Asianet Suvarna News Asianet Suvarna News

ಪ್ರಸವದ ನಂತರವೂ ಫಿಟ್ ಆಗಿರೋದು ಹೇಗೆ? ವಿಡಿಯೋ ಮೂಲಕ ನಟಿ ಬಿಪಾಶಾ ಬಸು ಸೀಕ್ರೆಟ್​ ರಿವೀಲ್​

43ನೇ ವಯಸ್ಸಿನಲ್ಲಿ ತಾಯಿಯಾಗಿರೋ ನಟಿ ಬಿಪಾಷಾ ಬಸು ಇಂದಿಗೂ ತಮ್ಮ ಸೌಂದರ್ಯ, ಫಿಟ್​ನೆಸ್​ ಕಾಪಾಡಿಕೊಂಡಿದ್ದು, ಅದರ ಗುಟ್ಟು ಬಿಟ್ಟುಕೊಟ್ಟಿದ್ದಾರೆ. 
 

Bipasha Basu reveals  postpartum weight loss secret rebuilding a stronger version suc
Author
First Published Jun 9, 2023, 5:58 PM IST

ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು (Bipasha Basu) 2016ರಲ್ಲಿ ಕರಣ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಕಳೆದ ನವೆಂಬರ್​ 12ರಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  6 ವರ್ಷಗಳ ಬಳಿಕ ಬಿಪಾಶಾ ಮೊದಲ ಮಗುವಿಗೆ ಜನ್ಮ ನೀಡಿದ್ದು,  ಮಗಳಿಗೆ ದೇವಿ ಬಸು ಸಿಂಗ್ ಗ್ರೋವರ್ ಎಂದು ಹೆಸರಿಟ್ಟಿದ್ದಾರೆ.  ಬಿಪಾಶಾ ಬಸು ಎಂದಾಕ್ಷಣ ನೆನಪಾಗುವುದು ಫಿಟ್​ನೆಸ್​ ಕುರಿತು. ವಯಸ್ಸು 44 ಆದರೂ ಬಿಪಾಶಾ ಇಂದಿಗೂ ಫಿಟ್​ನೆಸ್​ ಕಾಪಾಡಿಕೊಂಡು ಬಂದಿದ್ದಾರೆ.  ಅಜನಬಿ,  ರಾಜ್‌, ಧೂಮ್‌ 2 ಮುಂತಾದ ಹಿಟ್‌ ಚಿತ್ರಗಳನ್ನು ನೀಡಿರೋ ಬಿಪಾಶಾ ಅಂದಿನಿಂದ ಇಂದಿನವರೆಗೂ  ಬ್ಯೂಟಿ ಹಾಗೂ ಫಿಟ್‌ನೆಸ್‌ಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಲೇ ಬಂದಿದ್ದಾರೆ.  ಅವರು ಗರ್ಭಿಣಿಯಾಗಿದ್ದಾಗ ಸಹಜವಾಗಿ ಅವರ ತೂಕದಲ್ಲಿ  ಏರಿಕೆಯಾಗಿತ್ತು. ಗರ್ಭಿಣಿ ಇರುವಾಗಲೂ ನಿತ್ಯ ವ್ಯಾಯಾಮ ಹಾಗೂ ಯೋಗ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಇದರ ಹೊರತಾಗಿಯೂ ತೂಕ ಹೆಚ್ಚಾಗಿತ್ತು.

