‘ಪಿಚ್ಚೈಕಾರನ್ 2’ ಚಿತ್ರೀಕರಣದ ವೇಳೆ ನಡೆದ ಬೋಟ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ವಿಜಯ್ ಆಂಟನಿ ಸ್ಥಿತಿ ಈಗ ಹೇಗಿದೆ?
ಇದೇ 18ರಂದು ಮಲೇಷ್ಯಾದಲ್ಲಿ ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಭಾರಿ ಅವಘಡದಲ್ಲಿ ತಮಿಳು ನಟ ವಿಜಯ್ ಆಂಟನಿ (Vijay Antony) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಗ್ಗೆ ವರದಿಯಾಗಿತ್ತು. ಸದ್ಯ ಅವರು ಮಲೇಷ್ಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲೇಷ್ಯಾದಲ್ಲಿ ವಿಜಯ್ ಅವರು ‘ಪಿಚ್ಚೈಕಾರನ್ 2’ (ಭಿಕ್ಷುಕ) ಸಿನಿಮಾ ಶೂಟಿಂಗ್ (Shooting)ನಲ್ಲಿದ್ದಾಗ ನಡೆದ ಘಟನೆಯಲ್ಲಿ ವಿಜಯ್ ಅವರಿಗೆ ಗಂಭೀರ ಗಾಯಗಳಾಗಿವೆ. ಈ ಅಪಘಾತದಲ್ಲಿ ವಿಜಯ್ (Vijay Antony) ಅವರ ಹಲ್ಲು ಮತ್ತು ದವಡೆಗೆ ತೀವ್ರತರಹದ ಪೆಟ್ಟು ಬಿದ್ದಿದ್ದು. ಮೂಳೆಗಳು ಮುರಿದಿವೆ ಎನ್ನಲಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ (shooting)ಮಾಡಲಾಗುತ್ತಿತ್ತು. ಒಂದು ದೋಣಿ ಮತ್ತೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಅದಾಗಿತ್ತು. ರಭಸವಾಗಿ ದೋಣಿಗಳು ಬರುವ ವೇಳೆಯಲ್ಲಿ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಚಿತ್ರದ ನಾಯಕಿ ಕಾವ್ಯಾ ತಾಪರ್ (kavya Tapar) ಅವರು ಒಂದು ಬೋಟ್‌ನಲ್ಲಿದ್ದರು.
ಆಲಿಯಾ ಭಟ್ ಮತ್ತೊಮ್ಮೆ ಗರ್ಭಿಣಿನಾ? ಫೋಟೋ ಶೇರ್ ಮಾಡಿ ತಬ್ಬಿಬ್ಬುಗೊಳಿಸಿದ ನಟಿ
'ವಿಜಯ್ ಮತ್ತು ನಟಿ ಕಾವ್ಯಾ ತಾಪರ್ ಅವರು ಒಂದು ಬೋಟ್‌ನಲ್ಲಿ ಒಟ್ಟಿಗೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬೋಟ್ ಅನ್ನು ವಿಜಯ್ ಚಲಾಯಿಸುತ್ತಿದ್ದರು. ಮತ್ತೊಂದು ದೊಡ್ಡ ಬೋಟ್‌ನಲ್ಲಿ ಕ್ಯಾಮೆರಾ (Camera)ತಂಡವಿತ್ತು. ಕ್ಯಾಮೆರಾದ ಜೊತೆಗೆ ಇಡೀ ಸಿನಿಮಾ ತಂಡದ ಸದಸ್ಯರು ಆ ಇನ್ನೊಂದು ಬೋಟ್‌ನಲ್ಲಿ ಇದ್ದರು. ಈ ವೇಳೆ ಅನಾಹುತ ಸಂಭವಿಸಿದೆ. ವಿಜಯ್ ಅವರು ಬೋಟ್ ಚಲಾಯಿಸುತ್ತಿದ್ದ ವೇಳೆ ಅದು ನಿಯಂತ್ರಣ ತಪ್ಪಿದೆ. ಅದು ಚಿತ್ರತಂಡವಿದ್ದ ಮತ್ತೊಂದು ದೊಡ್ಡ ಬೋಟ್‌ಗೆ ಡಿಕ್ಕಿ ಹೊಡೆದಿದೆ. ವಿಜಯ್ ಮತ್ತು ಕಾವ್ಯಾ ನೀರಿಗೆ ಬಿದ್ದರು. ಆ ಕ್ಷಣ ಅಲ್ಲಿದ್ದ ಸಿಬ್ಬಂದಿಗೆ ಅದು ಆಘಾತವನ್ನುಂಟು ಮಾಡಿತು. ತಕ್ಷಣವೇ ವಿಜಯ್ ಮತ್ತು ಕಾವ್ಯಾ ಅವರನ್ನು ರಕ್ಷಿಸಿದರು ಎಂದು ನಿರ್ಮಾಪಕ ಧನಂಜಯನ್ ಗೋವಿಂದ್ ಮಾಹಿತಿ ನೀಡಿದ್ದಾರೆ.
