ಲಾಲ್‌ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದ ಕರೀನಾ ಕಪೂರ್. ಕೊರೋನಾ ಭಯದಲ್ಲಿಯೇ ಚಿತ್ರೀಕರಣ ಮುಗಿಸಿದ್ದು ಹೇಗಿತ್ತು ಗೊತ್ತಾ? 

ಬಾಲಿವುಡ್‌ ಬಹು ನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಪೂರ್ಣಗೊಳಿಸಿ, ಪ್ಯಾಕಪ್‌ ಮಾಡಿದ್ದಾರೆ. ಗರ್ಭಿಣಿಯಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದು ಹೇಗಿರುತ್ತದೆ ಎಂದು ಕರೀನಾ ಕಪೂರ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಸೈಫ್‌ ಎಕ್ಸ್‌ ವೈಫ್‌ ಅಮೃತಾ ಸಿಂಗ್‌ ಹಾಗೂ ಕರೀನಾ ಸಂಬಂಧ ಹೇಗಿದೆ?

ಕರೀನಾ ಪೋಸ್ಟ್‌:
'ಎಲ್ಲಾ ಜರ್ನಿಗಳು ಅಂತ್ಯ ಕಾಣಲೇ ಬೇಕು. ಇಂದು ನಾನು ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣ ಮುಗಿಸಿದೆ. ತುಂಬಾ ಕಷ್ಟದ ದಿನಗಳು...ಕೊರೋನಾ ಸೋಂಕು, ಪ್ರೆಗ್ನೆಂನ್ಸಿ ಎಲ್ಲವೂ ಭಯ ಉಟ್ಟಿಸಿತ್ತು. ಆದರೆ ನಾವು ಇಷ್ಟ ಪಡುವ ಕೆಲಸ ಮಾಡುಲು ಯಾವ ತಡೆಯೂ ಇರುವುದಿಲ್ಲ. ಸುರಕ್ಷಿತ ಕ್ರಮಗಳನ್ನು ಕೈಗೊಂಡೇ ಮಾಡಲಾಗುತ್ತಿದೆ. ಥ್ಯಾಂಕ್ಸ್ ಅಮೀರ್, ಕಿಯಾರಾ ಹಾಗೂ ಇನ್ನಿತರೆ ಚಿತ್ರ ಕಲಾವಿದರು ಹಾಗೂ ತಂತ್ರಜ್ಞರಿಗೆ,' ಎಂದು ಬರೆದುಕೊಂಡಿದ್ದಾರೆ.

View post on Instagram

ಪರಿಸರದ ನಡುವೆ ಕರೀನಾ ಹಾಗೂ ಅಮೀರ್ ಖಾನ್‌ ಸನ್ನಿವೇಷವೊಂದನ್ನು ಚರ್ಚಿಸುತ್ತಿದ್ದಾರೆ. ಈ ಫೋಟೋವನ್ನು ಅಮೀರ್ ರೀ ಪೋಸ್ಟ್‌ ಮಾಡಿಕೊಂಡು, ತಮಾಷೆ ಮಾಡಿದ್ದಾರೆ. 'ಅರೇ ಕರೀನಾ ಏನು ಮಾತನಾಡುತ್ತಿದ್ದೀರಾ? ಜರ್ನಿ ಇಲ್ಲಿಗೆ end ಆಗಲು ಹೇಗೆ ಸಾಧ್ಯ? ನಾನು ನಿರ್ದೇಶಕ ಅದ್ವಿತ್ ಇನ್ನು ಹೆಚ್ಚಿನ ದೃಶ್ಯಗಳಿಗೆ ಸ್ಕ್ರಿಪ್ಟ್ ಬರೆದು, ನಿಮ್ಮನ್ನು ಶೂಟಿಂಗ್‌ ಸೆಟ್‌ನಲ್ಲಿ ಇರುವಂತೆ ಮಾಡಬೇಕೆಂದು ಪ್ಲಾನ್ ಮಾಡಿದ್ದೀನಿ,' ಎಂದು ಕಾಲು ಎಳೆದಿದ್ದಾರೆ.

ಬ್ಯಾಕ್ಲೆಸ್ ಸೀರೆ ಲುಕ್‌ಗೆ ಸಿಕ್ಕಾಪಟ್ಟೆ ಟ್ರೋಲ್‌ ಆದ ನಟಿ ಕರೀನಾ ಕಪೂರ್‌! 

ಪೇಟಾ ಧರಿಸಿ ರೈಲಿನಲ್ಲಿ ಕಾಣಿಸಿಕೊಂಡ ಅಮಿರ್ ಖಾನ್ ಫೋಟೋ ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಹಾಗೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಕರೀನಾ ಕಪೂರ್, ಅಮಿರ್ ಖಾನ್‌ ಗರ್ಲ್ ಫ್ರೆಂಡ್‌ ಆಗಿ ಹಾಗೂ ಕಾಲಿವುಡ್ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.