ಗೆಳತಿ ಸಾವಿನಿಂದ ಖಿನ್ನತೆಗೆ ಜಾರಿದ ಮಾಡೆಲ್ ಆತ್ಮಹತ್ಯೆ : ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆ
- ಮೂರು ದಿನಗಳ ಅಂತರದಲ್ಲಿ ಇಬ್ಬರು ಮಾಡೆಲ್‌ಗಳು ಆತ್ಮಹತ್ಯೆ
- ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾದ ಬೆಂಗಾಲಿ ಮಾಡೆಲ್
- ಗೆಳತಿ ಸಾವಿನಿಂದ ಖಿನ್ನತೆಗೊಳಗಾಗಿದ್ದ ಮಂಜುಷಾ ನಿಯೋಗಿ
ಕೆಲ ದಿನಗಳ ಹಿಂದಷ್ಟೇ ಕೇರಳದ (kerala) ಮಾಡೆಲ್ (Model) ಒಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಈಗ ಕೋಲ್ಕತ್ತಾದಲ್ಲಿ ಬೆಂಗಾಲಿ ಮಾಡೆಲ್ ಒಬ್ಬಳು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಜನಪ್ರಿಯ ರೂಪದರ್ಶಿ ಮಂಜುಷಾ ನಿಯೋಗಿ ( Manjusha Niyogi) ಅವರು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ (Kolkata residence) ತಮ್ಮ ಕೊಠಡಿಯ ಸೀಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಲ್ಕತ್ತಾದ ಪಟುಲಿ ಪ್ರದೇಶದಲ್ಲಿ (Patuli area) ಮಂಜುಷಾ ತನ್ನ ಕುಟುಂಬದೊಂದಿಗೆ ಉಳಿದುಕೊಂಡಿದ್ದಳು. ಇದಕ್ಕೂ ಮೊದಲು ಬಿದಿಶಾ ಡಿ ಮಜುಂದಾರ್ ಎಂಬ ರೂಪದರ್ಶಿ ಸಾವಿಗೆ ಶರಣಾಗಿದ್ದರು. ಹೀಗಾಗಿ ಮೂರು ದಿನಗಳ ಅಂತರದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುಷಾ ನಿಯೋಗಿ (Manjusha Niyogi) (ಮೇ 27 ರಂದು) ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತನ್ನ ಆಪ್ತ ಸ್ನೇಹಿತೆ ಬಿದಿಶಾ ಡಿ ಮಜುಂದಾರ್ ಸಾವಿನ ನಂತರ ಮಂಜುಷಾ ನಿಯೋಗಿ ತೀವ್ರ ಖಿನ್ನತೆಗೆ (depression) ಒಳಗಾಗಿದ್ದಳು ಎಂದು ಮಂಜುಷಾಳ ತಾಯಿ ಹೇಳಿಕೊಂಡಿದ್ದಾಳೆ. ಬಿದಿಶಾ ಡಿ ಮಜುಂದಾರ್ ಅವರು ಮೇ 26 ರಂದು ಆತ್ಮಹತ್ಯೆ ಮಾಡಿಕೊಂಡರು. ಮಂಜುಷಾ ನಿಯೋಗಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಫೋಟೋಗ್ರಾಫರ್ ಮಹಿಮೆ : 60 ವರ್ಷದ ಕೇರಳದ ಕೂಲಿ ಕಾರ್ಮಿಕ ಈಗ ಫೇಮಸ್ ಮಾಡೆಲ್
ನನ್ನ ಮಗಳು ತಾನು ಬಿದಿಶಾ (Bidisha) ಜೊತೆ ಇರಬೇಕೆಂದು ನಿರಂತರವಾಗಿ ಹೇಳುತ್ತಿದ್ದಳು. ಅವಳು ನಿರಂತರವಾಗಿ ಬಿದಿಶಾ ಬಗ್ಗೆ ಮಾತನಾಡುತ್ತಿದ್ದಳು. ಶೀಘ್ರದಲ್ಲೇ ಮಾಧ್ಯಮಗಳು ಬಿದಿಶಾಳಂತೆ ನಮ್ಮ ಮನೆಯ ಮೇಲೆ ಕೇಂದ್ರೀಕರಿಸುತ್ತವೆ ಎಂದು ಹೇಳಿದಾಗ ನಾನು ಅವಳನ್ನು ಗದರಿಸಿದೆ ಎಂದು ಮಂಜುಷಾ ಅವರ ತಾಯಿ ಹೇಳಿದ್ದಾರೆ.
ಮಂಜುಷಾ (Manjusha) ಅವರಿಗಿಂತ ಮೊದಲು, ಬಂಗಾಳಿ ಮಾಡೆಲ್-ನಟಿ-ಬಿದಿಶಾ ಡಿ ಮಜುಂದಾರ್ (Bidisha De Majumdar) ಕೋಲ್ಕತ್ತಾದ ದಮ್ ದಮ್‌ನಲ್ಲಿರುವ (Dum Dum) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 21 ವರ್ಷದ ನಟಿ ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಪೊಲೀಸರು ಮೇ 25 ರಂದು ಸಂಜೆ ನಾಗರ್‌ಬಜಾರ್ ಪ್ರದೇಶದಲ್ಲಿ (Nagerbazar area) ಆಕೆ ವಾಸಿಸುತ್ತಿದ್ದ ಫ್ಲ್ಯಾಟ್‌ನಲ್ಲಿದ್ದ ಮನೆಯ ಬಾಗಿಲು ಮುರಿದು ಒಳಗೆ ನುಗ್ಗಿದ್ದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಪ್ರಕರಣದ ತನಿಖೆಯನ್ನು ಬ್ಯಾರಕ್‌ಪುರ ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ.
ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ
ಇದಕ್ಕೂ ಮೊದಲು ಜನಪ್ರಿಯ ಬಂಗಾಳಿ ಕಿರುತೆರೆ ನಟಿ ( Bengali television actress) ಪಲ್ಲವಿ ಡೇ ಅವರು ಹದಿನೈದು ದಿನಗಳ ಹಿಂದೆ ಗರ್ಫಾ ಪ್ರದೇಶದಲ್ಲಿ (Garfa area) ತಾವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಕೆಲ ದಿನಗಳ ಹಿಂದೆ ಕೇರಳದ ಮಾಡೆಲ್ ಒಬ್ಬರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. 21 ವರ್ಷದ ಶಹ್ನಾ ಸಜದ್ ಕೊಜಿಕೋಡ್‌ನ (Kozhikode) ಪರಂಬಿಲ್ ಬಜಾರ್‌ನ (Parambil Bazaar) ಬಾಡಿಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದರು. ಘಟನೆಯ ಬಳಿಕ ರೂಪದರ್ಶಿ ಶಹ್ನಾ ಪೋಷಕರು ತಮ್ಮ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂದು ದೂರಿದ ಹಿನ್ನೆಲೆಯಲ್ಲಿ ಶಹ್ನಾ ಪತಿ ಸಜದ್‌ನನ್ನು ಪೊಲೀಸರು ಬಂಧಿಸಿದ್ದರು.