ಬಿಜೆಪಿ ಬಾಲಿವುಡ್‌ನನ್ನು ಮುಂಬೈನಿಂದ ಉತ್ತರಪ್ರದೇಶಕ್ಕೆ ಶಿಫ್ಟ್ ಮಾಡ್ತಿದೆ: ಕಾಂಗ್ರೆಸ್

ಬಾಲಿವುಡ್ ಅಂದ್ರೆ ನೆನಪಾಗೋದು ಮುಂಬೈ. ಆದರೆ ಇದೀಗ ಬಿಜೆಪಿ ಸರ್ಕಾರ ಬಾಲಿವುಡ್‌ನ್ನು ಉತ್ತರ ಪ್ರದೇಶಕ್ಕೆ ಶಿಫ್ಟ್ ಮಾಡೋಕೆ ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆರೋಪಿಸಿದೆ

BJP planning to shift Bollywood to Uttar Pradesh says Congress dpl

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮುಂಬೈಗೆ ಭೇಟಿ ನೀಡುವ ಬಗ್ಗೆ ಕಾಂಗ್ರೆಸ್ ಟಾಂಗ್ ನೀಡಿದೆ. ಬಿಜೆಪಿ ಬಾಲಿವುಡ್‌ನ್ನು ಮುಂಬೈನಿಂದ ಉತ್ತರಪ್ರದೇಶಕ್ಕೆ ಶಫ್ಟ್ ಮಾಡುವ ಹುನ್ನಾರದಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ತಿಳಿಸಿದ್ದಾರೆ.

ಉದ್ಯಮಿ ಹಾಗೂ ಸಿನಿಮಾ ನಿರ್ಮಾಪಕರಿಗೆ ಮುಂಬೈನಿಂದ ಎತ್ತಂಗಡಿಯಾಗುವ ಬೆದರಿಕೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ವಕ್ತಾರ ಸಚಿನ್ ಸಾವಂತ್ ಅವರು ಅಂತಾರಾಷ್ಟ್ರೀಯ ಆರ್ಥಿಕ ಸೇವೆಯನ್ನು ಮುಂಬೈನಿಂದ ಗುಜರಾತ್‌ಗೆ ಶಿಫ್ಟ್ ಮಾಡಿದಂತೆ ಉತ್ತರಪ್ರದೇಶ ಸಿಎಂ ಬಾಲಿವುಡ್‌ನ್ನು ಮುಂಬೈನಿಂದ ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ.

2 ವರ್ಷಗಳಿಂದ ಕಿರುತೆರೆ ನಟಿ ಮೇಲೆ ಅತ್ಯಾಚಾರ: ಬಾಲಿವುಡ್ ಡೈರೆಕ್ಟರ್ ವಿರುದ್ಧ ಕೇಸ್

ಯೋಗಿ ಅವರು ಉದ್ಯಮಿ ಹಾಗೂ ನಿರ್ಮಾಪಕರೊಂದಿಗೆ ಸಭೆ ನಡೆಸಿ ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಕೇಳಿಕೊಳ್ಳಲಿದ್ದಾರೆ ಎಂದಿದ್ದಾರೆ. ಎನ್‌ಸಿಬಿಯನ್ನು ಬಳಸಿಕೊಂಡು ಬಿಜೆಪಿ ಸರ್ಕಾರ ಬಾಲಿವುಡ್‌ನಲ್ಲಿ ಬೆದರಿಕೆ ಸೃಷ್ಟಿಸುತ್ತಿದೆ. ಕೇಂದ್ರದ ಸಹಾಯದೊಂದಿಗೆ ಮಹಾರಾಷ್ಟ್ರದ ಹೆಸರು ಕೆಡಿಸುವುದರಲ್ಲಿ ಯೋಗಿ ಮುಂಚೂಣಿಯಲ್ಲಿದ್ದಾರೆ ಎಂದಿದ್ದಾರೆ.

ದೇಶದ ಆರ್ಥಿಕ ಕೇಂದ್ರ ಮುಂಬೈಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವ ಹುನ್ನಾರ ನಡೆಯುತ್ತಿದೆ. ಕುತಂತ್ರದಿಂದ ಬಾಲಿವುಡ್‌ನ್ನು ರಕ್ಷಿಸಲು ಠಾಕ್ರೆ ಸರ್ಕಾರ ಕೆಲಸ ಮಾಡಬೇಕೆಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios