ಬಿಗ್ ಬಾಸ್ ಕನ್ನಡ ಶೋಗೆ ದಿನಗಣನೆ; ಸ್ಪರ್ಧಿಗಳ ಪಟ್ಟಿ ಅಂತಿಮವಾಯ್ತಾ?

ಬಿಗ್ ಬಾಸ್ ಶೋದ ಈವರೆಗಿನ 9 ಸೀಸನ್‌ಗಳು ಇನ್ನೋವೇಟಿವ್‌ ಫಿಲ್ಮ್‌ ಸಿಟಿಯ 'ಬಿಗ್ ಬಾಸ್ ಮನೆ' ಯಲ್ಲಿ ನಡೆದಿದೆ. ಆದರೆ, ಈ ಬಾರಿ ಲೊಕೇಶನ್ ಬೇರೆ ಕಡೆ ಶಿಫ್ಟ್ ಆಗಿದೆ ಎನ್ನಲಾಗಿದೆ. ತಾವರೆಕೆರೆ ಮತ್ತು ದೊಡ್ಡ ಆಲದ ಮರದ ಮಧ್ಯೆ ಇರುವ ಒಂದು ಸೈಟ್‌ನಲ್ಲಿ ಈ ಬಾರಿಯ 'ದೊಡ್ಮನೆ' ನಿರ್ಮಾಣಗೊಂಡಿದೆ. 

Bigg Boss kannada season 10 starts on October 8 2023

ಮುಂದಿನ ತಿಂಗಳು ಕನ್ನಡದ 'ಬಿಗ್ ಬಾಸ್' ಶೋ ಹಂಗಾಮಾ ಕಿರುತೆರೆಯಲ್ಲಿ ಶುರುವಾಗಲಿದೆ.  ಹಲವರ ನಿರೀಕ್ಷಯ ಈ ಶೋದ 10 ನೇ ಸೀಸನ್  ಮುಂದಿನ ತಿಂಗಳು, ಅಂದರೆ ಅಕ್ಟೋಬರ್ 8ರಿಂದ 'ಕಲರ್ಸ್ ಕನ್ನಡ'ದಲ್ಲಿ ಮೂಡಿ  ಬರಲಿದೆ. ಹಿಂದಿನ ದಿನ, ಅಂದರೆ ಅಕ್ಟೋಬರ್ 7 ರಂದು 'ಕಲರ್ಸ್ ಕನ್ನಡ' ಚಾನೆಲ್ ಈ ಶೋದ ಲಾಂಚ್ ಪ್ರೋಗ್ರಾಂ ಆಯೋಜನೆಯನ್ನು ಫಿಕ್ಸ್ ಮಾಡಿದೆ. ಸ್ಪರ್ಧಿಗಳ ಹೆಸರು ಇನ್ನೂ ಅಂತಿಮವಾಗಿಲ್ಲ. ಆದರೆ, ಭಾರೀ ಊಹಾಪೋಹಗಳು ಎಲ್ಲೆಲ್ಲೂ ಹರಿದಾಡುತ್ತಿವೆ. 

ಸುದೀಪ್ ಇದ್ದೇ ಇರುತ್ತಾರೆ; ಸುದೀಪ್‌ಗಾಗಿಯೇ ಶೋ ನೋಡುವವರೇ ಹೆಚ್ಚು..

ಹೌದು, ನಟ ಕಿಚ್ಚ ಸುದೀಪ್ ಎಂದಿನಂತೆ ಬಿಗ್ ಬಾಸ್ ಶೋ ಹೈ-ಲೈಟ್. ಸುದೀಪ್‌ ಅವರಿಗಾಗಿಯೇ ಬಿಗ್ ಬಾಸ್ ನೋಡುವ ವೀಕ್ಷಕರೇ ಹೆಚ್ಚು ಎನ್ನುವ ಸಂಗತಿ ಗುಟ್ಟೇನೂ ಅಲ್ಲ. ವೀಕೆಂಡ್ ನಲ್ಲಿ ಬರುವ ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮನೆಯ ಸದಸ್ಯರಿಗೆ ಮಾಡುವ ಪಾಠ, ಸದಸ್ಯರ ಪೇಚಾಟ ಎಲ್ಲವೂ ನೋಡುಗರಿಗೆ ಭಾರೀ ಮಜಾ ಕೊಡುತ್ತವೆ ಎನ್ನುವ ಮಾತಿದೆ. ಶೋ ಮುಂದವರಿದಂತೆ, 16 ಸದಸ್ಯರು ಇರುವ ಮನೆಯಲ್ಲಿ ವಾರಕ್ಕೊಬ್ಬರಂತೆ ಖಾಲಿ ಆಗುತ್ತಾರೆ. ಮುಂದಿನ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬ ಚರ್ಚೆ ಎಲ್ಲಾ ಕಡೆ ಇರುತ್ತದೆ. 