ಘಟನೆ ನಡೆದಾಗಿನಿಂದಲೂ ವಿಜಯ್ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಟನಿಗಾಗಿ ಪ್ರಾರ್ಥಿಸುತ್ತಲೇ ಇದ್ದರು. ವಿಜಯ್ ಅವರ ಕುಟುಂಬಸ್ಥರು ಕೂಡ ಆತಂಕದಲ್ಲಿದ್ದರು. ಇದೀಗ ಘಟನೆ ಎಂಟು ದಿನಗಳಾದ ಬಳಿಕ ಮೊದಲ ಬಾರಿಗೆ ತಮ್ಮ ಆರೋಗ್ಯದ ಕುರಿತು ಖುದ್ದು ವಿಜಯ್ ಅವರು ಸಾಮಾಜಿಕ ಜಾತಲಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಪ್ರೀತಿಯ ಸ್ನೇಹಿತರೇ, ನಾನು ಪಿಚ್ಚೈಕಾರನ್ ಚಿತ್ರೀಕರಣದ ವೇಳೆ ಆಗಿದ್ದ ತೀವ್ರ ಮೂಗು ಹಾಗೂ ಗಲ್ಲದ ಗಾಯಗಳಿಂದ ಚೇತರಿಸಿಕೊಂಡಿದ್ದೇನೆ. ಈಗ ತಾನೇ ದೊಡ್ಡ ಶಸ್ತ್ರ ಚಿಕಿತ್ಸೆ ಮುಗಿದಿದ್ದು, ನಿಮ್ಮ ಜತೆ ಆದಷ್ಟು ಬೇಗ ಮಾತನಾಡಲಿದ್ದೇನೆ. ನನ್ನ ಆರೋಗ್ಯದ ಕುರಿತು ನೀವು ತೋರಿದ ಕಾಳಜಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು" ಎಂದು ತಾವು ಥಂಬ್ ಅಪ್ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಎರಡು ಮೇಜರ್ ಸರ್ಜರಿ ಬಳಿಕ ಸ್ಥಿತಿ ಸುಧಾರಿಸುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.
ಸ್ಯಾಂಡಲ್ವುಡ್ಗೆ ಶಾಕ್: 'ಲೀಡರ್' ಚಿತ್ರ ಖ್ಯಾತಿಯ ಯುವ ನಟ ಧನುಷ್ ಇನ್ನಿಲ್ಲ!
ಇದನ್ನು ನೋಡಿದ ವಿಜಯ್ ಅಭಿಮಾನಿಗಳು ಸಂತಸದಿಂದ ಕುಣಿದಾಡಿದ್ದಾರೆ. ಆದಷ್ಟು ಬೇಗ ಡಿಸ್ಚಾರ್ಜ್ ಆಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಹಾರೈಸಿದ್ದಾರೆ. ಪಿಚ್ಚೈಕಾರನ್ 2 (Pichaikkaran 2)ಸಿನಿಮಾವನ್ನು ಬೇಸಿಗೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಎರಡೇ ದಿನಗಳ ಅಂತರದಲ್ಲಿ ಈ ಅನಾಹುತ ನಡೆದಿತ್ತು. 2016ರಲ್ಲಿ ಬಿಡುಗಡೆಗೊಂಡಿದ್ದ ಪಿಚ್ಚೈಕಾರನ್ ತೆಲುಗಿಗೆ ಬಿಚ್ಚಗಾಡು ಎಂಬ ಶೀರ್ಷಿಕೆ ಅಡಿಯಲ್ಲಿ ಡಬ್ ಆಗಿತ್ತು ಹಾಗೂ ಕನ್ನಡದಲ್ಲಿ ಅಮ್ಮ ಐ ಲವ್ ಯೂ ಆಗಿ ರಿಮೇಕ್ ಆಗಿತ್ತು. ಚಿತ್ರ ದೊಡ್ಡ ಯಶಸ್ಸು ಸಾಧಿಸಿದ ಕಾರಣ ವಿಜಯ್ ಆಂಟೊನಿ ಈ ಚಿತ್ರದ ಸೀಕ್ವೆಲ್ ಅನ್ನು ಬರೋಬ್ಬರಿ 8 ವರ್ಷಗಳ ಬಳಿಕ ತೆರೆ ಮೇಲೆ ತರಲು ಮುಂದಾಗಿದ್ದಾರೆ.
