ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್‌ಗೆ ಮಹಾರಾಷ್ಟ್ರ ಸರ್ಕಾರದ ನಡೆಯ ವಿರುದ್ಧ ಮೊದಲ ಗೆಲುವು ಸಿಕ್ಕಿದೆ. ನಟಿ ಮುಂಬೈಗೆ ಹೊರಟು ನಿಂತಾಗಲೇ ಆಕೆಯ ಮುಂಬೈ ಕಚೇರಿಯಲ್ಲಿ ಅಕ್ರಮ  ಕಟ್ಟಡ ಎಂದು ಒಂದಷ್ಟು ಭಾಗಗಳನ್ನು ಗುರುತಿಸಿ ಕೆಡವಲಾಗಿತ್ತು.

ಬಿಎಂಸಿ ಮೇಲುಸ್ತುವಾರಿಯಲ್ಲಿ ಕಚೇರಿಯ ಮುಂಭಾಗವನ್ನು ಅದಾಗಲೇ ನೆಲಸಮ ಗೊಳಿಸಿಯಾಗಿತ್ತು. ಈ ಬಗ್ಗೆ ಕೋರ್ಟ್ ಮೊರೆ ಹೋದ ನಟಿಯ ಲಾಯರ್ ಇದನ್ನು ತಡೆಯುವಲ್ಲಿ ಸಫಲರಾಗಿದ್ದಾರೆ.

ನಟಿ ಕಂಗನಾಳ ಮುಂಬೈ ಆಫೀಸ್ ಮೇಲೆ ಬುಲ್ಡೋಝರ್ ಹತ್ತಿಸಿದ ಮಹಾರಾಷ್ಟ್ರ ಸರ್ಕಾರ

ಕೊರೋನಾ ಪ್ರೊಟಾಕಾಲ್ ಅನುಸರಿಸಿ, ಸೆಪ್ಟೆಂಬರ್ 30ರ ತನಕ ಯಾವುದೇ ತೆರವು ಕಾರ್ಯಾಚರಣೆ ನಡೆಸದಂತೆ ಕೇಂದ್ರದಿಂದಲೇ ಸೂಚನೆ ಇದೆ. ಹೀಗಿದ್ದರೂ ಮಹಾರಾಷ್ಟ್ರ ಸರ್ಕಾರ ಕಂಗನಾ ಕಚೇರಿ ಕೆಡವಲು ಮುಂದಾಗಿತ್ತು.

ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡೆಸಿದ ತೆರವು ಕಾರ್ಯಾರಣೆ ನಿಲ್ಲಿಸುವಂತೆ ಬಾಂಬೆ ಹೈಕೋರ್ಟ್ ಸ್ಟೇ ನೀಡಿದೆ. ಕಂಗನಾ ಲಾಯರ್ ತೆರವು ಕಾರ್ಯಾಚರಣೆ ಪ್ರಶ್ನಿಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ನಟಿ ಕಂಗನಾಗೆ ‘ವೈ’ ಶ್ರೇಣಿ ಭದ್ರತೆ;ದಿನವಿಡೀ 10 ಸಿಆರ್‌ಪಿಎಫ್‌ ಯೋಧರ ಕಾವಲು!

ಮುಂಬೈನ ಪಾಲಿ ಹಿಲ್ಸ್‌ನ ಕಂಗನಾ ಆಫೀಸ್‌ನಲ್ಲಿ ಒಂದು ಟಾಯ್ಲೆಟ್ ಸೇರಿದಂತೆ 14 ಕಡೆ ನಿಯಮ ಉಲ್ಲಂಘಿಸಲಾಗಿದೆ ಎಂದು ಬಿಎಂಸಿ ಗುರುತು ಮಾಡಿ ತೆರವು ಕಾರ್ಯಾಚರಣೆ ನಡೆಸಿತ್ತು.

ನನ್ನ ಮನೆ ನಾಶವಾದಂತೆ ನಿಮ್ಮ ಅಹಂಕಾರವೂ ನಾಶವಾಗುತ್ತ ಎಂದು ನಟಿ ಕಂಗನಾ ಮಹಾರಾಷ್ಟ್ರ ಸಿಎ< ರಣಾವತ್ ಉದ್ದವ್ ಠಾಕ್ರೆಗೆ ಟಾಂಗ್ ಕೊಟ್ಟಿದ್ದಾರೆ.