Asianet Suvarna News Asianet Suvarna News

ಅಭಿಷೇಕ್ ಬಚ್ಚನ್‌ಗೆ ಎಸ್‌ಬಿಐ ಬ್ಯಾಂಕ್‌ನಿಂದ ಪ್ರತಿ ತಿಂಗಳು ಬರುತ್ತೆ 18.9 ಲಕ್ಷ ರೂ!

ನಟ ಅಭಿಷೇಕ್ ಬಚ್ಚನ್‌ಗೆ ಪ್ರತಿ ತಿಂಗಳು ಎಸ್‌ಬಿಐ ಬ್ಯಾಂಕ್‌ನಿಂದ 18.9 ಲಕ್ಷ ರೂ ಬರಲಿದೆ. 5 ವರ್ಷದ ಬಳಿಕ ಈ ಮೊತ್ತ 29.5 ಲಕ್ಷ ರೂಪಾಯಿಗೆ ಹೆಚ್ಚಳವಾದರೆ, ಮುುಂದಿನ 5 ವರ್ಷ ಇದು ದುಪ್ಪಟ್ಟಾಗಲಿದೆ. ಬಚ್ಚನ್ ಜೇಬು ತುಂಬಿಸುತ್ತಿರುವ ಈ ಆದಾಯದ ರಹಸ್ಯವೇನು?

Bollywood abhishek bachchan receives income rs 18 lakh per month from SBI ckm
Author
First Published Oct 5, 2024, 6:47 PM IST | Last Updated Oct 5, 2024, 6:47 PM IST

ಮುಂಬೈ(ಅ.5)  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸೂಪರ್ ಹಿಟ್ ಚಿತ್ರಗಳನ್ನು ನೀಡಲು ವಿಫಲರಾಗಿದ್ದಾರೆ. ಗುರು, ಧೂಮ್, ಬಂಟ್ಲಿ ಔರ್ ಬಬ್ಲಿ ರೀತಿಯ ಬಾಕ್ಸ್ ಆಫೀಸ್ ಹಿಟ್ ಚಿತ್ರಗಳು ಇತ್ತೀಚಿನ ವರ್ಷಗಳಲ್ಲಿ ಅಭಿಷೇಕ್ ಬಚ್ಚನ್ ನೀಡಿಲ್ಲ. ಆದರೆ ಅಭಿಷೇಕ್ ಬಚ್ಚನ್ ಆದಾಯಕ್ಕೇನು ಕಡಿಮೆ ಇಲ್ಲ. ಅಭಿಷೇಕ್ ಬಚ್ಚನ್‌ಗೆ ಹಲವು ಮೂಲಗಳಿಂದ ಆದಾಯ ಬರುತ್ತಿದೆ. ಈ ಪೈಕಿ ಪ್ರತಿ ತಿಂಗಳು ಎಸ್‌ಬಿ ಬ್ಯಾಂಕ್ ಬರೋಬ್ಬರಿ 18.9 ಲಕ್ಷ ರೂಪಾಯಿ ನೀಡುತ್ತಿದೆ. ಇದು 5 ವರ್ಷದ ಬಳಿಕ ಈ ಮೊತ್ತ 23.6 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ಇದೀಗ ಈ ಆದಾಯದ ರಹಸ್ಯ ಬಯಲಾಗಿದೆ.

ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಸುಮಾರು 280 ಕೋಟಿ ರೂಪಾಯಿ. ಪ್ರತಿ ತಿಂಗಳು ಎಸ್‌ಬಿ ಬ್ಯಾಂಕ್ ಅಭಿಷೇಕ್ ಬಚ್ಚನ್‌ಗೆ ನೀಡುತ್ತಿರುವು ಯಾವುದೇ ಹೂಡಿಕೆಯ ಬಡ್ಡಿ, ಲಾಭಾಂಶವಲ್ಲ. ಇದು ಬಾಡಿಗೆ ಮೊತ್ತ. ಹೌದು, ಮುಂಬೈನ ಜುಹುವಿನಲ್ಲಿ ಎಸ್‌ಬಿಐ ಬ್ಯಾಂಕ್ ಕಚೇರಿ ಕಟ್ಟಡದ ಮಾಲೀಕ ಅಭಿಷೇಕ್ ಬಚ್ಚನ್. ಜುಹು ಬಂಗಲೆ, ಅಮ್ಮು ಹಾಗೂ ವ್ಯಾಟ್ ಗ್ರಾಂಡ್ ಫ್ಲೋರ್‌ನ್ನು ಅಭಿಷೇಕ್ ಬಚ್ಚನ್, ಎಸ್‌ಬಿಐ ಬ್ಯಾಂಕ್‌ಗೆ ಬಾಡಿಕೆ ನೀಡಿದ್ದಾರೆ. ಇದರಿಂದ ಇದೀಗ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಅಭಿಷೇಕ್ ಬಚ್ಚನ್ ಜೇಬು ಸೇರುತ್ತಿದೆ.

