Asianet Suvarna News Asianet Suvarna News

ಜುಹುನಲ್ಲಿ ಮತ್ತೊಂದು ಐಷಾರಾಮಿ ಮನೆ ಖರೀದಿಸಿದ ಅಭಿಷೇಕ್ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ಮತ್ತೊಂದು ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಈ ಹೊಸ ಮನೆಯು ಅವರ ಕುಟುಂಬ ವಾಸಿಸುವ ಜಲ್ಸಾ ಬಳಿಯೇ ಇದೆ. ಈ ಮನೆ ಖರೀದಿಗೆ ಎಷ್ಟು ಖರ್ಚಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

Abhishek Bachchan bought new Luxury apartment in Juhu
Author
First Published Sep 19, 2024, 9:00 PM IST | Last Updated Sep 20, 2024, 10:22 AM IST

ನಟ ಅಭಿಷೇಕ್ ಬಚ್ಚನ್ ಮುಂಬೈನ ಜುಹು ಪ್ರದೇಶದಲ್ಲಿ ಮತ್ತೊಂದು ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ ಎಂದು ಬಾಂಬೆ ಟೈಮ್ಸ್ ವರದಿ ಮಾಡಿದೆ. ಸಮುದ್ರಕ್ಕೆ ಮುಖ ಮಾಡಿರುವ ಈ ಅಪಾರ್ಟ್‌ಮೆಂಟ್‌ ಬಚ್ಚನ್ ಕುಟುಂಬ ವಾಸವಿರುವ ಜಲ್ಸಾಗೆ ಸಮೀಪದಲ್ಲೇ ಇದೆ ಎಂದುವ ವರದಿ ಆಗಿದೆ. ಆದರೆ ಇದಕ್ಕೆ ಎಷ್ಟು ಮೊತ್ತ ಎಂಬ ಹಣಕಾಸು ವಿವರವನ್ನು ಸದ್ಯಕ್ಕೆ ಬಚ್ಚನ್ ರಹಸ್ಯವಾಗಿಟ್ಟಿದ್ದಾರೆ. ಬಚ್ಚನ್ ಕುಟುಂಬ ಈಗಾಗಲೇ ಮುಂಬೈನಲ್ಲೇ ಸುತ್ತಮುತ್ತ ಐದು ಮನೆಗಳನ್ನು ಹೊಂದಿದೆ. ಇದರ ಜೊತೆಗೆ ಹಲವು ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ಫ್ಲಾಟ್‌ಗಳನ್ನು ಕೂಡ ಹೊಂದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಅಭಿಷೇಕ್ ಬಚ್ಚನ್ ಮುಂಬೈನ ಬೊರಿವಿಲ್ಲಿ ಪ್ರದೇಶದಲ್ಲಿ ಇರುವ  ಒಬೇರಾಯ್ ಸ್ಕೈ ಪ್ರಾಜೆಕ್ಟ್‌ನಲ್ಲಿ ಆರು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿ ಆಗಿತ್ತು. ಪ್ರಸ್ತುತ ಅಭಿಷೇಕ್ ಬಚ್ಚನ್ ಹಾಗೂ ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ಅವರು ಅಭಿಷೇಕ್ ಬಚ್ಚನ್ ಅವರ ಪೋಷಕರಾದ ಬಾಳಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಜೊತೆ ಮುಂಬೈನ ಜಲ್ಸಾದಲ್ಲಿ ವಾಸ ಮಾಡ್ತಿದ್ದಾರೆ. 

ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಸಮಾರಂಭದಲ್ಲಿ ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯ ಬಚ್ಚನ್ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಐಶ್ವರ್ಯಾ ರೈ ಅವರಿಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯೂ ಸಿಕ್ಕಿದೆ. ಆಮ್ಮನ ಜೊತೆ ಈ ಸಮಾರಂಭದಲ್ಲಿ ಮಿಂಚಿದ ಆರಾಧ್ಯಾ ಬಚ್ಚನ್‌ ಅವರ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಆರಾಧ್ಯ-ಐಶ್ವರ್ಯಾ ಜೊತೆ ಕೂತ ಈ ನಟ ಯಾರು?

ಅಭಿಷೇಕ್ ಬಚ್ಚನ್ ಸಿನಿಮಾ ಬಗ್ಗೆ ಹೇಳುವುದಾದರೆ ಅವರು ಕೊನೆಯದಾಗಿ ಆರ್ ಬಲ್ಕಿ ನಿರ್ದೇಶನದ ಘೂಮರ್ ಸಿನಿಮಾದಲ್ಲಿ ಸಿಯಾಮಿ ಕೇರ್‌ ಹಾಗೂ ಶಬಾನಾ ಅಜ್ಮಿ ಜೊತೆ ನಟಿಸಿದ್ದರು. ಹಾಗೆಯೇ ರೆಮೊ ಡಿಸೋಜಾ ಅವರ ನಿರ್ದೇಶನದ ಬಿ ಹ್ಯಾಪಿ ಸಿನಿಮಾದಲ್ಲಿ ಅವರು ಸಿಂಗಲ್ ಫಾದರ್‌ ( ಪತ್ನಿ ಇಲ್ಲದ ತಂದೆ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಮೊದಲ ಪೋಸ್ಟರ್‌ ಮಾರ್ಚ್‌ನಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಇನ್ನಾಯತ್ ವರ್ಮಾ ಅಪ್ಪ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ದೇಶದ ಅತಿ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಪ್ರದರ್ಶನ ನೀಡಲು ಬಯಸುತ್ತಿರುವ ಪ್ರತಿಭಾವಂತ ಮಗಳು ಹಾಗೂ ಒಂಟಿ ತಂದೆಯ ಪ್ರಯಾಣವನ್ನು ನೋಡಿ, ತನ್ನ ಮಗಳ ಕನಸುಗಳನ್ನು ನನಸಾಗಿಸಲು ಮತ್ತು ನಿಜವಾದ ಸಂತೋಷವನ್ನು ಕಂಡುಕೊಳ್ಳಲು ತಂದೆ ಮಾಡುವ ಅಸಾಧಾರಣ ಶ್ರಮವನ್ನು ಈ ಸಿನಿಮಾ ತೋರಿಸಲಿದೆ.  ತೋರಿಸುತ್ತದೆ. ಈ ಲಿಝೆಲ್ಲೆ ರೆಮೊ ಡಿಸೋಜಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಪ್ರೈಮ್ ವೀಡಿಯೋದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಇದಲ್ಲದೇ ಅಭಿಷೇಕ್ ಬಚ್ಚನ್ ಅವರು ಶೂಜಿತ್ ಸಿರ್ಕರ್ ಅವರ ಇನ್ನು ಹೆಸರಿಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. 

ಡಿವೋರ್ಸ್‌ ರೂಮರ್ಸ್ ಮಧ್ಯೆ ಅತ್ತೆ ಮಾವ ಇರುವ ಜಲ್ಸಾಗೆ ಮಗಳೊಂದಿಗೆ ಬಂದ ಐಶ್ವರ್ಯಾ ರೈ

Latest Videos
Follow Us:
Download App:
  • android
  • ios