ಬೆಂಗಳೂರಿನ ಡ್ರಗ್ಸ್ ಟ್ರಾಫಿಕ್ಕಿಂಗ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ತಂಡ ಕೇರಳದಲ್ಲಿ ಇದರ ಜಾಡು ಹಿಡಿದಿದೆ. ಬೇನಾಮಿ ಹೆಸರಲ್ಲಿ ಅಕ್ರಮ ಆಸ್ತಿ ನಿರ್ವಹಿಸುತ್ತಿದ್ದ ಮಾಲಿವುಡ್ ಯುವನಟ ಬಿನೀಶ್‌ ಕೊಡಿಯೇರಿಗೆ ಈಗ ಸಂಕಟ ಎದುರಾಗಿದ್ದು, ಕರ್ನಾಟಕ ಜಾರಿ ನಿರ್ದೇಶನಾಲಯ ತಂಡ ಕೇರಳದಲ್ಲಿ ರೈಡ್‌ಗಳನ್ನು ನಡೆಸಿದೆ.

ಬಿನೀಶ್ ಕೊಡಿಯೇರಿ ತನ್ನ ಜಾಡು ಹಿಡಿಯದಿರಲು ಈ ಕೆಲಸಗಳಿಗೆ ಬೇನಾಮಿ ಹೆಸರುಗಳನ್ನು ಬಳಸುತ್ತಿದ್ದದ್ದು ತನಿಖೆಯಲ್ಲಿ ಬಯಲಾಗಿದೆ. ಇಡಿ ವರದಿಯು ಬೆಂಗಳೂರು ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದು 2012 ರಿಂದಲೂ ಬಿನೀಶ್ ಅವರ ಬ್ಯಾಂಕ್ ಖಾತೆಗಳಲ್ಲಿ ಭಾರಿ ಪ್ರಮಾಣದ ಹಣವನ್ನು ಜಮಾ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

ಥಿಯೇಟರ್‌ಗಳಲ್ಲಿ ಬಾಹುಬಲಿ ಸಿನಿಮಾ ರಿ-ರಿಲೀಸ್ : ಡೇಟ್ಸ್ ಹೀಗಿವೆ ನೋಡಿ

ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಮತ್ತು ಖಾತೆಗಳಲ್ಲಿ ನಗದು ಠೇವಣಿಯ ನುಡವೆ ಬಹಳಷ್ಟು ವ್ಯತ್ಯಾಸವಿತ್ತು ಎಂದು ತಿಳಿದುಬಂದಿದೆ. 2018-19ರಲ್ಲಿ, ಒಟ್ಟು 54.89 ಲಕ್ಷವನ್ನು ಅವರ ಖಾತೆಗಳಲ್ಲಿ ಜಮಾ ಮಾಡಲಾಗಿದೆ. ಅವರ ಐಟಿಆರ್ ಪ್ರಕಾರ ಘೋಷಿತ ಆದಾಯ 13.20 ಲಕ್ಷ ಎಂದು ನಮೂದಿಸಲಾಗಿದೆ.

ಇಂತಹ ದೊಡ್ಡ ನಗದು ಠೇವಣಿಗಳು ಮಾದಕವಸ್ತು ವ್ಯವಹಾರದ ಮೂಲಕ ಸಿಕ್ಕಿರುವ ಅಕ್ರಮ ಆದಾಯ ಎಂದು ಇಡಿ ಹೇಳಿದೆ. ಇದಲ್ಲದೆ ವಿಚಾರಣೆ ಸಂದರ್ಭ, ಬಿನೀಶ್ ಎರಡು ಬೆನಾಮಿ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಡ್ರಗ್ಸ್ ದಂಧೆ: ದೀಪಿಕಾ ಮ್ಯಾನೇಜರ್ ಕೆಲಸದಿಂದ ಔಟ್..!

ಎರ್ನಾಕುಳಂನಲ್ಲಿ ನೋಂದಾಯಿಸಲಾದ ರಿಯಾನ್ಹಾ ಈವೆಂಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಯೂಶ್ ಈವೆಂಟ್ಸ್ ಮ್ಯಾನೇಜ್ಮೆಂಟ್ ಮತ್ತು ಬೆಂಗಳೂರಿನ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ವಿಚಾರಣೆ ವಿಸ್ತರಿಸಲು ಇಡಿ ತನ್ನ ವರದಿಯಲ್ಲಿ ಅನುಮತಿ ಕೋರಿದೆ.