ಜುಹುನಲ್ಲಿ ಮತ್ತೊಂದು ಐಷಾರಾಮಿ ಮನೆ ಖರೀದಿಸಿದ ಅಭಿಷೇಕ್ ಬಚ್ಚನ್

ಎಸ್‌ಬಿಐ ಬ್ಯಾಂಕ್ ಜೊತೆ ಅಭಿಷೇಕ್ ಬಚ್ಚನ್ 15 ವರ್ಷದ ಒಪ್ಪಂದ ಮಾಡಿಕೊಂಡಿದ್ದಾರೆ. ಆರಂಭಿಕ 5 ವರ್ಷ ಪ್ರತಿ ತಿಂಗಳು 18.9 ಲಕ್ಷ ರೂಪಾಯಿ ಬಾಡಿಗೆ, ಬಳಿಕ ಬಾಡಿಗೆ ಹೆಚ್ಚಳವಾಗಲಿದೆ. 6ನೇ ವರ್ಷದಿಂದ 10ನೇ ವರ್ಷದ ವರೆಗೆ ಈ ಮೊತ್ತ 23.6 ಲಕ್ಷ ರೂಪಾಯಿಗೆ ಹೆಚ್ಚಳವಾಗಲಿದೆ. ಇನ್ನು 11ರಿಂದ 15ನೇ ವರ್ಷಕ್ಕೆ ಬಾಡಿಗೆ ಮೊತ್ತ 29.5 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ ಎಂದು ಝ್ಯಾಪ್‌ಕಿ ಡಾಟ್ ಕಾಂ ವರದಿ ಮಾಡಿದೆ.

3,150 ಚದರ ಅಡಿ ಸ್ಥಳವನ್ನು ಬಾಡಿಗೆ ಪಡೆದುಕೊಂಡಿದೆ. ಬಚ್ಚನ್ ಕುಟುಂಬದ ಜಾಲ್ಸಾ ನಿವಾಸದ ಬಳಿ ಇರುವ ಈ ಕಟ್ಟಡದ ನೆಲ ಮಹಡಿಯನ್ನು ಎಸ್‌ಬಿಐ ಬಾಡಿಗೆ ಪಡೆದುಕೊಂಡಿದೆ. ಇತರ ಕೆಲ ಕಟ್ಟಡಗಳಿಂದಲೂ ಅಭಿಷೇಕ್ ಬಚ್ಚನ್ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ. 

ಸಿನಿಮಾ ಜೊತೆಗೆ ಅಭಿಷೇಕ್ ಬಚ್ಚನ್ ಹಲವು ಉದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರೊ ಕಬಡ್ಡಿ, ಇಂಡಿಯನ್ ಸೂಪರ್ ಲೀಗ್ ಸೇರಿದಂತೆ ಕೆಲ ಲೀಗ್ ಫ್ರಾಂಚೈಸಿಗಳ ಮಾಲೀಕರಾಗಿಯೂ ಹೂಡಿಕೆ ಮಾಡಿದ್ದಾರೆ. ಇದರಿಂದಲೂ ಆಯಾದ ಪಡೆಯುತ್ತಿದ್ದಾರೆ. ಇತರ ಕೆಲ ಉದ್ಯಮಗಳಲ್ಲೂ ಅಭಿಷೇಕ್ ಬಚ್ಚನ್ ಹೂಡಿಕೆ ಮಾಡಿದ್ದಾರೆ. ಸದ್ಯ ಅಭಿಷೇಕ್ ಬಚ್ಚನ್ ಸಿನಿಮಾಗಿಂತ ಹೆಚ್ಚು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಯಾ ಯಾರ ಜೊತೆ ಶೂಟಿಂಗ್ ಹೋದ್ರೆ ಉರಿದುಕೊಳ್ತಿದ್ರು ಅಮಿತಾಬ್? ಅಮೀರ್ ಖಾನ್ ಪ್ರಶ್ನೆಗೆ ಬಿಗ್ ಬಿ ಶಾಕ್
 

Latest Videos
Follow Us:
Download App:
  • android
  • ios