ಆ್ಯನಿಮಲ್‌ನಲ್ಲಿ ದಾಂಪತ್ಯ ಅತ್ಯಾಚಾರ, ಸಮಾಜದಲ್ಲಿ ಇರೋದು ಹೌದು: ಬಾಬ್ಬಿ ಡಿಯೋಲ್
ರೇಪ್ ಸಮಾಜದಲ್ಲಿ ಇದೆ, ವೈವಾಹಿಕ, ಕೌಟುಂಬಿಕ ಹಂತದಲ್ಲಿ ಕೂಡ ರೇಪ್ ಸಮಾಜದಲ್ಲಿ ಇದೆ. ಸಿನಿಮಾ ಎಂಬುದು ಸಮಾಜದ ರಿಫ್ಲೆಕ್ಷನ್. ಸಮಾಜವೇ ಹಾಗಿದೆ ಎಂತೇನಲ್ಲ, ಸಮಾಜದಲ್ಲಿ ಅಂತಹವೂ ಇದೆ
ಕನ್ನಡತಿ ರಶ್ಮಿಕಾ ಮಂದಣ್ಣ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು (01 ಡಿಸೆಂಬರ್ 2023) ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಚೆನ್ನಾಗಿಯೇ ಕಲೆಕ್ಷನ್ ಮಾಡುತ್ತಿದೆ ಎನ್ನಲಾಗಿದೆ. ಬಿಡುಗಡೆಯಾದ ಒಂದೇ ವಾರಕ್ಕೆ ಅನಿಮಲ್ ಚಿತ್ರವು ರೂ. 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗಾಗಿ ಸಿನಿಮಾ ಪ್ಲಾಪ್ ಆಗಿಲ್ಲ ಎಂದು ಧಾರಾಳವಾಗಿಯೇ ಹೇಳಬಹುದು.
ಅನಿಮಲ್ ಚಿತ್ರ ನೋಡಿದ ಹಲವರು ಚಿತ್ರದಲ್ಲಿ ರೇಪ್ ಸೀನ್ ಹಾಗೂ ಸ್ತ್ರೀ ದ್ವೇಷಿ ಮನೋಭಾವನೆಗಳು ಹೇರಳವಾಗಿವೆ ಎನ್ನುತ್ತಿದ್ದಾರೆ. ನಾಯಕ ನಟ ರಣಬೀರ್ ಕಪೂರ್ ಹಾಗೂ ಬಾಬ್ಬಿ ಡಿಯೋಲ್ ಪಾತ್ರಗಳು ನೆಗೆಟಿವ್ ಫೀಲ್ ತುಂಬಿಕೊಂಡಿವೆ. ರಣಬೀರ್ ಕಪೂರ್ ಸಂಪೂರ್ಣ ಸಿನಿಮಾದಲ್ಲಿ ಮಹಿಳಾ ವಿರೋಧಿಯಾಗಿಯೇ ಕಾಣಿಸಿಕೊಂಡರೆ, ನಟ ಬಾಬ್ಬಿ ಡಿಯೋಲ್ ಪಾತ್ರವು ವೈವಾಹಿಕ ರೇಪ್ ಎಂಬಂತಾಗಿದೆ. ಹೆಂಡತಿಯ ಜತೆ ರೊಮಾನ್ಸ್, ಸೆಕ್ಸ್ ಮಾಡುವ ಬದಲು ರೇಪ್ ಮಾಉವ ಸೀನ್ ಇದೆ. ಇದು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದೆ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಪ್ಲಾಪ್ ಸಿನಿಮಾ ಲವ್ ಬ್ರೇಕಪ್ ತರಹ, ಕುಳಿತು ಅಳುವುದರಲ್ಲಿ ಅರ್ಥವಿಲ್ಲ; ಪ್ರಿಯಾಂಕಾ ಚೋಪ್ರಾ
