ರಷ್ಯಾದ ಕೊರೋನಾ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ; ಪ್ರಯೋಗದಿಂದ ಸಾಬೀತು!
ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆ ತಯಾರಿಸಲಾಗಿದೆ ಅನ್ನೋ ರಷ್ಯಾದ ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು. ಸುದೀರ್ಘ ಪ್ರಯೋಗ ಮಾಡದ ಈ ಲಸಿಕೆ ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆಗಳು ಕೇಳಿ ಬಂದಿತ್ತು. ಇದೀಗ ಪ್ರಾಥಮಿಕ ಪ್ರಯೋಗದ ವರದಿ ಬಿಡುಗಡೆಯಾಗಿದೆ. ಇಷ್ಟೇ ಅಲ್ಲ ಉತ್ತಮ ಫಲಿತಾಂಶ ಹೊರಬಿದ್ದಿದೆ.
ಮಾಸ್ಕೋ(ಸೆ.05): ರಷ್ಯಾದಲ್ಲಿ ಸಂಶೋಧನೆ ಮಾಡಿರುವ ಕೊರೋನಾ ಲಸಿಕೆಯಾದ ಸ್ಪಟ್ನಿಕ್ ವಿ ಸುರಕ್ಷಿತ ಹಾಗೂ ಪರಿಣಾಮಕಾರಿ ಅನ್ನೋ ಮಾಹಿತಿ ಪ್ರಯೋಗದಿಂದ ಹೊರಬಿದ್ದಿದೆ. ಆರಂಭಿಕ ಹಂತದಲ್ಲಿ ಸಣ್ಮ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗದಲ್ಲಿ ಮಾನವ ದೇಹದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡುವ ಶಕ್ತಿಯನ್ನು ವೃದ್ಧಿಸಿದೆ. ಕೇವಲ 3 ವಾರದಲ್ಲಿ ಸೋಂಕಿತ ಗುಣಮುಖರಾಗಲಿದ್ದಾರೆ ಎಂದು ಪ್ರಯೋಗ ಖಚಿತಪಡಿಸಿದೆ.
ಕೊರೋನಾ ಕಾಟ: ಬೆಂಗಳೂರಲ್ಲಿ 40000 ದಾಟಿದ ಸಕ್ರಿಯ ಕೇಸ್
ರಷ್ಯಾ ಸಂಶೋಧಿಸಿದ ಸ್ಫಟ್ನಿಕ್ ವಿ ಕೊರೋನಾ ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ 18 ರಿಂದ 60 ವರ್ಷದೊಳಗಿನ 39 ಆರೋಗ್ಯವಂತರ ಮೇಲೆ ಪ್ರಯೋಗ ಮಾಡಲಾಗಿದೆ. ಸ್ಫಟ್ನಿಕ್ ವಿ ಲಸಿಕೆಯನ್ನು ಎರಡು ಭಾಗಗಳಾಗಿ ಮಾಡಿ 39 ವಯಸ್ಕರ ಮೇಲೆ ಪ್ರಯೋಗ ಮಾಡಲಾಗಿದೆ. ಆರಂಭಿಕ ಭಾಗದ ಲಸಿಕೆ ನೀಡಿದ 21 ದಿನಗಳ ಬಳಿಕ 2ನೇ ಹಂತದ ಲಸಿಕೆ ನೀಡಲಾಗಿದೆ.
ರೆಸ್ಲಿಂಗ್ ಸೂಪರ್ ಸ್ಟಾರ್, ನಟ ರಾಕ್ ಜಾನ್ಸನ್ ಕುಟುಂಬಕ್ಕೆ ಕೊರೋನಾ ಪಾಸಿಟಿವ್
42 ದಿನ ಲಸಿಕೆ ಪ್ರಯೋಗಿಸಿದವರನ್ನು ಕೂಲಂಕೂಷವಾಗಿ ತಪಾಸಣೆ ಮಾಡಲಾಗಿದೆ. ದಿನದ 24 ಗಂಟೆಯೂ ತಜ್ಞರ ತಂಡ ಪರಿಶೀಲನೆ ನಡೆಸಿದೆ. ಲಸಿಕೆ ಪ್ರಯೋಗದ ಮೂರೇ ವಾರಗಳಲ್ಲಿ ಮಾನವದ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪಾದಿಸಿದೆ. ಕೊರೋನಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಮಾನವನ ದೇಹನ್ನು ತಯಾರಿ ಮಾಡಿದೆ ಎಂದು ಅಧ್ಯಯನ ವರದಿ ಹೇಳಿದೆ.
ಪ್ರಯೋಗ ಮಾಡಿದವರು ಆರೋಗ್ಯವಾಗಿದ್ದು ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಹೀಗಾಗಿ ರಷ್ಯಾ ತಜ್ಞರ ತಂಡ ಸ್ಫಟ್ನಿಕ್ ವಿ ಕೊರೋನಾ ಲಸಿಕೆ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂದಿದೆ. ಆದರೆ ತಜ್ಞರು ಸಣ್ಣ ಪ್ರಮಾಣದಲ್ಲಿ ಮಾಡಿದ ಪ್ರಯೋಗದಲ್ಲಿ ಬಂದ ಫಲಿತಾಂಶದ ಮೇಲೆ ಲಸಿಕೆಯ ಸುರಕ್ಷಿತ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದಿದೆ.
ಮೆಡಿಕಲ್ ರಿಸರ್ಚ್ ಸೂಚಿಸಿದ ಹಂತ ಹಂತದ ಪ್ರಯೋಗಗಳ ಅವಶ್ಯಕತೆ ಇದೆ. ಕೇವಲ 39 ಮಂದಿಗೆ ಪ್ರಯೋಗ ಮಾಡಿ ಲಸಿಕೆ ವರದಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತ ರಷ್ಯಾ 40,000 ಮಂದಿಗೆ ಲಸಿಕೆ ಪ್ರಯೋಗ ಮಾಡಲು ಮುಂದಾಗಿದೆ.