ಇದೀಗ ಪುನಃ ನಟಿ ತೂಕ ಇಳಿಸಿಕೊಂಡಿದ್ದಾರೆ. ಮಗುವಾದ ಮೇಲೆ ಸಾಮಾನ್ಯವಾಗಿ ಮಹಿಳೆಯರ ದೇಹ ದಪ್ಪಗಾಗಲು ಶುರುವಾಗುತ್ತದೆ. ಆದರೆ ಚಿತ್ರ ತಾರೆಯರಿಗೆ ಸೌಂದರ್ಯ, ಫಿಟ್​ನೆಸ್ಸೇ (Fitness) ಮುಖ್ಯ, ಇಲ್ಲದಿದ್ದರೆ ಅವರ ಬೇಡಿಕೆ ಕುಗ್ಗುತ್ತದೆ ಎನ್ನುವ ಕಾರಣಕ್ಕೆ ಫಿಟ್​ನೆಸ್​ ಕಾದುಕೊಳ್ಳುತ್ತಾರೆ. ಅದೇ ರೀತಿ ಬಿಪಾಶಾ ಬಸು ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ತಮ್ಮ ಫಿಟ್​ನೆಸ್​ ಮಂತ್ರದ ವಿಡಿಯೋ ಕೂಡ ಶೇರ್​ ಮಾಡಿದ್ದಾರೆ.  ಬಾಣಂತನದ ನಂತರ ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.  ಇದರ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿರೋ ನಟಿ  'ಅಮ್ಮ ಕುಸಿಯುವುದಿಲ್ಲ' ಎಂದು  ಬರೆದುಕೊಂಡಿದ್ದಾರೆ. ವಿಡಿಯೋ ಜೊತೆಗೆ  'ಲವ್‌ ಯುವರ್‌ಸೆಲ್ಪ್‌ , 'ಮಾಮಾ ಕ್ಯಾನ್ ಡು ಇಟ್', 'ಟ್ರಾನ್ಸ್‌ಫಾರ್ಮ್', 'ಗರ್ಭಧಾರಣೆಯ ನಂತರ ತೂಕ ಇಳಿಸುವ ಪ್ರಯಾಣ' ಮತ್ತು 'ನಥಿಂಗ್‌ ಇಸ್‌ ಇಂಪಾಸಿಬಲ್‌ ' ಎಂಬ ಹ್ಯಾಶ್‌ಟ್ಯಾಗ್‌ಗಳನ್ನೂ ನೀಡಿದ್ದಾರೆ. ವಿಡಿಯೋದಲ್ಲಿ  ಫಿಟ್​ನೆಸ್​ ತರಬೇತುದಾರ ಮಹೇಶ್‌ ಘಾನೇಕರ್‌ ಬಿಪಾಶಾಗೆ ಮಾರ್ಗದರ್ಶನ ನೀಡುವುದನ್ನು ನೋಡಬಹುದು.  ವ್ಯಾಯಾಮವಷ್ಟೇ ಅಲ್ಲದೇ,   ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಸೇವನೆಯನ್ನು ನಿಯಂತ್ರಿಸಬೇಕು,  ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಮಹೇಶ್​ ಅವರು ಬಿಪಾಶಾಗೆ ಸಲಹೆ ನೀಡಿದ್ದಾರೆ.
 

Shilpa Shetty Birthday: ಶಿಲ್ಪಾ ಜತೆ ಸಂಬಂಧ, ಟ್ವಿಂಕಲ್​ ಜತೆ ಮದ್ವೆ, ಅಕ್ಷಯ್​ ಮಹಾಮೋಸ ಬಯಲು!

ಇದೇ ವೇಳೆ ನಟಿ ಬಿಪಾಶಾ ಬಸು ಇದಾಗಲೇ ಕೆಲವೊಂದು ಹೆಲ್ತ್​ ಟಿಪ್ಸ್​ಗಳನ್ನು ನೀಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಮಗುವಾದ ಮೇಲೆ ಮಹಿಳೆಯರು ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು, ಫಿಟ್​ ಆಗಿ ಇರಲು ಯಾವೆಲ್ಲಾ ವ್ಯಾಯಾಮಗಳನ್ನು ಮಾಡಬೇಕು ಎನ್ನುವ ಕುರಿತು ಮಾತನಾಡಿದ್ದಾರೆ. ಅವರು ಈಗ ಶೇರ್​ ಮಾಡಿರುವ ವಿಡಿಯೋದಲ್ಲಿಯೂ ಇವುಗಳನ್ನು ಕಾಣಬಹುದಾಗಿದೆ. 

ಡಂಬಲ್ ಲಂಜ್, ಎಲ್ಬೋ ಪ್ಲಾಂಕ್‌
ಡಂಬಲ್ ಲಂಜ್ ಪ್ರಸವಾನಂತರ ಕಾಲಿಗೆ ಶಕ್ತಿ ತುಂಬಲು ಡಂಬಲ್ ಲುಂಜ್  ಅತ್ಯುತ್ತಮ ವ್ಯಾಯಾಮವಾಗಿದೆ.  ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ. ಎಲ್ಬೋ ಪ್ಲಾಂಕ್‌ (Elbow Plank) ಪೂರ್ಣ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಕರಿಸುತ್ತದೆ ಹಾಗೂ ಪ್ರಸವಾನಂತರ ಕಾಡುವ ಬೆನ್ನುನೋವಿನ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. 

