ಬಾಲಿವುಡ್ ನಟ ಅನ್ನು ಕಪೂರ್‌ಗೆ ತೀವ್ರ ಎದೆನೋವು, ಆಸ್ಪತ್ರೆ ದಾಖಲು!
ಬಾಲಿವುಡ್ ನಟ ಅನ್ನು ಕಪೂರ್ ಎದೆನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ದೆಹಲಿಯ ಗಂಗಾ ರಾಮ್ ಆಸ್ಪತ್ರೆಯಲ್ಲಿಿ ಅನ್ನು ಕಪೂರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ನವದಹೆಲಿ(ಜ.26): ಬಾಲಿವುಡ್ ನಟ ಅನ್ನು ಕಪೂರ್ ಎದೆನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಅನ್ನು ಕಪೂರ್‌ನ್ನು ದೆಹಲಿ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟನ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್‌ನಲ್ಲಿ ಹೇಳಲಾಗಿದೆ.
ಗಂಗಾರಾಮ್ ಆಸ್ಪತ್ರೆ ವೈದ್ಯ ಡಾ. ಅಜಯ್ ಸ್ವರೂಪ್ ಈ ಕುರಿತು ಮಾಹಿತಿ ನೀಡಿದ್ದಾರೆ. ಅನ್ನು ಕಪೂರ್ ಅವರಿಗೆ ಎದೆನೋವಿನ ಕಾರಣದಿಂದ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅನ್ನು ಕಪೂರ್ ಅವರಿಗೆ ಕಾರ್ಡಿಯಾಲಜಿಸ್ಟ್ ವೈದ್ಯ ಸುಶಾಂತ್ ವತ್ತಾಲ್ ಅವರ ತಂಡ ಚಿಕಿತ್ಸೆ ನೀಡುತ್ತಿದೆ. ಆರೋಗ್ಯ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದಾರೆ.
ಶೂಟಿಂಗಲ್ಲಿ ನಡೆದ ಅವಘಡದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ನಟ ವಿಜಯ್ ಈಗ ಹೇಗಿದ್ದಾರೆ?
ಅನ್ನು ಕಪೂರ್ ಆಸ್ಪತ್ರೆ ದಾಖಲಾಗದ ಮಾಹಿತಿ ತಿಳಿದು ಬಾಲಿವುಡ್ ನಟ ನಟಿಯರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಅನ್ನು ಕಪೂರ್ ಕೇವಲ ನಟನಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಜೊತೆಗೆ ಗಾಯಕನಾಗಿ, ನಿರ್ದೇಶಕನಾಗಿ, ರೇಡಿಯೋ ಜಾಕಿಯಾಗಿ, ಟಿವಿ ನಿರೂಪಕನಾಗಿ ಗಮನಸೆಳೆದಿದ್ದಾರೆ.
ವಿಕ್ಕಿ ಡಾನರ್ ಚಿತ್ರದ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅನ್ನು ಕಪೂರ್, ಬಾಲಿವುಡ್, ಒಟಿಟಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹೆಸರುಗಳಿಸಿದ್ದಾರೆ ಹಮ್, ಏಕ್ ರುಕಾ ಹುವಾ ಫೈಸ್ಲಾ, ರಾಮ್ ಲಖನ್, ಗಯಾಲ್, ಹಮ್ ಕಿಸಿಸೆ ಕಮ್ ನಹಿ, ಐತ್ರಾಜ್, 7 ಖೂನ್ ಮಾಫ್, ಜಾಲಿ ಎಲ್‌ಎಲ್‌ಬಿ 2 ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಕ್ರಾಶ್ ಕೋರ್ಸ್ ಅನ್ನೋ ವೆಬ್ ಸಿರೀಸ್ ಮೂಲಕವೂ ಜನಪ್ರಿಯರಾಗಿದ್ದಾರೆ.
ಫೆಬ್ರವರಿ 20, 1956ರಲ್ಲಿ ಭೂಪಾಲ್‌ನಲ್ಲಿ ಹುಟ್ಟಿದ ಅನ್ನು ಕಪೂರ್, ಪೇಶಾವರದ ನಂಟು ಹೊಂದಿದ್ದಾರೆ. ಇನ್ನು ಅನ್ನು ಕಪೂರ್ ತಾತ, ಕೃಪಾ ರಾಮ್ ಕಪೂರ್ ಬ್ರಿಟಿಷ್ ಸೇನೆಯಲ್ಲಿ ವೈದ್ಯರಾಗಿದ್ದರು. ಇವರ ಮುತ್ತಾತ ಲಾಲಾ ಗಂಗಾ ರಾಮ್ ಕಪೂರ್, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
2ನೇ ಮದುವೆ ವದಂತಿ ವೈರಲ್; ಅಸಮಾಧಾನ ಹೊರಹಾಕಿದ ನಟಿ ಪ್ರೇಮಾ
ಅನ್ನು ಕಪೂರ್ 1979ರಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಕಾಲಾ ಪಥ್ಥರ್ ಚಿತ್ರದ ಮೂಲಕ ಬಾಲಿವುಡ್ ಎಂಟ್ರಿ ಕೊಟ್ಟರು. ಅಭಯ್ ಅನ್ನೋ ಫೀಚರ್ಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಕ್ಕಳ ಚಿತ್ರಕ್ಕೆ 1995ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಅನ್ನೋ ರಾಷ್ಟ್ರೀಯ ಪುರಸ್ಕಾರವೂ ಲಭಿಸಿದೆ.