ಸಿನಿಮಾದಿಂದ ಮಾತ್ರವಲ್ಲ, ರಿಯಲ್ ಎಸ್ಟೇಟ್ ಮೂಲಕವೂ ಕೋಟಿ ಕೋಟಿ ಗಳಿಸ್ತಾರೆ ಈ ಬಾಲಿವುಡ್ ಸ್ಟಾರ್ಸ್
ಬಾಲಿವುಡ್ ತಾರೆಯರು ಕೇವಲ ನಟನೆ ಅಥವಾ ಫ್ಯಾಷನ್ ಮಾತ್ರ ಯೋಚನೆ ಮಾಡ್ತಾರೆ ಅಂತ ನೀವು ಅಂದುಕೊಂಡ್ರೆ ಅದು ತಪ್ಪು. 2024 ರಲ್ಲಿ, ಅನೇಕ ತಾರೆಯರು ರಿಯಲ್ ಎಸ್ಟೇಟ್ನಲ್ಲಿ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಹೂಡಿಕೆ ಮಾಡಿದ ಟಾಪ್ 5 ತಾರೆಯರ ಬಗ್ಗೆ ತಿಳಿಯೋಣ.
ಬಾಲಿವುಡ್ ಸೆಲೆಬ್ರಿಟಿಗಳು (Bollywood Celebrities) ಚಲನಚಿತ್ರಗಳಲ್ಲಿ ನಟಿಸಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಒಬ್ಬೊಬ್ಬರಂತೂ ಪ್ರತಿ ಚಿತ್ರಕ್ಕೆ ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಚಲನಚಿತ್ರಗಳ ಹೊರತಾಗಿ, ಜಾಹೀರಾತುಗಳಿಂದ ಕೂಡ ಹಣ ಗಳಿಸುತ್ತಾರೆ. ಕೆಲವು ಸೆಲೆಬ್ರಿಟಿಗಳು ತಮ್ಮ ಹಣವನ್ನು ಐಷಾರಾಮಿ ವಸ್ತುಗಳಲ್ಲಿ ಖರ್ಚು ಮಾಡಿದರೆ, ಕೆಲವರು ತಮ್ಮದೇ ಆದ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಕೆಲವು ಸ್ಟಾರ್ ಗಳು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ.
ಬಿ-ಟೌನ್ ನ ಅನೇಕ ಚಲನಚಿತ್ರ ತಾರೆಯರು ತಮ್ಮ ಹಣವನ್ನು ಇಲ್ಲಿ, ಅಲ್ಲಿ ಖರ್ಚು ಮಾಡುವ ಬದಲು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ (real estate market) ಹೂಡಿಕೆ ಮಾಡುತ್ತಾರೆ. 2024 ರಲ್ಲಿ, ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿರುವ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳು ಚರ್ಚೆಯಲ್ಲಿದ್ದವು. ಈ ವರ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿದ ಟಾಪ್ 5 ಸ್ಟಾರ್ ಗಳ ಬಗ್ಗೆ ಹೇಳೋಣ.
ಬಚ್ಚನ್ ಫ್ಯಾಮಿಲಿ 100 ಕೋಟಿ ರೂ. ಹೂಡಿಕೆ
2024 ರಲ್ಲಿ ರಿಯಲ್ ಎಸ್ಟೇಟ್ನಲ್ಲಿ ಅತಿ ಹೆಚ್ಚು ಹಣವನ್ನು ಹೂಡಿಕೆ ಮಾಡಿದ ತಾರೆ ಅಮಿತಾಬ್ ಬಚ್ಚನ್. ಬಚ್ಚನ್ ಕುಟುಂಬವು ರಿಯಲ್ ಎಸ್ಟೇಟ್ ನಲ್ಲಿ 100 ಕೋಟಿ ರೂ. ಹೂಡಿಕೆ ಮಾಡಿದೆ. ಸ್ಕ್ವೇರ್ ಯಾರ್ಡ್ಸ್ ಪ್ರಕಾರ, ಅಮಿತಾಬ್ ಬಚ್ಚನ್ (Amitab Bacchan) 70 ಕೋಟಿ ರೂ., ಅಭಿಷೇಕ್ ಬಚ್ಚನ್ (Abhishek Baccha) 30 ಕೋಟಿ ರೂ.ಗಳನ್ನು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ.
