ಭೂಮಿ ಅಭಿನಯದ 'ದುರ್ಗಮತಿ' ಟ್ರೇಲರ್‌ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರು ಮಾಡಿದೆ.  ಮೊಲದ ಬಾರಿ ಭೂಮಿ, ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಅನುಷ್ಕಾ ಶೆಟ್ಟಿನೇ ಮಾಡಬೇಕಿತ್ತು ಎಂದು ಕಾಲೆಳೆದಿದ್ದಾರೆ. ಅಲ್ಲದೇ ಅನುಷ್ಕಾ ಪಾತ್ರಕ್ಕೆ ಹಾಕುತ್ತಿದ್ದ ಶ್ರಮದಲ್ಲಿ ಭೂಮಿ ಕಿಂಚಿತ್ತೂ ಮಾಡಿಲ್ಲ ಎಂದು ಟೀಕೆ ಮಾಡಿದ್ದಾರೆ.

ಫಿಲ್ಮ್ ಸ್ಕೂಲ್‌ನಿಂದ ಹೊರಹಾಕಲ್ಪಟ್ಟಾಗ ಈ ನಟಿ ಮೇಲಿತ್ತು 13 ಲಕ್ಷ ಸಾಲದ ಹೊರೆ 

'ಬಾಲಿವುಡ್‌ ಕಾಪಿಕ್ಯಾಟ್ ಸಂಪ್ರದಾಯ ಯಾವಾಗ ನಿಲ್ಲುತ್ತದೋ ಗೊತ್ತಿಲ್ಲ. ಆದರೆ ನೀವು ಅನುಷ್ಕಾಳಂತೆ ಅಭಿನಯಿಸಲು ಸಾಧ್ಯವೆ ಇಲ್ಲ...' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Bhumi 🌻 (@bhumipednekar)

ಅರ್ಷದ್ ವಾರ್ಸಿ ಧ್ವನಿಯಲ್ಲಿ ಕಥೆ ಹೇಳುತ್ತಾ ಪ್ರಾರಂಭವಾಗುವ ಈ ಟ್ರೇಲರ್ ರಾಜಕಾರಣಿಗಳ ಮತ್ತೊಂದು ಮುಖ ಬಹಿರಂಗ ಮಾಡುತ್ತದೆ. ಸಸ್ಪೆನ್ಸ್‌ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಭೂಮಿ ತನಿಖೆ ಮಾಡುವ ವೇಳೆ ಕೆಲವೊಂದು ಪ್ಯಾರನಾರ್ಮಲ್ ಚಟುವಟಿಕೆಗಳನ್ನು ಎದುರಿಸುತ್ತಾರೆ. ದುರ್ಗಮತಿ ಅವತಾರ ತಾಳಿ ಎಲ್ಲಾ ನೀಚ ಕೆಲಸಗಳಿಗೆ ಫುಲ್ ಸ್ಟಾಪ್ ಹಾಕುವುದು ಚಿತ್ರದ ಕಥೆ.  

ಭೂಮಿ ತೂಕದ ಹುಡುಗಿಯ ಫಿಟ್‌ನೆಸ್‌;ವರ್ಕೌಟ್‌ ಮಾಡಿ ಇಮ್ಯುನಿಟಿ ಹೆಚ್ಚಿಸಿಕೊಂಡ ಪೆಡ್ನಾಕರ್‌ 

ಟಾಲಿವುಡ್ ಭಾಗಮತಿ ಚಿತ್ರದ ರಿಮೇಕ್ ಆಗಿರುವ ಈ ದುರ್ಗಮತಿ, ಚಿತ್ರವನ್ನು ವಿಕ್ರಮ್ ಮಲೋತ್ರಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಭೂಮಿಗೆ ಅಕ್ಷಯ್ ಕುಮಾರ್ ಸಾಥ್ ಕೊಟ್ಟಿದ್ದಾರೆ.