ಆದರೆ, ಈ ಬಗ್ಗೆ ನಟ ತನ್ನ ಪಾತ್ರದ ರೇಪ್ ಸೀನ್ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ. ಅನಿಮಲ್ ಚಿತ್ರದಲ್ಲಿ ಆ ರೇಪ್ ಸೀನ್ ಅಗತ್ಯವಿದೆ. ಏಕೆಂದರೆ ಆ ಚಿತ್ರದಲ್ಲಿ ನನ್ನ ಪಾತ್ರ ತುಂಬಾನೇ ಕಡಿಮೆ ಅವಧಿಯದ್ದು. ಅದರಲ್ಲಿ ನನ್ನ ಕ್ಯಾರೆಕ್ಟರೈಸೇಶನ್ ಬಿಲ್ಡ್ ಮಾಡಲಿಕ್ಕೇ ಸಮಯವಿಲ್ಲ. ಹೀಗಾಗಿ ಇರೋ ಅವಧಿಯಲ್ಲಿ ನಾನು ಯಾರು, ಎಂಥವನು ಎಂದು ತೋರಿಸಲಿಕ್ಕೆ ರೇಪ್ ಸೀನ್ ಬೇಕಿತ್ತು. ನಾವೇನೂ ಸಿನಿಮಾ ಪ್ರಮೋಶನ್‌ಗೆ ಅದನ್ನು ಹಾಕಿಲ್ಲ ಅಥವಾ ಅದನ್ನು ಅನಿಮಲ್ ಚಿತ್ರದಲ್ಲಿ ಪ್ರಮೋಶನ್ ಕೂಡ ಮಾಡಿಲ್ಲ.
ಹದಿನೈದು ವರ್ಷಕ್ಕೇ ತಂದೆ ಕಳೆದುಕೊಂಡಿದ್ದೆ; ಚೆಸ್ ಬಗ್ಗೆ ಅವರಪ್ಪ ಹೇಳಿದ್ದ ಪಾಠ ನೆನೆದ ಶಾರುಖ್ ಖಾನ್!
ರೇಪ್ ಸಮಾಜದಲ್ಲಿ ಇದೆ, ವೈವಾಹಿಕ, ಕೌಟುಂಬಿಕ ಹಂತದಲ್ಲಿ ಕೂಡ ರೇಪ್ ಸಮಾಜದಲ್ಲಿ ಇದೆ. ಸಿನಿಮಾ ಎಂಬುದು ಸಮಾಜದ ರಿಫ್ಲೆಕ್ಷನ್. ಸಮಾಜವೇ ಹಾಗಿದೆ ಎಂತೇನಲ್ಲ, ಸಮಾಜದಲ್ಲಿ ಅಂತಹವೂ ಇದೆ ಎಂದಷ್ಟೇ ನಾನು ಹೇಳಬಯಸುತ್ತೇನೆ. ಸಮಾಜದಲ್ಲಿ ಇಲ್ಲದೇ ಇರುವುದನ್ನು ಯಾವುದೇ ಸಿನಿಮಾದಲ್ಲಿ ತೋರಿಸುವುದಿಲ್ಲ. ನಮ್ಮ ಅನಿಮಲ್ ಚಿತ್ರದಲ್ಲಿ ಕೂಡ ಅಷ್ಟೇ, ಸಿನಿಮಾದ ಕಥೆಯಲ್ಲಿ ಪಾತ್ರವೊಂದರ ಸ್ವಭಾವ, ನಡತೆ ಹಾಗಿದೆ, ಅದನ್ನು ತೋರಿಸಿದ್ಧೇವೆ. ಸಿನಿಮಾವನ್ನು ಸಿನಿಮಾ ಆಗಿ ನೋಡಿದರೆ ಎಲ್ಲವೂ ಸರಿಯಾಗಿಯೇ ಅರ್ಥವಾಗುತ್ತದೆ' ಎಂದಿದ್ದಾರೆ ನಟ ಬಾಬ್ಬಿ ಡಿಯೋಲ್.