Asianet Suvarna News Asianet Suvarna News

9 ಅಲ್ಲ 1...: ಬಿಗ್ ಬಾಸ್ ಒಟಿಟಿ ಪ್ರೋಮೋ ಔಟ್, ಕಿಚ್ಚನ ಎಂಟ್ರಿಗೆ ಫ್ಯಾನ್ಸ್ ಖುಷ್

ಸದ್ಯ ಬಿಗ್ ಬಾಸ್ ಸೀಸನ್ 9ರ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚನ ಸ್ಟೈಲಿಶ್ ಎಂಟ್ರಿ ಪ್ರೇಕ್ಷಕರ ಹೃದಯಗೆದ್ದಿದೆ. ಕಿಚ್ಚಾ ಕಿಚ್ಚಾ...ಎಂದು ಕೂಗುತ್ತಿರುವ ಅಭಿಮಾನಿಗಳು. ಸೀಸನ್ 9ಗೆ ಆಲ್ ಬೆಸ್ಟ್ ಹೇಳುತ್ತಾ ಕಿರುಚಾಡುತ್ತಿರುವ ಫ್ಯಾನ್ಸ್. ಆದರೆ ಅಭಿಮಾನಿಗಳಲ್ಲಿ ಇದು ಸೀಸನ್ 1 ಎಂದು ಒತ್ತಿ ಒತ್ತಿ ಹೇಳುತ್ತಿರುವ ಸುದೀಪ್. ಏನಿದು ಅಂತಿರಾ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. 

Bigg Boss Kannada Ott; Kiccha Sudeep host reality Show promo released sgk
Author
Bengaluru, First Published Jul 23, 2022, 11:52 AM IST

ಕಿಚ್ಚಾ ಕಿಚ್ಚಾ...ಎಂದು ಕೂಗುತ್ತಿರುವ ಅಭಿಮಾನಿಗಳು. ಸೀಸನ್ 9ಗೆ ಆಲ್ ಬೆಸ್ಟ್ ಹೇಳುತ್ತಾ ಕಿರುಚಾಡುತ್ತಿರುವ ಫ್ಯಾನ್ಸ್. ಆದರೆ ಅಭಿಮಾನಿಗಳಲ್ಲಿ ಇದು ಸೀಸನ್ 1 ಎಂದು ಒತ್ತಿ ಒತ್ತಿ ಹೇಳುತ್ತಿರುವ ಸುದೀಪ್. ಏನಿದು ಅಂತಿರಾ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದು ಸದ್ಯ ಪ್ರೋಮೋ ರಿಲೀಸ್ ಆಗಿದೆ. ಅಂದಹಾಗೆ ಈ ಬಾರಿಯ ಬಿಗ್ ಬಾಸ್‌ನ ವಿಶೇಷತೆ ಎಂದರೆ ಟಿವಿಯಲ್ಲಿ ಬದಲಿಗೆ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಹೌದು ಮೊದಲ ಬಾರಿಗೆ ಕನ್ನಡದ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.  

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರೂಪಣೆಯಲ್ಲಿ ಮೂಡಿಬರುವ ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’. ಬಿಗ್ ಬಾಸ್ ಸೀಸನ್ 9ಗಾಗಿ ಕನ್ನಡ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. ಆದರೆ ಟಿವಿಯಲ್ಲಿಅಲ್ಲ ಒಟಿಟಿಯಲ್ಲಿ. ಇದು ಒಟಿಟಿಗಾಗಿಯೇ ಮಾಡುತ್ತಿರುವ ಬಿಗ್ ಬಾಸ್  ಶೋ ಆಗಿದೆ. ಟಿವಿಯಲ್ಲಿ ಬಿಗ್ ಬಾಸ್ ಒಟಿಟಿ ಮೊದಲು ಆರಂಭವಾಗಲಿದೆ. ಬಳಿಕ ಟಿವಿಯಲ್ಲಿ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಲಿದೆ. ಇದು ಕನ್ನಡದಲ್ಲಿ ಮೊದಲ ಪ್ರಯತ್ನವಾಗಿದೆ. ಬಿಗ್ ಬಾಸ್ ಒಟಿಟಿ ಶೋ ಅನ್ನು ಸಹ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದಾರೆ. 

