ತಿರುವನಂತಪುರಂ(ನ.07): ಡ್ರಗ್ಸ್ ಮಾಫಿಯಾ ಸಂಬಂಧ ಮಾಲಿವುಡ್ ನಟ ಬಿನೀಶ್ ಕೊಡಿಯೇರಿ ಮನೆ ಮೇಲೆ ದಾಳಿ ನಡೆದ ಬೆನ್ನಲ್ಲೇ ಸರ್ಕಾರ ಮೇಲೆ ಕೆಂದ್ರ ತನಿಖಾ ಸಂಸ್ಥೆಗಳ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಶುಕ್ರವಾರದಿಂದ ಎರಡು ದಿನದ ಸಭೆ ನಡೆಸಲಿದೆ. ನಟನ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಕೇರಳದ ಆಡಳಿತ ಪಕ್ಷದ ಸ್ಪಷ್ಟ ನಿಲುವು ಈ ಸಭೆಯ ನಂತರ ಸಿಗಲಿದೆ.

ನಟ ಬಿನೀಶ್ ಮನೆ ಮೇಲೆ ನಡೆದ ಇಡಿ ದಾಳಿ ರಾಜಕೀಯ ಪ್ರೇರಿತ ಎಂಬ ಭಾವನೆ ಸಿಪಿಎಂನಲ್ಲಿದೆ. ಆದರೆ ಈವರೆಗೂ ಪಕ್ಷ ಈ ಘಟನೆಯಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿಲ್ಲ. ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವಲ್ಲಿಯೂ ಸಿಪಿಎಂ ಹೆಚ್ಚಿನ ಜಾಗರೂಕತೆ ವಹಿಸುತ್ತಿದೆ.

ಬೆಂಗಳೂರು ಡ್ರಗ್ಸ್ ಜಾಲಕ್ಕೆ ಕೇರಳದಿಂದ ಹಣ: ಬೇನಾಮಿ ಹೆಸರಲ್ಲಿ ಯುವನಟನ ಅಕ್ರಮ ಆಸ್ತಿ

ಈ ಪ್ರಕರಣದ ಸಂಬಂಧ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರೂ ಸಿಎಂ ಪಿಣರಾಯಿ ವಿಜಯನ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ಘಟನೆಯಲ್ಲಿ ಕುಟುಂಬವು ಕಾನೂನು ನೆರವು ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ, ಬಿನೀಶ್ ಅವರ ಮನೆಯಲ್ಲಿ ನಡೆದ ನಾಟಕೀಯ ಘಟನೆ ವೈರಲ್ ಆದಾಗ ಸಿಪಿಎಂನ ಲಭ್ಯವಿರುವ ಕಾರ್ಯದರ್ಶಿಗಳು ಇಲ್ಲಿನ ಎಕೆಜಿ ಕೇಂದ್ರದಲ್ಲಿ ಭೇಟಿಯಾಗಿದ್ದಾರೆ.

ತಂದೆ ಪಕ್ಷ ಕಟ್ಟಿದ್ದಾರೆ, ನನಗದು ಸಂಬಂಧವಿಲ್ಲ; ವಿಜಯ್ ದಳಪತಿ!

ಸಭೆಯಲ್ಲಿ ಸಿಎಂ ಪಿಣರಾಯಿ ವಿಜಯ್, ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಸದಸ್ಯರಾದ ಎಸ್‌. ರಾಮಚಂದ್ರನ್ ಪಿಳ್ಳೈ, ಎಂಎ ಬೇಬಿ ಇದ್ದರು. ಬಿನೀಶ್ ಮನೆಯಲ್ಲಿ ನಡೆದ ಘಟನೆಗಳು ಮಾನವ ಹಕ್ಕಿನ ಉಲ್ಲಂಘನೆ ಎಂದೂ ಆರೋಪಿಸಲಾಗಿದೆ.