ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರ ಎರಡನೇ ಸಹೋದರ ಇಶಾನ್ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ದಿಲೀಪ್ ಅವರ ಸಹೋದರ ಅಸ್ಲಾಂ ಖಾನ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಆಗಸ್ಟ್ 21ರಂದು ಮೃತಪಟ್ಟಿದ್ದರು.

ದಿಲೀಪ್ ಅವರ ಇಬ್ಬರೂ ಸಹೋದರರಿಗೂ ಕೊರೋನಾ ಪಾಸಿಟಿವ್ ಬಂದು ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರಲ್ಲಿಯೂ ಆಕ್ಸಿಜನ್ ಲೆವೆಲ್ ಕಡಿಮೆ ಇತ್ತು. ಇದೀಗ ಇಶಾನ್ ಖಾನ್ ಕೂಡಾ ಮೃತಪಟ್ಟಿದ್ದು, ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಖ್ಯಾತ ಕುಸ್ತಿಪಟು ವಿನೇಶ್‌ ಪೋಗಾಟ್‌ ಕೊರೋನಾ ಸೋಂಕಿಂದ ಚೇತರಿಕೆ

ದಿಲೀಪ್ ಕುಮಾರ್ ಅವರ ಇಬ್ಬರೂ ಸಹೋದರರ ಸ್ಥಿತಿ ಗಂಭೀರವಾಗಿತ್ತು. ಕುಟುಂಬಸ್ಥರಿಗೂ ಇಬ್ಬರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂಬುದರ ಅರಿವಿತ್ತು. ಲೀಲಾವತಿ ಆಸ್ಪತ್ರೆಯಲ್ಲಿ ನಟನ ಸಹೋದರರ ಚಿಕಿತ್ಸೆಯ ಜವಾಬ್ದಾರಿ ಹೊತ್ತುಕೊಂಡಿದ್ದ ವೈದ್ಯ ಜಲೀಲ್ ಪಾರ್ಕಕರ್ ಸಾವು ದೃಢಪಡಿಸಿದ್ದಾರೆ.  90 ವರ್ಷದ ಇಶಾನ್ ಖಾನ್‌ಗೆ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯೂ ಇತ್ತು.

ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!

ಹಿರಿಯ ನಟ ದಿಲೀಪ್ ಇದೀಗ ಕೊರೋನಾದಿಂದಾಗಿ ಇಬ್ಬರು ಸಹೋದರರನ್ನು ಕಳೆದುಕೊಂಡಿದ್ದಾರೆ. ಅದೂ ಬರೀ 11 ದಿನಗಳ ಅಂತರದಲ್ಲಿ. ಎಪ್ರಿಲ್‌ನಲ್ಲಿ ನಟ ದಿಲೀಪ್ ಅವರು ಮನೆಯಲ್ಲೇ ಸೆಲ್ಫ್ ಐಸೋಲೇಟ್ ಆಗಿದ್ದರು. ಪತ್ನಿ ಸೈರಾ ಬಾನು ತಮ್ಮನ್ನು ನೋಡಿಕೊಳ್ಲುತ್ತಿರುವುದಾಗಿ ಹಿರಿಯ ನಟ ಹೇಳಿದ್ದರು.