ಕಾರ್ತಿಕ್ ಆರ್ಯನ್‌ಗೆ ಸಿಕ್ತು ದುಬಾರಿ Car ಗಿಫ್ಟ್; ಈ ಕಾರು ಹೊಂದಿದ ಮೊದಲ ಭಾರತೀಯ

ಭೂಲ್ ಭುಲೈಯಾ-2 ಯಶಸ್ಸಿನ ಖುಷಿಯಲ್ಲಿರುವ ನಟ ಕಾರ್ತಿಕ್ ಆರ್ಯನ್‌ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಿನಿಮಾ ಸೂಪರ್ ಸಕ್ಸಸ್ ಕಂಡ ಖುಷಿಗೆ ನಿರ್ಮಾಪಕ ಭುಷಣ್ ಕುಮಾರ್ ಹೀರೋ ಕಾರ್ತಿರ್‌ಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಹೌದು, ಮೆಕ್ಲಾರೆನ್ ಜಿಟಿ, ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಕಾರ್ತಿಕ್ ಆರ್ಯನ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ. 

Bhushan Kumar gifts a swanky McLaren GT car to Kartik Aaryan sgk

ಬಾಲಿವುಡ್ ಖ್ಯಾತ ನಟ ಕಾರ್ತಿಕ್ ಆರ್ಯನ್(Kartik Aaryan) ಕಳೆದ ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಾರ್ತಿಕ್ ನಟನೆಯ ಭೂಲ್ ಭುಲೈಯಾ-2(Bhool Bhulaiyaa 2) ಸೂಪರ್ ಸಕ್ಸಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಕಮಾಯಿ ಮಾಡಿದೆ. ಭೂಲ್ ಭುಲೈಯಾ-2 ಯಶಸ್ಸಿನ ಖುಷಿಯಲ್ಲಿರುವ ನಟ ಕಾರ್ತಿಕ್ ಆರ್ಯನ್‌ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಿನಿಮಾ ಸೂಪರ್ ಸಕ್ಸಸ್ ಕಂಡ ಖುಷಿಗೆ ನಿರ್ಮಾಪಕ ಭುಷಣ್ ಕುಮಾರ್ ಹೀರೋ ಕಾರ್ತಿರ್‌ಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಹೌದು, ಮೆಕ್ಲಾರೆನ್ ಜಿಟಿ, ಐಷಾರಾಮಿ ಸ್ಪೋರ್ಟ್ಸ್ (McLaren GT, a luxury sports car) ಕಾರನ್ನು ಕಾರ್ತಿಕ್ ಆರ್ಯನ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷ ಎಂದರೆ ಈ ಕಾರನ್ನು ಹೊಂದಿದ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆ ಕೂಡ ಕಾರ್ತಿಕ್ ಗಳಿಸಿದ್ದಾರೆ. ಭೂಷಣ್ ಕುಮಾರ್ ಮತ್ತು ಕಾರ್ತಿಕ್ ಇಬ್ಬರೂ ಕಾರಿನ ಮುಂದೆ ನಿಂತು ಪೋಸ್ ಖುಷಿಯಿಂದ ಕೊಟ್ಟಿದ್ದಾರೆ.  ಆರೆಂಜ್ ಬಣ್ಣದ ಕಾರು ಇದಾಗಿದೆ. 

