Asianet Suvarna News Asianet Suvarna News

ಬಂಗಾಳಿಯ ಖ್ಯಾತ ನಟ ಅಭಿಷೇಕ್ ಚಟರ್ಜಿ ನಿಧನ; ಮಮತಾ ಬ್ಯಾನರ್ಜಿ ಸಂತಾಪ

ಬಂಗಾಳಿಯ ಖ್ಯಾತ ನಟ ಅಭಿಷೇಕ್ ಚಟರ್ಜಿ(Abhishek Chatterjee) ಇಂದು (ಮಾರ್ಚ್ 24) ಕಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಅಭಿಷೇಕ್ ಚಟರ್ಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ(Massive cardiac arrest) ಎನ್ನುವ ಮಾಹಿತಿ ತಿಳಿದುಬಂದಿದೆ.

Bengali Actor Abhishek Chatterjee Dies At massive cardiac arrest
Author
Bengaluru, First Published Mar 24, 2022, 2:52 PM IST

ಬಂಗಾಳಿಯ ಖ್ಯಾತ ನಟ ಅಭಿಷೇಕ್ ಚಟರ್ಜಿ(Abhishek Chatterjee) ಇಂದು (ಮಾರ್ಚ್ 24) ಕಲ್ಕತ್ತಾದಲ್ಲಿ ನಿಧನರಾಗಿದ್ದಾರೆ. ಅಭಿಷೇಕ್ ಚಟರ್ಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ(Massive cardiac arrest) ಎನ್ನುವ ಮಾಹಿತಿ ತಿಳಿದುಬಂದಿದೆ. 58 ವರ್ಷದ ನಟ ಅಭಿಷೇಕ್ ಚಟರ್ಜಿ ಅವರು ಅನೇಕ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಬುಧವಾರ ಚಿತ್ರೀಕರಣ ವೇಳೆ ಅಭಿಷೇಕ್ ಚಟರ್ಜಿ ಅವರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿತ್ತು, ಅಸ್ವಸ್ಥರಾಗಿದ್ದ ಅರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಆಸ್ಪತ್ರೆಯಿಂದ ವಾಪಾಸ್ ಬಾರದ ಲೋಕಕ್ಕೆ ತೆರಳಿದ್ದಾರೆ. ಅಭಿಷೇಕ್ ಚಟರ್ಜಿ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಮತ್ತು ರಾಜಕೀಯ ಗಣ್ಯರು ಸಹ ಸಂತಾಪ ಸೂಚಿಸಿದ್ದಾರೆ.

ಸಂತಾಪ ಸೂಚಿಸಿದ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ನಟ ಅಭಿಷೇಕ್ ಚಟರ್ಜಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಅಭಿಷೇಕ್ ಅದ್ಭುತ ಮತ್ತು ಪ್ರತಿಭಾವಂತ ನಟ. ಅವರನ್ನು ನಾವು ಕಳೆದುಕೊಂಡಿದ್ದೀವಿ. ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ' ಎಂದು ಸಂತಾಪ ಸೂಚಿಸಿದ್ದಾರೆ.

ಇನ್ನು ಕಲ್ಕತ್ತಾದ ಮೇಯರ್ ಫಿರ್ಹಾದ್ ಹಕೀಮ್ ಕೂಡ ಟ್ವೀಟ್ ಮಾಡಿದ್ದಾರೆ. 'ನಮ್ಮ ಬಂಗಾಳದ ಚಲನಚಿತ್ರೋದ್ಯಮದ ಪ್ರತಿಭಾವಂತ ನಟ ಅಭಿಷೇಕ್ ಚಟರ್ಜಿ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ನೋವು ತಂದಿದೆ. ತೆರೆಮೇಲೆ ಮತ್ತು ತೆರೆಹಿಂದೆ ಅವರು ಶಕ್ತಿಯುತ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ. 

ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು, ಸಿಸಿಟಿವಿ ದೃಶ್ಯ ವೈರಲ್

ಅಭಿಷೇಕ್ ಚಟರ್ಜಿ ಅವರ ಜೊತೆ ಸುಜನಸಖಿ, ಲಾಠಿ, ಸಂಖ ಸಿದುರೆರ ದಿಬ್ಬಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟ ರಿತುಪರ್ಣ ಸೇನ್ ಗುಪ್ತ ಪ್ರತಿಕ್ರಿಯೆ ನೀಡಿ, 'ಕಮರ್ಶಿಯಲ್ ಸಿನಿಮಾಗಳಲ್ಲಿ ಹೊಸ ಮಾನದಂಡ ಸೃಷ್ಟಿಸಿದ್ದಾರೆ. ಪ್ರೇಕ್ಷಕರ ಹೃದಯದಲ್ಲಿ ಸದಾ ಜೀವಂತವಾಗಿ ಇರುತ್ತಾರೆ' ಎಂದಿದ್ದಾರೆ.

1986ರಲ್ಲಿ ಸಿನಿಮಾರಂಗಕ್ಕೆ ಪದಾರ್ಪಣೆ

ನಟ ಅಭಿಷೇಕ್ ಚಟರ್ಜಿ 1986ರಲ್ಲಿ ಬಣ್ಣದ ಲೋಕ ಪ್ರವೇಶ ಮಾಡಿದರು. ಬೆಂಗಾಳಿಯ ಪಥ್ಬೋಲಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರಕ್ಕೆ ತರುಣ್ ಮಜುಮ್ ದಾರ್ ಆಕ್ಷನ್ ಕಟ್ ಹೇಳಿದ್ದರು. ಸಂಧ್ಯಾ ರಾಯ್ ನಾಯಕಿಯಾಗಿ ನಟಿಸಿದ್ದರು. ನಂತರ ಬೆಂಗಾಳಿ ಸಿನಿಮಾರಂಗದಲ್ಲಿ ಪ್ರಸಿದ್ಧ ನಟರಾಗಿ ಖ್ಯಾತಿಗಳಿಸಿದರು.

26 ವರ್ಷದ ನಟಿ ಗಾಯತ್ರಿ ಕಾರು ಅಪಘಾತದಲ್ಲಿ ನಿಧನ

35 ವರ್ಷಗಳ ವೃತ್ತಿ ಜೀವನದಲ್ಲಿ ಅಭಿಷೇಕ್ ಚಟರ್ಜಿ ಖ್ಯಾತ ಕಲಾವಿದರಾದ ಉತ್ಪಲ್ ದತ್, ಪ್ರೋಸೆನ್ಜಿತ್ ಚಟರ್ಜಿಯಂತಹ ಹಿರಿಯ ನಟರ ಜೊತೆ ಕೆಲಸ ಮಾಡಿದ್ದಾರೆ. ಋತುಪರ್ಣೋ ಘೋಷ್ ಅವರ ದಹನ್ ಮತ್ತು ಅಲೋ ಸಿನಿಮಾ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಸಿನಿಮಾರಂಗದ ಜೊತೆಗೆ ಕಿರುತೆರೆಯಲ್ಲೂ ಅಭಿಷೇಕ್ ಚಟರ್ಜಿ ಹೆಸರು ಮಾಡಿದ್ದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Follow Us:
Download App:
  • android
  • ios