ಬಾಲಿವುಡ್ ಕಾಸ್ಟಿಂಗ್ ಡೈರೆಕ್ಟರ್ ಬೇರೆ ಬೇರೆ ಲೊಕೇಷನ್‌ಗಳಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಕಿರುತೆರೆ ನಟಿ ಆರೋಪಿಸಿದ್ದಾರೆ. ವರ್ಸೋವಾ ಪೊಲೀಸ್ ಠಾಣೆಯಲ್ಲಿ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಾಗಿದೆ.

ನಿದೇರ್ಶಕ ಆಯುಷ್ ತಿವಾರಿ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಿರ್ದೇಶಕನನ್ನು ಇದುವರೆಗೂ ಬಂಧಿಸಿಲ್ಲ. ನವೆಂಬರ್ 16ರಂದು ಪೊಲೀಸ್ ಠಾಣೆಗೆ ಬಂದ ಯುವತಿ ಲಿಖಿತ ದೂರು ನೀಡಿದ್ದರು. ವೇರಿಫಿಕೇಷನ್ ನಂತರ ಕೇಸು ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜಗಳ ಮಾಡೋದೇ ಇಲ್ಲ ಈ ನಟಿಯ ಪತಿ: ಬೋರ್ ಆದಾಗ ತಾವೇ ಫೈಟ್ ಮಾಡ್ತಾರೆ ಜೆನಿಲಿಯಾ

2 ವರ್ಷಗಳಿಂದ ನಿರ್ದೇಶಕ ತನ್ನ ಮೇಲೆ ಅತ್ಯಾಚಾರ ಮಾಡುತ್ತಾ ಬಂದಿರುವುದಾಗಿ ಯುವತಿ ಆರೋಪಿಸಿದ್ದಾರೆ. ವಿವಾಹದ ಭರವಸೆ ನೀಡಿ ಹಲವು ಸಂದರ್ಭ ಅತ್ಯಾಚಾರ ಮಾಡಿದ್ದಾರೆ ಎಂದಿದ್ದಾರೆ ಯುವತಿ.

ಬಾಲಿವುಡ್‌ನಲ್ಲಿ ಪಾತ್ರ ಕೊಡಿಸುವುದಾಗಿ ಮತ್ತು ಬಾಲಿವುಡ್ ಧಾರಾವಾಹಿಗಳಲ್ಲಿ ಅವಕಾಶ ಕೊಡೋದಾಗಿ ವಂಚಿಸಿದ್ದಾರೆ ಯುವತಿ ಆರೋಪಿಸಿದ್ದಾಳೆ. ಜುಲೈನಲ್ಲಿ ತಾನು ಗರ್ಭಿಣಿಯಾಗಿದ್ದು, ತಿವಾರಿ ಜವಾಬ್ದಾರಿ ತೆಗೆದುಕೊಂಡಿಲ್ಲ. ಮದುವೆ ಬಗ್ಗೆ ಮಾತನಾಡಿದಾಗ ಇಬ್ಬರು ಸ್ನೇಹಿತರ ಎದುರು ಆಕೆಯನ್ನು ಅವಮಾನಿಸಿದ್ದಾಗಿ ಯುವತಿ ದೂರಿದ್ದಾರೆ.