ಬಾಲಿವುಡ್ ನಟಿ ಆರ್ಯ ಬ್ಯಾನರ್ಜಿ(35) ಸೌತ್ ಕೊಲ್ಕತ್ತಾದ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ದಿ ಡರ್ಟಿ ಪಿಕ್ಚರ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ ಈಕೆ ಒಂಟಿಯಾಗಿ ಜೀವಿಸುತ್ತಿದ್ದರು.

ಆರ್ಯ ಬ್ಯಾನರ್ಜಿ ನಟಿಯ ಸ್ಕ್ರೀನ್‌ ನೇಮ್ ಆಗಿದ್ದು, ಆಕೆಯ ನಿಜವಾದ ಹೆಸರು ದೇವದತ್ತಾ ಬ್ಯಾನರ್ಜಿ. ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ ನಿಖಿಲ್ ಬ್ಯಾನರ್ಜಿ ಅವರ ಪುತ್ರಿ ಈಕೆ.

Mr Nagsಗೆ ಕೂಡಿ ಬಂತು ಕಂಕಣ ಭಾಗ್ಯ; ಡ್ಯಾನಿಶ್‌ ಲೈಫಲ್ಲಿ ಹೊಸ ಬೆಳಕು!

ನಟಿಯ ಮೂಗಿನಿಂದ ರಕ್ತ ಸುರಿಯುತ್ತಿದ್ದು, ವಾಂತಿ ಮಾಡಿದ್ದಾರೆ ಎಂದು ಫೊರೆನ್ಸಿಕ್ ತಜ್ಞರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

ಬ್ಯಾನರ್ಜಿ ಒಂಟಿಯಾಗಿ ಬದುಕುತ್ತಿದ್ದರು. ಒಂದು ನಾಯಿ ಮಾತ್ರ ಅವರ ಜೊತೆಗಿತ್ತು. ಆಕೆಯ ಸಹೋದರಿ ಸಿಂಗಾಪುರ್‌ನಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಬಹಳಷ್ಟು ಖಾಲಿ ಮದ್ಯದ ಬಾಟಲಿಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.