ಬಾಲಿವುಡ್ ನಟ, ನಟಿ ಮಲೈಕಾ ಅರೋರಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮೊದಲೇ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ನಟ ಈಗ ಹೋಂ ಐಸೋಲೇಷನ್ನಲ್ಲಿದ್ದಾರೆ.

ಇನ್‌ಸ್ಟಾಗ್ರಾಂ ಮೂಲಕ ಈ ಮಾಹಿತಿ ಹಂಚಿಕೊಂಡ ನಟ, ನನಗೆ ಕೊರೋನಾ ಪಾಟಿಸಿವ್ ದೃಢಪಟ್ಟಿದೆ. ನಾನು ಆರಾಮವಾಗಿದ್ದೇನೆ. ಕೆಲವು ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ.

ಕೊರೋನಾದಿಂದ 11 ದಿನದ ಅಂತರದಲ್ಲಿ ಇಬ್ಬರು ಸಹೋದರರ ಕಳೆದುಕೊಂಡ ಹಿರಿಯ ನಟ

ನಾನು ವೈದ್ಯರ ಮತ್ತು ಅಧಿಕಾರಿಗಳ ಸೂಚನೆ ಮೇರೆಗೆ ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ನಿಮಗೆ ಅಪ್‌ಡೇಟ್ ಮಾಡುತ್ತೇನೆ. ಸಮಾಜ ಈ ವೈರಸ್ ಗೆದ್ದು ಉಳಿಯುತ್ತದೆ ಎಂಬ ವಿಶ್ವಾಸವಿದೆ. ಪ್ರೀತಿಯಿಂದ ಅರ್ಜುನ್, ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 

🙏🏽

A post shared by Arjun Kapoor (@arjunkapoor) on Sep 6, 2020 at 1:33am PDT

ಈ ಹಿಂದೆ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಚಿಕಿತ್ಸೆ ನಂತರ ಎಲ್ಲರೂ ಗುಣಮುಖರಾಗಿ ಮನೆಗೆ ಮರಳಿದ್ದರು. ಮೇ ತಿಂಗಳಲ್ಲಿ ಅರ್ಜುನ್ ತಂದೆ ಬೋನಿ ಕಪೂರ್ ಮನೆಯ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿತ್ತು. 

ರಷ್ಯಾದ ಕೊರೋನಾ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ; ಪ್ರಯೋಗದಿಂದ ಸಾಬೀತು!

ಲಾಕ್‌ಡೌನ್ ಸಂದರ್ಭ ಅರ್ಜುನ್ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ಗಳನ್ನು ಶೇರ್ ಮಾಡುತ್ತಲೇ ಇದ್ದರು. ಅರ್ಜುನ್ ಸೈಫ್ ಅಲಿ ಖಾನ್ ಅಭಿನಯದ ಭೂತ್ ಪೊಲೀಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.