Asianet Suvarna News Asianet Suvarna News

ವಿಡಿಯೋ ಶೇರ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಖ್ಯಾತ ನಟ ಸೈಬಲ್; ಸ್ಥಿತಿ ಗಂಭೀರ

ಬೆಂಗಾಲಿಯ ಖ್ಯಾತ ನಟ ಸೈಬಲ್ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸೋಮವಾರ ರಾತ್ರಿ ಪಶ್ಚಿಮ ಬೆಂಗಾಲದ ಕಸ್ಬಾದ ತನ್ನ ನಿವಾಸದಲ್ಲಿ ಭಟ್ಟಾಚಾರ್ಯ ಈ ದುರಂತ ಮಾಡಿಕೊಂಡಿದ್ದಾರೆ.  ANI ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ, ಭಟ್ಟಾಚಾರ್ಯ ಆಹ್ಮಹತ್ಯೆ ಮಾಡಿಕೊಳ್ಳಲು ತನ್ನನ್ನು ತಾನು ಹಿಂಸಿಸಿಕೊಂಡಿದ್ದು ತೀವ್ರವಾಗಿ ಗಾಯಮಾಡಿಕೊಂಡ ಸ್ಥಿತಿಯಲ್ಲಿ ಇದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.    

Bengali actor Saibal Bhattacharya attempts suicide and shares video in hurt condition sgk
Author
Bengaluru, First Published Aug 10, 2022, 11:52 AM IST

ಬೆಂಗಾಲಿಯ ಖ್ಯಾತ ನಟ ಸೈಬಲ್ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆ ಯತ್ನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸೋಮವಾರ ರಾತ್ರಿ (ಆಗಸ್ಟ್ 8) ಪಶ್ಚಿಮ ಬೆಂಗಾಲದ ಕಸ್ಬಾದ ತನ್ನ ನಿವಾಸದಲ್ಲಿ ಭಟ್ಟಾಚಾರ್ಯ ಈ ದುರಂತ ಮಾಡಿಕೊಂಡಿದ್ದಾರೆ.  ANI ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ, ಭಟ್ಟಾಚಾರ್ಯ ಆತ್ಮಹತ್ಯೆ ಮಾಡಿಕೊಳ್ಳಲು ತನ್ನನ್ನು ತಾನು ಹಿಂಸಿಸಿಕೊಂಡಿದ್ದು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಇದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.    

ಪೊಲೀಸ್ ಮೂಲಗಳ ಪ್ರಕಾರ ನಟ ಸೈಬಲ್ ಭಟ್ಟಾಚಾರ್ಯಆತ್ಮಹತ್ಯೆಗೆ ಯತ್ನಿಸುವ ಮೊದಲು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು. ವಿಡಿಯೋದಲ್ಲಿ ಭಟ್ಟಾಚಾರ್ಯ ಸಂಪೂರ್ಣವಾಗಿ ಗಾಯಕೊಂಡ ಸ್ಥಿತಿಯಲ್ಲಿದ್ದರು ಮತ್ತು ಕುಟುಂಬದವರನ್ನು ಧೂಷಿಸಿದ್ದರು ಎನ್ನಲಾಗಿದೆ. ಬಳಿಕ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ವಿಡಿಯೋದಲ್ಲಿ ತನಗೆ ತಾನೆ ಹಿಂಸೆ ಮಾಡಿಕೊಂಡು, ಗಾಯಮಾಡಿಕೊಂಡಿದ್ದರು. ಅಂದಹಾಗೆ ಸೈಬಲ್ ಭಟ್ಟಾಚಾರ್ಯ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಅನೇಕ ಬಾರಿ ಆತ್ಮಹತ್ಯೆ ಪ್ರಯತ್ನ ಪಟ್ಟಿದ್ದು ಅವರೇ ಗಾಯಮಾಡಿಕೊಂಡಿದ್ದರು ಎನ್ನಲಾಗಿದೆ. 

ಸೈಬಲ್ ಭಟ್ಟಾಚಾರ್ಯ ಸದ್ಯ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಸೈಬಲ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೈಬಲ್ ಭಟ್ಟಾಚಾರ್ಯ ಬೆಂಗಾಲಿ ಕಿರುತೆರೆಯಲ್ಲಿ ಜನಪ್ರಿಯ ಹೆಸರು. ಅನೇಕ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಕರಿಖೇಲಾ, ಉದನ್ ತುಬ್ರಿ, ಪ್ರಥಮ ಕಾದಂಬಿನಿ, ಮಿಠಾಯಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು.  

ಗೆಳತಿ ಸಾವಿನಿಂದ ಖಿನ್ನತೆಗೆ ಜಾರಿದ ಮಾಡೆಲ್ ಆತ್ಮಹತ್ಯೆ : ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆ

ಕಿರುತೆರೆ ಲೋಕದಲ್ಲಿ ದೀರ್ಘಕಾಲ ಸೇವೆಸಲ್ಲಿಸಿರುವ ಸೈಬಲ್ ಭಟ್ಟಾಚಾರ್ಯ ಅವರಿಗೆ ಇತ್ತೀಚಿಗೆ ಅವಕಾಶಗಳು ಸಿಗುತ್ತಿರಲಿಲ್ಲ ಎನ್ನಲಾಗಿದೆ. ಹಾಗಾಗಿ ಅವಕಾಶಕ್ಕಾಗಿ ಪರದಾಡುತ್ತಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.  ಧಾರಾವಾಹಿ ಅವಕಾಶ ಇಲ್ಲದ ಕಾರಣ ಖಿನ್ನತೆಗೆ ಒಳಗಾಗಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಗಾಳಿಯ ಖ್ಯಾತ ನಟ ಅಭಿಷೇಕ್ ಚಟರ್ಜಿ ನಿಧನ; ಮಮತಾ ಬ್ಯಾನರ್ಜಿ ಸಂತಾಪ

ಇತ್ತೀಚಿಗೆ ಬೆಂಗಾಲಿಯಲ್ಲಿ ಅನೇಕ ಕಿರುತೆರೆ ಕಲಾವಿದರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಾಲಿಯಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಿದೆ.  ನಟಿ ಪಲ್ಲವಿ ಡೇ, ಬಿದಿಶಾ ಡಿ ಮಜುಂದಾರ್, ಮಾಡೆಲ್ ನಟಿ ಮಂಜುಷಾ ನಿಯೋಗಿ ಸೇರಿದಂತೆ ಅನೇಕರು ಆತ್ಮಹತ್ಯೆ ಮಾಡಿಕೊಂಡು ಜೀವನವನ್ನು ಅರ್ಧಕ್ಕೆ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟುಹೋಗಿದರು.  ಇದೀಗ ತಿಂಗಳುಗಳ ನಂತರ ಸೈಬಲ್ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನಿಸಿರುವುದು ಬೆಂಗಾಲಿ ಕಿರುತೆರೆ ಲೋಕ ಮತ್ತೊಮ್ಮೆ ಬೆಚ್ಚಿದಿದ್ದಿದೆ. 

Follow Us:
Download App:
  • android
  • ios