ಎಂದಿನಂತೆ ಬಿಗ್‌ ಬಾಸ್‌ ಸ್ಪರ್ಧಿಗಳು 16 ಮಂದಿ ಇರಲಿದ್ದಾರೆ. ಆದರೆ ಯಾರೆಲ್ಲಾ ಇದ್ದಾರೆ ಎನ್ನುವ ಕುತೂಹಲಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಜತೆಜತೆಯಲಿ ನಟಿ ಮೇಘಾ  ಶೆಟ್ಟಿ, 'ನಾಗಿಣಿ 2' ಸೀರಿಯಲ್ ಖ್ಯಾತಿಯ ನಮ್ರತಾ ಗೌಡ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌, ಇತ್ತೀಚೆಗೆ ಲಕ್ಷಣ ಧಾರವಾಹಿಯಲ್ಲಿ ಮಿಂಚಿದ್ದ ಸುಕೃತಾ ನಾಗ್‌, ಗೀತಾ ಸೀರಿಯಲ್‌ನ ಭವ್ಯಾ ಗೌಡ ಹೊಸ ಮನೆಗೆ ಬರಬಹುದು ಎನ್ನಲಾಗುತ್ತಿದೆ. ಡಾ.ಬ್ರೋ ಇದ್ದರೆ ಒಳ್ಳೆಯದು ಎನ್ನುವ ಮಾತುಗಳು ಎಲ್ಲಡೆಯಿಂದ ಕೇಳಿ ಬರುತ್ತಿವೆ; ಬ್ರೋ ಬರುತ್ತಾರಾ, ಗೊತ್ತಿಲ್ಲ!

ರಾಮಾಚಾರಿ - ಚಾರು ಜನಮೆಚ್ಚಿದ ಜೋಡಿ : ತಾಂಡವ್ ಜನ ಮೆಚ್ಚಿದ ಶಕುನಿ…

ಹೆಚ್ಚಿನ ವೀಕ್ಷಕರಿಗೆ ಗೊತ್ತಿರುವಂತೆ, ಬಿಗ್ ಬಾಸ್ ಶೋದ ಈವರೆಗಿನ 9 ಸೀಸನ್‌ಗಳು ಇನ್ನೋವೇಟಿವ್‌ ಫಿಲ್ಮ್‌ ಸಿಟಿಯ 'ಬಿಗ್ ಬಾಸ್ ಮನೆ' ಯಲ್ಲಿ ನಡೆದಿದೆ. ಆದರೆ, ಈ ಬಾರಿ ಲೊಕೇಶನ್ ಬೇರೆ ಕಡೆ ಶಿಫ್ಟ್ ಆಗಿದೆ ಎನ್ನಲಾಗಿದೆ. ತಾವರೆಕೆರೆ ಮತ್ತು ದೊಡ್ಡ ಆಲದ ಮರದ ಮಧ್ಯೆ ಇರುವ ಒಂದು ಸೈಟ್‌ನಲ್ಲಿ ಈ ಬಾರಿಯ 'ದೊಡ್ಮನೆ' ನಿರ್ಮಾಣಗೊಂಡಿದೆ. ಈ ಬಾರಿಯ ಶೂಟಿಂಗ್‌ ಇದೇ ಮನೆಯಲ್ಲಿ ನಡೆಯಲಿದೆ ಎನ್ನುವ ಮಾಹಿತಿ ದೊರಕಿದೆ.

ತಮನ್ನಾ ಬಾಯ್‌ ಫ್ರೆಂಡ್‌ಗೆ 'ಮೊದಲು ಮದ್ವೆಯಾಗು, ಆಮೇಲೆ ಮಗು ಮಾಡ್ಕೋ' ಅಂದ ಫ್ಯಾನ್ಸ್!

ಒಟ್ಟಿನಲ್ಲಿ, ಮತ್ತೆ ಬಿಗ್ ಬಾಸ್ ಶುರುವಾಗುತ್ತಿದೆ. ಅದೇ ಸುದೀಪ್, ಮತ್ತೆ ಹೊಸ 16 ಸ್ಪರ್ಧಿಗಳು, ಹೊಸ ಮನೆ, ಹೊಸ ಮನಗಳ ನಡುವೆ ಗೆಲ್ಲುವ ಕುದುರೆ ಯಾರು ಎಂಬ ಪ್ರಶ್ನೆಗೆ ಉತ್ತರ ಮಾತ್ರ 100 ದಿನಗಳು ಕಳೆದ ಮೇಲೆ! ಎಲ್ಲರ ಚಿತ್ತ ಗೆಲ್ಲುವ ವ್ಯಕ್ತಿಯತ್ತ! ಆದರೆ, ಗೆಲ್ಲುವವರೆಗೆ ಅದು ಸೀಕ್ರೆಟ್, ಅದನ್ನು ನೋಡುವ ಕುತೂಹಲ ಕಂಟಿನ್ಯೂ ಆಗುತ್ತದೆ. ಅದೇ ಅಲ್ಲವೇ ಆಟ! ಬಿಗ್ ಬಾಸ್ ಶೋವನ್ನು ಹಲವರು ಊರ ಆಟ, ಊರ ಹಬ್ಬ ಎಂಬಂತೆ ನೋಡುತ್ತಾರೆ. ಇನ್ನೇನು, ಬಿಗ್ ಬಾಸ್ ಬಂದೇ ಬಿಡ್ತು, ನೋಡಲು ರೆಡಿಯಾಗಿ!

Latest Videos
Follow Us:
Download App:
  • android
  • ios