85 ಕೋಟಿಯ ಅಪಾರ್ಟ್ ಮೆಂಟ್ ಶಾಹಿದ್ ಕಪೂರ್
ಉಡ್ತಾ ಪಂಜಾಬ್ ನಟ ಶಾಹಿದ್ ಕಪೂರ್ (Shahid Kapoor) ಕೂಡ ಹೂಡಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ಅವರು 85 ಕೋಟಿ ರೂ.ಗಳ ಸೀ ವ್ಯೂ ಅಪಾರ್ಟ್ಮೆಂಟ್ ಖರೀದಿಸಿದರು. ಇಂಡೆಕ್ಸ್ ಟ್ಯಾಪ್ ಪ್ರಕಾರ, ಈ ಅಪಾರ್ಟ್ಮೆಂಟ್ ವರ್ಲಿಯ ಒಬೆರಾಯ್ 3-6 ವೆಸ್ಟ್ ಯೋಜನೆಯಲ್ಲಿದೆ.
ದೀಪಿಕಾ ಪಡುಕೋಣೆ ಕೂಡ ಹೂಡಿಕೆ ಮಾಡಿದ್ದಾರೆ.
ದೀಪಿಕಾ ಪಡುಕೋಣೆ (Deepika Padukone) ಅದ್ಭುತ ನಟಿಯಲ್ಲದೆ, ರಿಯಲ್ ಎಸ್ಟೇಟ್ನಲ್ಲಿಯೂ ಮಾಸ್ಟರ್ ಮೈಂಡ್ ಆಗಿದ್ದಾರೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಯುವ ನಟಿಯ ಸಂಸ್ಥೆ ಕೆಎ ಎಂಟರ್ಪ್ರೈಸಸ್ ಮುಂಬೈನ ಬಾಂದ್ರಾ ವೆಸ್ಟ್ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಅನ್ನು 17.8 ಕೋಟಿ ರೂ.ಗೆ ಖರೀದಿಸಿತು. ಸಾರಾ ರೇಶಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ 15 ನೇ ಮಹಡಿಯಲ್ಲಿ ಈ ಅಪಾರ್ಟ್ಮೆಂಟ್ ಇದೆ.
ತೃಪ್ತಿ ದಿಮ್ರಿ ಹೆಸರಿನಲ್ಲಿ ಬಂಗಲೆ
ಆನಿಮಲ್ ಸಿನಿಮಾ ಖ್ಯಾತಿಯ ನಟಿ ತೃಪ್ತಿ ದಿಮ್ರಿ (Tripti Dimri) ಈ ಸಿನಿಮಾ ಬಳಿಕ ಖ್ಯಾತಿ ಗಳಿಸುವುದರ ಜೊತೆಗೆ, ಶ್ರೀಮಂತಿಕೆಯನ್ನು ಸಹ ಗಳಿಸಿದರು. ನಟಿ ಈ ವರ್ಷದ ಜೂನ್ ನಲ್ಲಿ ಬಂಗಲೆ ಖರೀದಿಸಿದರು. ಇಂಡೆಕ್ಸ್ ಟ್ಯಾಪ್ ಪ್ರಕಾರ, ತೃಪ್ತಿ ಅವರ ಎರಡು ಅಂತಸ್ತಿನ ಬಂಗಲೆಯ ಮೌಲ್ಯ ಸುಮಾರು 14 ಕೋಟಿ ರೂ ಮತ್ತು ಇದು ಪಶ್ಚಿಮ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿದೆ.
ಕೋಟಿಗಟ್ಟಲೆ ಸಂಬಳ ಪಡೆದ ಅಮೀರ್ ಖಾನ್
2024 ರಲ್ಲಿ, ಅಮೀರ್ ಖಾನ್ (Amir Khan) ನಟಿಸಿದ ಯಾವುದೇ ಸಿನಿಮಾಗಳು ಸದ್ದು ಮಾಡಲೇ ಇಲ್ಲ. ಆದರೆ ರಿಯಲ್ ಎಸ್ಟೇಟ್ ಹೂಡಿಕೆಯ ಮಾಡಿ ಸುದ್ದಿಯಲ್ಲಿದ್ದರು. ಸ್ಕ್ವೇರ್ ಯಾರ್ಡ್ಸ್ ಪ್ರಕಾರ, ನಟ ಬೆಲ್ಲಾ ವಿಸ್ಟಾ ಅಪಾರ್ಟ್ಮೆಂಟ್ನಲ್ಲಿರುವ ಬಾಂದ್ರಾದ ಪಾಲಿ ಹಿಲ್ನಲ್ಲಿ 9 ಕೋಟಿ ರೂ.ಗೆ ಸಿದ್ಧವಾದ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.