ಅವರಿಗೆ ಕಪಿಲ್ ತಮ್ಮ ಶೋದಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಐಶ್ವರ್ಯಾ ಜೀ, ನಿಮ್ಮ ಮದುವೆಯ ಸಮಯದಲ್ಲಿ ನಿಮಗೆ ಬಂದಿರುವ ಗಿಫ್ಟ್ ನೋಡಿದಾಗ, ನಿಮಗೆ ಅದರಲ್ಲಿ ಯಾವುದಾದರೂ ಗಿಫ್ಟ್..

Comedian Kapil reveals his marriage gift to Aishwarya Rai and Abhishek Bachchan srb
Author
First Published May 17, 2024, 4:10 PM IST

ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಮದುವೆಯ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಕಾಮಿಡಿಯನ್ ಕಪಿಲ್ ಶರ್ಮಾ (Kapil Sharma) ಅವರು ನೆನಪಿಸಿಕೊಂಡಿದ್ದಾರೆ. ಅದನ್ನು ತಮ್ಮ ಶೋ ವೇಳೆ ನಟಿ ಐಶ್ವರ್ಯಾ ರೈ ಮುಂದೆ ಹೇಳಿಕೊಂಡು ಅಲ್ಲಿದ್ದ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ. ಸ್ವತಃ ಐಶ್ವರ್ಯಾ ರೈ ಬಚ್ಚನ್ ಅವರು ಕಪಿಲ್ ಹೇಳಿರುವ ಒಗಟಿನ ರೀತಿಯ ಪ್ರಶ್ನೆಗೆ ಅವರಿಂದಲೇ ಉತ್ತರ ಹೇಳಿಸಿ ತಾವೆಷ್ಟು ಜಾಣರು ಎಂಬುದನ್ನು ಪ್ರದರ್ಶಿಸಿದ್ದಾರೆ. ಕಪಿಲ್ ಶೋ ವೇಳೆ ಸಹಜವಾಗಿಯೇ ಅವರು ತಮ್ಮ ಕಾಮಿಡಿ ಟೈಮಿಂಗ್ಸ್‌ನಿಂದ ಎಲ್ಲರನ್ನೂ ನಕ್ಕುನಗಿಸುತ್ತಾರೆ. 

ನಟಿ ಐಶ್ವರ್ಯಾ ರೈ ಅವರಿಗೆ ಕಪಿಲ್ ತಮ್ಮ ಶೋದಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಐಶ್ವರ್ಯಾ ಜೀ, ನಿಮ್ಮ ಮದುವೆಯ ಸಮಯದಲ್ಲಿ ನಿಮಗೆ ಬಂದಿರುವ ಗಿಫ್ಟ್ ನೋಡಿದಾಗ, ನಿಮಗೆ ಅದರಲ್ಲಿ ಯಾವುದಾದರೂ ಗಿಫ್ಟ್ ಬಗ್ಗೆ ಇದು ಯಾರು ಕೊಟ್ಟಿರಬಹುದು, ಯಾಕೆ ಕೊಟ್ಟಿರಬಹುದು ಎಂಬ ಪ್ರಶ್ನೆಯೇನಾದ್ರೂ ಮನದಲ್ಲಿ ಮೂಡಿತ್ತಾ' ಎಂದು ಕೇಳಿದ್ದಾರೆ. ಪ್ರಶ್ನೆ ಕೇಳುತ್ತ ನಗುತ್ತಿದ್ದ ಕಪಿಲ್ ಅವರನ್ನು ನೋಡಿ ನಟಿ ಐಶೂ, 'ನೀವು ನಗತ್ತಿದ್ದೀರಾ ಎಂದರೆ ನಿಮಗೆ ಉತ್ತರ ಗೊತ್ತಿದೆ ಎನ್ನಬಹುದು' ಎಂದಿದ್ದಾರೆ. 

