Asianet Suvarna News Asianet Suvarna News

ಬರ್ತ್‌ಡೇ ಬಾಯ್‌ ಮಾಧವನ್‌ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಸಿದ ಕತೆ ಗೊತ್ತಾ?

ತಮಿಳಿನಿಂದ ಹಿಡಿದು ಹಿಂದಿಯವರೆಗೂ ಹಲವು ಭಾಷೆಗಳಲ್ಲಿ ನಟಿಸಿದ ನಟ, ಚಿತ್ರರಸಿಕರ ಮನ ಗೆದ್ದ ನಟ ಮಾಧವನ್‌. ಇವರ ಬರ್ತ್‌ಡೇ ಇಂದು, ಇವರ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ ಬನ್ನಿ.

 

Birthday boy Madhavan loved and married his student
Author
Bengaluru, First Published Jun 1, 2020, 4:53 PM IST

ತ್ರೀ ಈಡಿಯಟ್ಸ್ ಫಿಲಂನಲ್ಲಿ ಮಾಧವನ್ ರೋಲ್‌ ನೋಡೇ ಇರುತ್ತೀರಾ. ಚಾಕಲೇಟ್‌ ಹೀರೋ ಆಗಿ ಬಂದು, ನಂತರ ಮ್ಯಾನ್ಲಿ ಲುಕ್‌ ಬೆಳೆಸಿಕೊಂಡು, ಈಗ ಪ್ರಬುದ್ಧ ನಟವಾಗಿರುವ ಮಾಧವನ್‌, ತಮಿಳು ಮಹಿಳೆಯರ ಪಾಲಿಗೆ ನಮ್ಮ ರಮೇಶ್‌ ಇದ್ದಂತೆ. ಹೋಮ್ಲಿ ನಟ. ಹೆಚ್ಚು ಗಾಸಿಪ್‌ಗಳಿಗೆ ಒಳಗಾಗದ, ಸಭ್ಯ ನಡವಳಿಕೆಯ ಈ ನಟನ ಮುಗುಳುನಗೆ ಚಂದ.
 

ಅಂದಹಾಗೆ ಈಗ ಮಾಧವನ್‌ ವಯಸ್ಸು ಹಾಫ್‌ ಸೆಂಚುರಿ. 1970ರ ಜೂನ್‌ 1ರಂದು ಜೆಮ್‌ಷೆಡ್ಪುರದಲ್ಲಿ ಜನಿಸಿದ ಮಾಧವನ್‌ಗೆ ಆಸೆ ಇದ್ದದ್ದು ಸೈನ್ಯ ಸೇರೋಕೆ. ಆದ್ರೆ ಇವರು ಮಾಡಿದ್ಯು ಕಮ್ಯುನಿಕೇಶನ್‌ ಡಿಗ್ರಿ. ನಂತರ ಕಮ್ಯುನಿಕೇಶನ್‌ ಮತ್ತು ಪಬ್ಲಿಕ್ ಸ್ಪೀಕಿಂಗ್ ವಿಷ್ಯದಲ್ಲಿ ಕಾಲೇಜ್‌ ಮಕ್ಕಳಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದರು. ಆಗ ಈ ಸ್ಫುರದ್ರೂಪಿ ಹ್ಯಾಂಡ್‌ಸಮ್‌ ಹುಡುಗನ ಮೇಲೆ ಸರಿತಾ ಬಿರ್ಜೆ ಎಂಬ ವಿದ್ಯಾರ್ಥಿನಿಗೆ ಲವ್ವಾಯಿತು. ಇದು 1999ರಲ್ಲಿ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಪ್ರಕರಣ. ಅವಳೇ ಮೊದಲು ಮಾಧವನ್‌ನನ್ನು ಡಿನ್ನರ್‌ಗೆ ಆಹ್ವಾನಿಸಿದಳು. ಅವಳು ಬಿಳಿ. ಮಾಧವನ್ ಕಪ್ಪು. ಮುಜುಗರದಿಂದಲೇ ಮಾಧವನ್‌ ಡಿನ್ನರ್‌ಗೆ ಹೋದರಂತೆ. ನಂತರ ಇಬ್ಬರ ಫ್ರೆಂಡ್‌ಶಿಪ್‌ ಪ್ರೀತಿಯಾಗಿ ಬೆಳೆಯಿತು. ನಂತರ ಮದುವೆಯೂ ಆಯಿತು. ಈಗ ಅವರಿಗೊಬ್ಬ ಮಗನಿದ್ದಾನೆ. ಹೆಸರು ವೇದಾಂತ್‌.