ಸದ್ಯ ಬಿಗ್ ಬಾಸ್ ಸೀಸನ್ 9ರ ಪ್ರೋಮೋ ರಿಲೀಸ್ ಆಗಿದ್ದು ಕಿಚ್ಚನ ಸ್ಟೈಲಿಶ್ ಎಂಟ್ರಿ ಪ್ರೇಕ್ಷಕರ ಹೃದಯಗೆದ್ದಿದೆ. ಕಿಚ್ಚಾ ಕಿಚ್ಚಾ...ಎಂದು ಕೂಗುತ್ತಿರುವ ಅಭಿಮಾನಿಗಳು. ಸೀಸನ್ 9ಗೆ ಆಲ್ ಬೆಸ್ಟ್ ಹೇಳುತ್ತಾ ಕಿರುಚಾಡುತ್ತಿರುವ ಫ್ಯಾನ್ಸ್. ಆದರೆ ಅಭಿಮಾನಿಗಳಲ್ಲಿ ಇದು ಸೀಸನ್ 1 ಎಂದು ಒತ್ತಿ ಒತ್ತಿ ಹೇಳುತ್ತಿರುವ ಸುದೀಪ್. ಕಿಚ್ಚ ಹೇಳುವ ಸೀಸನ್ 1 ಎಂದು ಕೇಳಿ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿ ಸರ್ ಬಿಗ್ ಬಾಸ್ ಸೀಸನ್ 9 ಬರವಬೇಕಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಎಲ್ಲರಿಗೂ ಕಿಚ್ಚ ಸೀಸನ್ 1 ಎಂದು ಹೇಳುತ್ತಾ ಕೂಗುತ್ತಾರೆ. ಅಭಿಮಾನಿಯೊಬ್ಬ ಓಡಿ ಬಂದು ಕಳೆದ ಬಾರಿ ಸೀಸನ್ 8 ಪ್ರಸಾರವಾಗಿತ್ತು. ಇದೀಗ 9 ಅಲ್ವಾ ಎಂದು ಕೇಳಿದರು. ಇದಕ್ಕೆ ಕಿಚ್ಚ ವೂಟ್ ನಲ್ಲಿ ಲೈವ್ ಬರ್ತಾ ಇತ್ತಾ, 24ಗಂಟೆ ಪ್ರಸಾರವಾಗುತ್ತಿತ್ತಾ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಅಭಿಮಾನಿ ಹಾಗಾದ್ರೆ 1 ಸೀಸನ್ ಎಂದು ಹೇಳುತ್ತಾರೆ. ಇದು ಒಟಿಟಿ...ಟಿವಿ ಶೋ ಅಲ್ಲಾ ಎಂದು ಕಿಚ್ಚ ಹೇಳುತ್ತಾರೆ. 

ಬಿಗ್ ಬಾಸ್ 9; ಪ್ರೋಮೋ ಶೂಟ್‌ಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ ಕಿಚ್ಚ ಸುದೀಪ್

ಬಿಗ್ ಬಾಸ್ ಒಟಿಟಿ ಬಗ್ಗೆ ಹೇಳುತ್ತಾ ಯಾವಾಗ ಪ್ರಸಾರವಾಗಲಿದೆ ಎಂದು ಬಹಿರಂಗ ಪಡಿಸಿದರು. ಅಂದಹಾಗೆ ಬಹುನಿರೀಕ್ಷೆಯ ಬಿಗ್ ಬಾಸ್ ಒಟಿಟಿ ಶೋ ಆಗಸ್ಟ್ 6 ಸಂಜೆ 7ಗೆ ಪ್ರಾರಂಭವಾಗಲಿದೆ ಎಂದು ಬಹಿರಂಗ ಪಡಿಸಿದರು. ವಾರದ ಏಳು ದಿನವೂ 24 ಗಂಟೆ ಪ್ರಸಾರವಾಗಲಿದೆ. ಸುದೀಪ್ ಅವರ ಬಿಗ್ ಬಾಸ್ ಒಟಿಟಿ ಪ್ರೋಮೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಿಚ್ಚನ ಸ್ಟೈಲಿಶ್ ಲುಕ್, ಎಂಟ್ರಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಬಿಗ್ ಬಾಸ್ ಒಟಿಟಿ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಟಿವಿಯಲ್ಲೇ ಪ್ರಸಾರ ಮಾಡಬಹುದಿತ್ತಲ್ವಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

.

ಮುಂಬೈ ಏರ್ಪೋರ್ಟ್‌ಲ್ಲಿ ಕಾಣಿಸಿಕೊಂಡ  ಸುದೀಪ್; ಸ್ಟೈಲಿಶ್ ಕಿಚ್ಚನ ವಿಡಿಯೋ ವೈರಲ್

ವೂಟ್ ನಲ್ಲಿ ಮಿನಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಅಂದಹಾಗೆ ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ ಮುಗಿದ ಬಳಿಕ ಟಿವಿಯಲ್ಲಿ ಪ್ರಾರಂಭವಾಗಲಿದೆ. ಟಿವಿಯಲ್ಲೂ ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು ಯಾರೆಲ್ಲ ಸ್ಪರ್ಧಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರೇಕ್ಷಕರು ಕಾತರರಾಗಿದ್ದಾರೆ. ಕಳೆದ ವರ್ಷ ವೂಟ್ ನಲ್ಲಿ ಹಿಂದಿ ಬಿಗ್ ಬಾಸ್ ಪ್ರಾರಂಭವಾಗುತ್ತು. ಒಟಿಟಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಅನ್ನು ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೇ ಒಟಿಟಿ ಮತ್ತು ಟಿವಿ ಬಿಗ್ ಬಾಸ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೊದಲ ಪ್ರಯತ್ನ ಹೇಗಿರಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. 

Follow Us:
Download App:
  • android
  • ios