ಕಿಚ್ಚ ಸುದೀಪ್ 'ನಂದಿ' ನಟಿ ಸಿಂಧು ಮೆನನ್ ಲಂಡನ್‌ನಲ್ಲಿ ಏನ್ಮಾಡ್ತಿದಾರೆ; ಯಾಕೆ ನಟಿಸ್ತಿಲ್ಲ?

ಐಶ್ವರ್ಯಾ ರೈ ಉತ್ತರ ಕೇಳಿದ ಬಳಿಕ ಕಪಿಲ್ ಇನ್ನು ಸೀಕ್ರೆಟ್ ಆಗಿ ಇಡುವುದರಲ್ಲಿ ಯಾವುದೇ ಪ್ರಯೋಜನ ಇಲ್ಲ ಎಂಬಂತೆ, 'ಹೌದು, ನಾನು ಅಂತಹ ಒಂದು ಗಿಫ್ಟ್ ಕಳಿಸಿದ್ದೆ. ಅಂದು ನನ್ನ ಬಳಿ ಸಾಕಷ್ಟು ಹಣ ಇರಲಿಲ್ಲ. ನಾನು ಒಂದು ಗಿಫ್ಟ್ ಕೂಪನ್ ಕಾರ್ಡ್‌ ಕಳಿಸಿ ಒಂದು ಗ್ಲಾಸ್ ನೀರು, ಒಂದು ಗ್ಲಾಸ್ ಬಿಯರ್ ಮೂಲಕ ಮದುವೆ ಸಂಭ್ರಮ ಆಚರಿಸಿ ಮಿಸ್ಟರ್ ಅಂಡ್ ಮಿಸಸ್ ಬಚ್ಚನ್‌ಜೀ' ಎಂದು ಬರೆದಿದ್ದೆ ಎಂದು ಹೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ. 

ಉಪೇಂದ್ರರ 'ಎ' ಚಿತ್ರ ಪ್ರದರ್ಶನದ ವೇಳೆ ಕಾವೇರಿ ಥಿಯೇಟರ್‌ಗೆ ಪೊಲೀಸರು ಬಂದಿದ್ದೇಕೆ?

ಐಶೂ ಅವರಂತೂ ಕೊನೆಗೂ ನನಗೆ ಗೊತ್ತಿರದಿದ್ದ ಒಂದು ಸಂಗತಿ ಇಂದು ಗೊತ್ತಾಯ್ತು. ಆದರೆ, ಗುಟ್ಟು ರಟ್ಟಾಗುತ್ತೆ ಎಂಬ ಗಾದೆಯಂತೆ ನಿಮ್ಮ ವಿಷಯದಲ್ಲೂ ಹಾಗೇ ಆಯ್ತು ಎಂದಿದ್ದಾರೆ. ಅದಕ್ಕೆ ಕಪಿಲ್, 'ನನ್ನ ಗಿಫ್ಟ್ ರಹಸ್ಯ ನಿಮಗೆ ಗೊತ್ತಾಗಿದೆಯೋ ಇಲ್ಲವೋ ಎಂಬುದು ನನಗೆ ದೊಡ್ಡ ಸೀಕ್ರೆಟ್ ಆಗಿತ್ತು. ಈಗ ಕ್ಲಿಯರ್ ಆಯ್ತು, ಅದು ಇಷ್ಟು ದಿನವೂ ರಹಸ್ಯವಾಗಿಯೇ ಇತ್ತು. ಆದರೆ, ಕೊನೆಗೂ ನಾನೇ ನನ್ನ ಗುಟ್ಟನ್ನು ರಟ್ಟು ಮಾಡಬೇಕಾಯ್ತು' ಎಂದಿದ್ದಾರೆ. 

ಬಾಲಿವುಡ್‌ನಲ್ಲಿ ಕೋಮಲ್ ಜಾ ಬಿರುಗಾಳಿ ಶುರು; ಬೇರೆ ಭಾಷೆಯ ಮೇಲೂ ಕಣ್ಣು!

Latest Videos
Follow Us:
Download App:
  • android
  • ios