 ಪ್ಲೇಟ್ ಓವರ್​ಹೆಡ್​  ಲಂಜ್,  ರಾಡ್ ಲೆಗ್ ಪ್ರೆಸ್
 ಪ್ಲೇಟ್ ಓವರ್​ಹೆಡ್​  ಲಂಜ್ ದೇಹವನ್ನು ಹೆಚ್ಚು ಶ್ರಮದಾಯಕ ವ್ಯಾಯಾಮಗಳಿಗೆ ಸಿದ್ಧಪಡಿಸಲು ಈ ವ್ಯಾಯಾಮವು ಸಹಕಾರಿಯಾಗಿದೆ.  ಭುಜಗಳನ್ನು ದೃಢಪಡಿಸಲು ಇದು ಉಪಯೋಗಕಾರಿ. ಈ ವ್ಯಾಯಾಮವು ಸ್ಥಿರತೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಉಪಯೋಗಕಾರಿಯಾಗಿದೆ.  ಇನ್ನು ರಾಡ್ ಲೆಗ್ ಪ್ರೆಸ್​, ಕಾಲುಗಳನ್ನು ಬಲಪಡಿಸಿ ಬೆನ್ನಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸಿ ಫಿಟ್‌ ಆಗಿಸುತ್ತದೆ.
 
 ಬೆಂಚ್ ಟ್ಯಾಪ್ಸ್, ಗ್ಲುಟ್ ಬ್ರಿಡ್ಜ್‌
ಬೆಂಚ್ ಟ್ಯಾಪ್ಸ್ ದೇಹದ ಶಕ್ತಿಯನ್ನು ಸುಧಾರಿಸುವ ಮತ್ತೊಂದು ವ್ಯಾಯಾಮ. ಹೃದಯದ ಸಮಸ್ಯೆಗಳ ನಿವಾರಣೆಗೆ ಇದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ವ್ಯಾಯಾಮ ಮಾಡುವಾಗ ಎತ್ತರದ ಪ್ಲಾಟ್‌ಫಾರ್ಮ್‌ನಲ್ಲಿ ನಿರಂತರವಾಗಿ  ಪಾದಗಳನ್ನು  ಟ್ಯಾಪ್ ಮಾಡಬೇಕು.  ಹೀಗೆ ಮಾಡುವುದರಿಂದ  ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ಕ್ಯಾಲೊರಿ ಬರ್ನ್‌ ಆಗುತ್ತವೆ.  ಗ್ಲುಟ್ ಬ್ರಿಡ್ಜ್‌ ಸ್ನಾಯುಗಳನ್ನು ಬಲಪಡಿಸಲು ಈ ವ್ಯಾಯಾಮ ಸಹಕಾರಿ. 

ಹಾಫ್‌ ನೀಲಿಂಗ್‌ ಕೆಟಲ್ಬೆಲ್ ವಿಂಡ್​ಮಿಲ್​,  ಸಿಂಗಲ್ ಡಂಬೆಲ್ಸ್​ ಸ್ಕ್ವಾಟ್‌ 
ಗರ್ಭಾವಸ್ಥೆಯಲ್ಲಿ ದೈಹಿಕವಾಗಿ ಬಹಳಷ್ಟು ಬದಲಾವಣೆಗಳಾಗಿ ತೂಕ ಹೆಚ್ಚಾಗಿರುವುದನ್ನು ಕರಗಿಸಲು ಹಾಫ್‌ ನೀಲಿಂಗ್‌ ಕೆಟಲ್ಬೆಲ್ ವಿಂಡ್​ಮಿಲ್​ ಸಹಕಾರಿ.  ಸಿಂಗಲ್ ಡಂಬೆಲ್ಸ್​ ಸ್ಕ್ವಾಟ್‌ ವ್ಯಾಯಾಮವು ದೇಹದಲ್ಲಿನ ಹೆಚ್ಚಿನ ಕೊಬ್ಬನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.

Dimple Kapadia Birthday: 16ಕ್ಕೆ ಮದ್ವೆ, 17ಕ್ಕೆ ಮಗು: ಡಿಂಪಲ್​, ರಾಜೇಶ್​ ಖನ್ನಾ ದಾಂಪತ್ಯದ ಕಥೆ-ವ್ಯಥೆ!

 ಪ್ಲೇಟ್ ಪುಶ್, ಡಂಬೆಲ್ಸ್‌ ಪಂಚ್‌ 
ಎದೆ, ಭುಜಗಳಿಗೆ ವ್ಯಾಯಾಮ ನೀಡಲು  ಪ್ಲೇಟ್ ಪುಶ್ ಸಹಕಾರಿಯಾಗಿದೆ. ಇನ್ನು ಡಂಬೆಲ್ಸ್‌ ಪಂಚ್‌. ಕೈಯಲ್ಲಿ ಡಂಬೆಲ್ಸ್​ನೊಂದಿಗೆ  ಗುದ್ದುವುದರಿಂದ  ದೇಹದ  ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.

 

Follow Us:
Download App:
  • android
  • ios