ಚಿರಂಜೀವಿ ಕುಟುಂಬದ ಮೇಲೆ ಜೇನು ದಾಳಿ; ಫೋಟೋ ವೈರಲ್ ?
ಆಪ್ತರೊಬ್ಬರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡ ಚಿರಂಜೀವಿ ಕುಟುಂಬದವರ ಮೇಲೆ ಜೇನು ಹುಳ ದಾಳಿ ಮಾಡಿದೆ...
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಸಮೇತರಾಗಿ ವಿವಾದಾತ್ಮಕ ದೋಮಕೊಂಡ ಕೋಟೆಯ ವಾರಸರು ಎನ್ನಲಾಗುವ ಉಮಾಪತಿ ರಾವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಜೇನುನೊಣಗಳು ಚಿರಂಜೀವಿ ಸಹಿತ ಕುಟುಂಬದವರ ಮೇಲೆ ದಾಳಿ ಮಾಡಿದೆ.
ಈಕೆ ನನ್ನ ತಾಯಿಯಲ್ಲ, ಮಾನವೀಯತೆ ಮೆರೆಯುತ್ತಿರುವ ಈ ಮಹಾತಾಯಿಗೆ ಧನ್ಯವಾದ: ಚಿರಂಜೀವಿ
ಚಿರಂಜೀವಿ ಸೊಸೆ ಉಪಾಸನಾ ಅವರ ತಾತ ಉಮಾಪತಿ ರಾವ್ ಅವರಿಗೆ 92 ವರ್ಷ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಿಧನರಾಗಿದ್ದರು. ಭಾನುವಾರ ಅವರ ಅಂತ್ಯಕ್ರಿಯೆಯನ್ನು ನಿಜಾಮಾಬಾದ್‌ನ ದ್ಯಾಮಕೊಂಡದಲ್ಲಿ ಆಯೋಜಿಸಲಾಗಿದ್ದು ಪಾಲ್ಗೊಂಡ ಚಿರಂಜೀವಿ ಹಾಗೂ ಕುಟುಂಬಸ್ಥರ ಮೇಲೆ ಏಕಾಏಕಿ ಜೇನು ಗುಂಪೊಂದು ದಾಳಿ ಮಾಡಿದೆ.
ಉಮಾಪತಿ ರಾವ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಉರ್ದು ಭಾಷೆಯಲ್ಲಿ ಶಾಯರಿಗಳನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲದೆ ತಿರುಮಲ ತಿರುಪತಿ ದೇವಸ್ಥಾನದ ಮೊದಲ ಎಕ್ಸ್‌ಕ್ಯೂಟಿವ್ ಆಫೀಸರ್ ಕೂಡ ಆಗಿದ್ದರು. ಉಮಾಪತಿ ಅವರು ಮೇ 27ರಂದೇ ನಿಧನರಾಗಿದ್ದರು ಆದರೆ ಪುತ್ರ ಅಮೆರಿಕದಿಂದ ಬರಬೇಕಿದ್ದ ಕಾರಣ ಅಂತಿಕ್ರಿಯೆಯನ್ನು ಭಾನುವಾರ ಮಾಡಲಾಗಿತ್ತು.
ಜೇನು ದಾಳಿಯಾದ ಸಂದರ್ಭದಲ್ಲಿ ರಾಮ್ ಚರಣ್ ಹಾಗೂ ಅವರ ಬಾಡಿಗಾರ್ಡ್‌ಗಳು ಕುಟುಂಬದವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಘಟನೆಯಿಂದ ಯಾರಿಗೂ ಅಪಾಯವಾಗಿಲ್ಲವೆಂದು ತಿಳಿದುಬಂದಿದೆ. 'ಜೇನು ದಾಳಿ ಆಗಿರುವುದು ನಿಜ ಆದರೆ ಅದರಿಂದ ಯಾರಿಗೂ ತೊಂದರೆಯಾಗಿಲ್ಲ. ರಾಮ್ ಚರಣ್ ಹಾಗೂ ಚಿರಂಜೀವಿ ಗಾರೂ ಸೇಫ್ ಆಗಿದ್ದಾರೆ' ಎಂದು ಆಪ್ತರು ತಿಳಿಸಿದ್ದಾರೆ.
'ನಮ್ಮ ತಾತ ಕೆ.ಉಮಾಪತಿ ರಾವ್ ದೋಮಕೊಂಡ (15 ಜೂನ್ 1928-27 ಮೇ 2020) IAS ಆಫೀಸರ್ ಆಗಿದ್ದವರು. ಇಂತಹ ಮಹಾವ್ಯಕ್ತಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ದೇವರನ್ನು ಹೆಚ್ಚಾಗಿ ನಂಬುತ್ತಾರೆ. ದೇವರ ಬಳಿ ಹೋಗಿರುವ ಇವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ಟಿಟರ್‌ನಲ್ಲಿ ಉಪಾಸನಾ ಬರೆದುಕೊಂಡಿದ್ದಾರೆ.