ಮಾಧವನ್ ಎಂಬ ವಿಶೇಷ ನಟನ ಸಾಧನೆ


ಭಾರತದಲ್ಲಿ ಪಾನ್‌ ಇಂಡಿಯಾ ಇಮೇಜ್‌ ಹೊಂದಿರುವ ಕೆಲವೇ ನಟರಲ್ಲಿ ಮಾಧವನ್‌ ಒಬ್ರು. ಅವರು ಏಳು ಭಾಷೆಗಳಲ್ಲಿ ನಟಿಸಿದ್ದಾರೆ. ಮೊದಲು ಹಿಂದಿಯ ಹಲವು ಸೀರಿಯಲ್‌ಗಳಲ್ಲಿ ನಟಿಸಿದರು. ನಂತರ ಮಾಡೆಲಿಂಗ್‌ ಮಾಡಿದರು. 2000ನೇ ಇಸವಿಯಲ್ಲಿ ಮಣಿರತ್ನಂ ನಿರ್ದೇಶನದ, ತಮಿಳು ಭಾಷೆಯ ಫಿಲಂ ಅಲೈಪಾಯುದೆ ಬಂತು. ಮಾಧವನ್‌ ಇದರಲ್ಲಿ ನಿರ್ವಹಿಸಿದ ಹೀರೋ ರೋಲ್ ಎಲ್ಲರ ಮುಂದೆ ಹೊಸ ಹೀರೋ ಆಗಮನವನ್ನು ಸಾರಿತು. ಹಿಂದಿಯ ರಂಗ್‌ ದೇ ಬಸಂತಿ, ತ್ರೀ ಈಡಿಯಟ್ಸ್, ಗುರು ಫಿಲಂಗಳಲ್ಲಿ ಇವರು ಮಾಡಿದ ಸಪೋರ್ಟ್ ರೋಲ್‌ಗಳು ಹಿಂದಿ ನೋಡುಗರ ಕಣ್ಣಲ್ಲೂ ಇವರನ್ನು ಕಟೆದು ನಿಲ್ಲಿಸಿದವು.
 

96 ಕೆಜಿಯಿಂದ 46 ಕೆಜಿಗೆ : ಡುಮ್ಮಿ ಸಾರಾ ಸ್ಲಿಮ್ಮಿ ಆದ ವೀಡಿಯೋ ವೈರಲ್ ..
 

ಮೊದಲು ಮಣಿರತ್ನಂ ಕೂಡ ಮ್ಯಾಡಿಯನ್ನು ತಿರಸ್ಕರಿಸಿದ್ದರಂತೆ. 1996ರಲ್ಲಿ ಸಂತೋಷ್‌ ಶಿವನ್‌ ಚಿತ್ರೀಕರಿಸಿದ ಒಂದು ಸ್ಯಾಂಡಲ್‌ವುಡ್‌ ಸಾಬೂನಿನ ಜಾಹೀರಾತಿನಲ್ಲಿ ಮಾಧವನ್‌ ಕಾಣಿಸಿಕೊಂಡರು. ಮಣಿರತ್ನಂ ಅಂವರಿಗೆ ಮ್ಯಾಡಿಯನ್ನು ಶಿಫಾರಸು ಮಾಡಿದ್ದು ಅವರೇ. ಆಗ ಮಣಿ ಇರುವರ್‌ ಫಿಲಂಗೆ ಸ್ಕ್ರೀನ್‌ ಟೆಸ್ಟ್‌ ನಡೆಸುತ್ತಿದ್ದರು. ಅದಕ್ಕೆ ಮ್ಯಾಡಿ ಆಯ್ಕೆಯಾದರು. ಆದರೆ ಅದಕ್ಕೂ ಮೊದಲಿನ ತಮಿಳ್‌ಸೆಲ್ವನ್‌ ಚಿತ್ರದ ಸ್ಕ್ರೀನ್‌ ಟೆಸ್ಟ್‌ನಲ್ಲಿ ಮ್ಯಾಡಿ ಮಣಿಗೆ ಒಪ್ಪಿಗೆಯಾಗಲಿಲ್ಲ. ಅದಕ್ಕೆ ಕಾರಣ, ಅವರಿಗೆ ಬೇಕಾಗಿದ್ದುದು ಸೀನಿಯರ್‌ ಲುಕ್‌, ಮಾಧವನ್‌ ಅವರ ಕಣ್ಣುಗಳು ತುಂಬಾ ಎಳಸು ಅನಿಸಿದ್ದವು ಅವರಿಗೆ. ನಂತರ ಮಣಿರತ್ನಂ ಅವರ ಹಲವು ಚಿತ್ರಗಳಲ್ಲಿ ಮ್ಯಾಡಿ ಅನಿವಾರ್ಯ ನಟ ಎನ್ನಿಸಿದರು.
 