ಅಂದಹಾಗೆ ಈ ಕಾರಿನ ಬೆಲೆ ಬರೋಬ್ಬರಿ 3.73 ಕೋಟಿ ರೂಪಾಯಿ. ಈ ಕಾರು ಪ್ರಸ್ತುತ ಭಾರದಲ್ಲಿ ಮಾರಾಟದಲ್ಲಿರುವ ಕೈಗೆಟಕುವ ಮೆಕ್ಲಾರೆನ್ ಆಗಿದೆ. ನಿರ್ಮಾಪಕರು ನೀಡಿದ ದುಬಾರಿ ಗಿಫ್ಟ್‌ ಕಾರಿನ ಬಗ್ಗೆ ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ನಿರ್ಮಾಪಕರಿಗೆ ಧನ್ಯವಾದ ತಿಳಿಸಿರುವ ಕಾರ್ತಿಕ್ ಮುಂದಿನ ಗಿಫ್ಟ್ ಇದಕ್ಕಿಂತ ದುಬಾರಿ ಜೆಟ್ ಆಗಿರಬೇಕು ಎಂದಿದ್ದಾರೆ.  'ದುಡಿಮೆಯ ಫಲ ಸಿಹಿ ಎಂದು ಕೇಳಿದ್ದೆ ಆದರೆ ಇಷ್ಟು ದೊಡ್ಡದು ಎಂದು ತಿಳಿದಿರಲಿಲ್ಲ. ಮುಂದಿನ ಉಡುಗೊರೆ ಖಾಸಗಿ ಜೆಟ್ ಆಗಿರಬೇಕು ಸರ್' ಎಂದು ಹೇಳಿದ್ದಾರೆ.

ಕಾರ್ತಿಕ್ ಆರ್ಯನ್‌ ತುಂಬಾ ಇಷ್ಟವಾಗೋಕೆ ಈ ಗುಣಗಳೇ ಕಾರಣ

ಕಾರ್ತಿಕ್ ಮತ್ತು ಭುಷಣ್ ಕುಮಾರ್ ಕಾಂಬಿನೇಷ್‌ನಲ್ಲಿ ಸದ್ಯ ಎರಡು ಹಿಟ್ ಸಿನಿಮಾಗಳು ಬಂದಿವೆ. 2018ರಲ್ಲಿ ಬಂದ ಸೋನು ಕೆ ಟಿಟು ಕಿ ಸ್ವೀಟಿ ಸಿನಿಮಾ ಕೂಡ ಹಿಟ್ ಆಗಿತ್ತು. ಇದೀಗ ಭೂಲ್ ಭುಲೈಯಾ-2. ಭೂಲ್ ಭುಲೈಯಾ-2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 180 ಕೋಟಿ ರೂಪಾಯಿ ದಾಟಿದೆ. ಮುಂದಿನ ಸಿನಿಮಾ ಕೂಡ ಭೂಷಣ್ ಕುಮಾರ್ ನಿರ್ಮಾಣದ ಶೆಹಜಾದ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಮನೀಶಾ ಕೊಯಿರಾಲಾ ಸಹ ಕಾಣಿಸಿಕೊಂಡಿದ್ದಾರೆ.  

ಸಿನಿಮಾ ಸಕ್ಸಸ್ ಬೆನ್ನಲ್ಲೇ ಇಷ್ಟು ದುಬಾರಿಯಾದ್ರಾ ಕಾರ್ತಿಕ್ ಆರ್ಯನ್; ಪಡೆಯುವ ಸಂಭಾವನೆ ಎಷ್ಟು?

ಭೂಲ್ ಭುಲೈಯಾ-2 ಕಂಡ ಸಕ್ಸಸ್ ಹಾಗೆ ಶೆಹಜಾದ ಸಿನಿಮಾ ಕೂಡ ಸಕ್ಸಸ್ ಆಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅಂದಹಾಗೆ ಭೂಲ್ ಭೈಲಿಯಾ-2 ಸಿನಿಮಾ ಸರಣಿ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಕೊಂಚ ಧೈರ್ಯ ತುಂಬಿದ್ದರು. ಸಾಲು ಸಾಲು ಸೋಲಿನ ಬಳಿಕ ಭೂಲ್ ಭುಲೈಯಾ-2 ಉತ್ತಮ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಸಿನಿಮಾರಂಗಕ್ಕೆ ಚೇತರಿಕೆ ನೀಡಿತ್ತು. ಲ್ ಭುಲೈಯಾ-2 ಚಿತ್ರಕ್ಕೆ ಅನೀಸ್ ಬಾಜ್ಮಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ನಟಿ ತಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

Latest Videos
Follow Us:
Download App:
  • android
  • ios