ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್ ಹಾಗೂ ಐಶ್ವರ್ಯಾ ಡಿವೋರ್ಸ್‌ ತಗೊಳ್ತಾರಾ ಎನ್ನುವ ಪ್ರಶ್ನೆ ಮಧ್ಯೆ ಹಳೆಯ ಡೇಟಿಂಗ್‌ ವಿಚಾರವೊಂದು ಈಗ ಸೌಂಡ್‌ ಮಾಡ್ತಿದೆ.  

ಇಡೀ ನಾಡು ಹೋಳಿ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರೆ, ಇತ್ತ ಟಬು, ಅಭಿಷೇಕ್‌ ಬಚ್ಚನ್‌ ಹೋಳಿ ಆಡಿದ ಫೋಟೋವೊಂದು ವೈರಲ್‌ ಆಗುತ್ತಿತ್ತು. ಆಗಲೇ ಇವರಿಬ್ಬರ ಹಿಂದಿನ ಕಥೆ ಕೂಡ ಮತ್ತೆ ಪ್ರಚಲಿತತೆ ಪಡೆದಿತ್ತು. ಐಶ್ವರ್ಯಾ ರೈ, ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂಬ ಮಾತಿಗೆ ಇನ್ನೂ ಈ ತಾರಾ ಜೋಡಿ ಸ್ಪಷ್ಟ ಉತ್ತರವನ್ನೂ ನೀಡಿಲ್ಲ, ಒಟ್ಟಾಗಿ ಬದುಕ್ತಿದ್ದಾರೆ ಎಂದು ಹೇಳಲು ಸರಿಯಾದ ದಾಖಲೆಯೂ ಸಿಗ್ತಿಲ್ಲ. 

ಅಭಿಷೇಕ್‌ ಬಚ್ಚನ್‌-ಟಬು ವಯಸ್ಸಿನ ಅಂತರ ಎಷ್ಟು? 
2000ರ ಹೊತ್ತಿಗೆ ಅಭಿಷೇಕ್‌ ಬಚ್ಚನ್‌, ಟಬು ಸಾಕಷ್ಟು ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅಭಿಷೇಕ್‌ಗೆ ಈಗ 49, ಟಬುಗೆ 53 ವರ್ಷ. ಅಂದರೆ ತನಗಿಂತ ನಾಲ್ಕು ವರ್ಷದ ಹಿರಿಯ ನಟಿ ಜೊತೆ ಅಭಿ ಡೇಟ್‌ ಮಾಡುತ್ತಿದ್ದರು ಎನ್ನಲಾಗಿದೆ. ಆ ಟೈಮ್‌ನಲ್ಲಿ ಸಲ್ಮಾನ್‌ ಖಾನ್, ಐಶ್ವರ್ಯಾ ರೈ ಪ್ರೀತಿಸಿ ಮದುವೆಗೆ ರೆಡಿಯಾಗಿದ್ದರು. ಸಾಕಷ್ಟು ಪಾರ್ಟಿ, ಕಾರ್ಯಕ್ರಮಗಳಲ್ಲಿ ಇವರಿಬ್ಬರು ಒಟ್ಟಿಗೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ಸಮಯವಿತ್ತು. ಆಗಲೇ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಇನ್ನು ಕರೀಷ್ಮಾ ಕಪೂರ್‌ ಜೊತೆಗೆ ಅಭಿಷೇಕ್‌ ನಿಶ್ಚಿತಾರ್ಥ ಆಗಿ ನಿಂತು ಹೋಯ್ತು.

ಸಿನಿಮಾದಿಂದ ಮಾತ್ರವಲ್ಲ, ರಿಯಲ್ ಎಸ್ಟೇಟ್ ಮೂಲಕವೂ ಕೋಟಿ ಕೋಟಿ ಗಳಿಸ್ತಾರೆ ಈ ಬಾಲಿವುಡ್ ಸ್ಟಾರ್ಸ್

ಟಬು, ಐಶ್ವರ್ಯಾ ಮಾತು ಬಿಟ್ಟಿದ್ದು ಯಾಕೆ? 
ಯಾವ ಹೂವು ಯಾರ ಮುಡಿಗೋ ಎನ್ನುವಂತೆ ಅಭಿಷೇಕ್‌ ಬಚ್ಚನ್, ಐಶ್ವರ್ಯಾ ರೈ ಇಂದು ಒಂದಾಗಿದ್ದಾರೆ. 2007ರಲ್ಲಿ ಐಶ್ವರ್ಯಾ ರೈ, ಅಭಿಷೇಕ್‌ ಮದುವೆಯಾದರು. ಇವರಿಬ್ಬರದ್ದು ಲವ್‌ ಮ್ಯಾರೇಜ್.‌ ಈ ಜೋಡಿ ಆರಾಧ್ಯಾ ಎಂಬ ಮಗಳಿದ್ದಾಳೆ. ಅಭಿ-ಐಶ್‌ ಮದುವೆ ಬಳಿಕ ಟಬು-ಐಶ್‌ ದೂರ ಆದರು. ಈ ಹಿಂದೆ ಒಟ್ಟಿಗೆ ಸಿನಿಮಾ ಮಾಡಿದ್ದ ಈ ನಟಿಮಣಿಯರು ದೂರ ಆದರು. ಐಶ್ವರ್ಯಾ ಜೊತೆ ಟಬು ಆಗಲೀ, ಟಬು ಜೊತೆಗೆ ಐಶ್ವರ್ಯಾ ಆಗಲೀ ಕಾಣಿಸಿಕೊಳ್ಳಲೇ ಇಲ್ಲ. ಆಗಲೇ ಕೆಲವರಿಗೆ ಅಭಿ-ಟಬು ಸಂಬಂಧದ ಬಗ್ಗೆ ಡೌಟ್‌ ಬಂದಿತ್ತು. 

ಫೇಮಸ್ ಆಗ್ತಿದ್ದಂಗೆ ತಮ್ಮ ಪ್ರೇಮಿಗಳನ್ನೇ ತಿರಸ್ಕರಿಸಿ ಸ್ಟಾರ್’ಗಳ ಹಿಂದೆ ಹೋದ ಬಾಲಿವುಡ್ ನಟರಿವರು

ನಾಗಾರ್ಜುನ, ಟಬು ಮದುವೆಯಾಗಲಿಲ್ಲ! 
ಟಬು ಜೊತೆಗೆ ಸಾಕಷ್ಟು ನಟರ ಹೆಸರು ಕೇಳಿ ಬಂದಿದೆ. ಟಬು ಇನ್ನೂ ಸಿಂಗಲ್‌ ಆಗಿ ಉಳಿದಿದ್ದಾರೆ. ದಕ್ಷಿಣ ಭಾರತ, ಬಾಲಿವುಡ್‌ನಲ್ಲಿ ಮಾದಕ ನಟಿಯಾಗಿ ಗುರುತಿಸಿಕೊಂಡಿದ್ದ ಟಬು, ನಾಗಾರ್ಜುನ ಜೊತೆ ಲವ್‌ನಲ್ಲಿದ್ದರು ಎನ್ನಲಾಗಿತ್ತು. ಆದರೆ ಇವರಿಬ್ಬರು ಮದುವೆ ಆಗಲಿಲ್ಲ, ನಾಗಾರ್ಜುನ ಅವರು ಅಮಲಾ ಪಾಲಾದರು. 

ಅಂದಹಾಗೆ ಈಗ ಅಭಿಷೇಕ್‌ ಬಚ್ಚನ್‌ ಅವರು ನಿಮ್ರಿತ್‌ ಕೌರ್‌ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.