ಐದು ಭಾಷೆಗಳಲ್ಲಿ ಹೊಸಬರ ಚಿತ್ರ; ಗಮನ ಸೆಳೆಯುತ್ತಿರುವ 'ಕಾಲವೇ ಮೋಸಗಾರ' ..


ಮಾಧವನ್‌ ಅವರ ಆಕ್ಟಿಂಗ್‌ ಟ್ಯಾಲೆಂಟ್‌ ತಿಳಿಯಬೇಕಾದರೆ ಅಲೈಪಾಯುದೆ, ತ್ರೀ ಈಡಿಯಟ್ಸ್, ವಿಕ್ರಮ್‌ ವೇದಾ, ತನು ವೆಡ್ಸ್‌ ಮನು, ರಂಗ್‌ ದೇ ಬಸಂತಿ, ಕಣ್ಣತ್ತಿಲ್‌ ಮಿತ್ತಮಿಟ್ಟಾಲ್‌, ಅನ್ಬೇ ಶಿವಮ್‌, ಮಿನ್ನಾಲೇ ಫಿಲಂಗಳನ್ನು ನೋಡಬೇಕು. ಚಾಕಲೇಟ್‌ ಹೀರೋನಿಂದ ಹಿಡಿದು ಟಫ್‌ ಇನ್‌ಸ್ಪೆಕ್ಟರ್‌ವರೆಗೆ ಹಲವು ಪಾತ್ರಗಳನ್ನು ನಿರ್ವಹಿಸಿರುವ ಮಾಧವನ್ ಸೋಶಿಯಲ್‌ ಸೈಟ್‌ಗಳಲ್ಲೂ ತುಂಬ ಆಕ್ಟಿವ್. ತಮ್ಮ ಅಭಿಪ್ರಾಯವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ.
 

ಚಿರಂಜೀವಿ ಕುಟುಂಬದ ಮೇಲೆ ಜೇನು ದಾಳಿ; ಫೋಟೋ ವೈರಲ್ ?
 

ಹಿಂದೊಮ್ಮೆ ಅವರ ಗುರೂಜಿ ಅವರ ಪಾದದ ಬಳಿಯಲ್ಲಿ ಕುಳಿತ ಚಿತ್ರ ಪೋಸ್ಟ್‌ ಮಾಡಿದ್ದರು. ಅದರ ಹಿನ್ನೆಲೆಯಲ್ಲಿ ಒಂದು ಕ್ರಿಶ್ಚಿಯನ್‌ ಕ್ರಾಸ್‌ ಕಾಣಿಸುತ್ತಿತ್ತು. ಅದನ್ನು ಟ್ರಾಲ್‌ ಒಬ್ಬ ಕಾಮೆಂಟ್‌ ಮಾಡಿದ್ದ. ಅದಕ್ಕೆ ಮಾಧವನ್‌, 'ಅಲ್ಲಿ ಸಿಕ್ಖರ ಗುರು ಗ್ರಂಥ ಸಾಹಿಬ್‌ ಕೂಡ ಇರೋದು ನಿಮಗೆ ಕಾಣಿಸ್ತಿಲ್ವೇ?'' ಎಂದು ಪ್ರತ್ಯುತ್ತರಿಸಿ ಆತನ ಬಾಯಿ ಮುಚ್ಚಿಸಿದ್ದರು. ಮ್ಯಾಡಿ ಇನ್ನಷ್ಟು ಫಿಲಂಗಳಲ್ಲಿ ನಮ್ಮನ್ನು ರಂಜಿಸಲಿ ಅಂತ ಹಾರೈಸೋಣ.

 

Birthday boy Madhavan loved and married his student

 

Follow Us:
Download App:
  • android
  • ios