ನಟ, ನಿರೂಪಕ, ಸ್ಟ್ಯಾಂಡ್‌ ಅಪ್ ಕಾಮಿಡಿಯನ್‌ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಡ್ಯಾನಿಶ್‌ ಸೇಠ್‌ ಇಷ್ಟು ದಿನಗಳ ಕಾಲ ಸಿಂಗಲ್‌ ರೆಡಿ ಟು ಮಿಂಗಲ್ ಆಗಿದ್ದರು ಆದರೀಗ ಬಾಳಿಗೆ ಬೆಳಕಾಗಿ ಎಂಟ್ರಿ ಕೊಟ್ಟ ಹುಡುಗಿ ಬಗ್ಗೆ ರಿವೀಲ್ ಮಾಡಿದ್ದಾರೆ. 

ಆರ್‌ಸಿಬಿ ತಂಡದಲ್ಲಿ ಡ್ಯಾನಿಶ್‌ ಸೇಠ್‌ಗೇನು ಕೆಲಸ? 

ಹೌದು! ಡ್ಯಾನಿಸ್‌ ಸೇಠ್‌ ಮದುವೆಯಾಗುತ್ತಿರುವ ಹುಡುಗಿ ಹೆಸರು ಅನ್ಯಾ ರಂಗಸ್ವಾಮಿ. 'ಎಲ್ಲರಿಗೂ ನಮಸ್ಕಾರ, ಈಕೆ ನನಗೆ 'An Yes' ಎಂದು ಹೇಳಿದ್ದಾರೆ. ನನ್ನನ್ನು ಒಪ್ಪಿಕೊಂಡು ನನ್ನ ಲೈಫ್‌ಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್‌' ಎಂದು ಡ್ಯಾನಿಶ್ ಬರೆದುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Danish sait (@danishsait)

ಅನ್ಯಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಫೇಮಸ್. ವೃತ್ತಿಯಲ್ಲಿ ಗ್ರಾಫಿಕ್‌ ಡಿಸೈನರ್, ಟ್ರ್ಯಾವಲ್ ಮಾಡುವುದೆಂದರೆ ತುಂಬಾನೇ ಇಷ್ಟ ಪಡುತ್ತಾರೆ ಹಾಗೂ ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಾರೆ. ಅನ್ಯಾ ಮುಂಬೈನಲ್ಲಿ ನೆಲೆಸಿದ್ದಾರೆ. ಇವರಿಬ್ಬರು ಒಂದಾಗಿರುವ ವಿಚಾರ ತಿಳಿದ ತಕ್ಷಣವೇ ಕಮೆಂಟ್‌ನಲ್ಲಿ ಅಭಿಮಾನಿಗಳು, ಸ್ನೇಹಿತರು ಹಾಗೂ ಇನ್ನಿತರ ಸ್ಟಾರ್ ನಟರು ಶುಭಾಶಯಗಳನ್ನು ತಿಳಿಸಿದ್ದಾರೆ.

ಡ್ಯಾನಿಶ್ ಸೈಟ್ ಯಾರು? ಫ್ರೆಂಚ್ ಬಿರಿಯಾನಿ ನೋಡಿದ್ದೀರಾ? 

ಮಿಸ್ಟರ್‌ ನಾಗ್ಸ್‌ ವೇಷದಲ್ಲಿ IPL ನಿರೂಪಣೆ ಮಾಡುವ ಡ್ಯಾನಿಶ್‌ ಇತ್ತೀಚಿಗೆ ಪನ್ನಗಾ ಭರಣ ನಿರ್ದೇಶನದ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದರು, ಚಿತ್ರದ ಎರಡನೇ ಭಾಗ ಈಗ ವೆಬ್‌ ಸೀರಿಸ್‌ ರೀತಿಯಲ್ಲಿ ಬರಲಿದೆ.  ರಕ್ಷಿತ್ ಶೆಟ್ಟಿ ಜೊತೆ '777 ಚಾರ್ಲಿ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.