Asianet Suvarna News Asianet Suvarna News

ಆತ್ಮಹತ್ಯೆಗೂ ಮುನ್ನ ಮಗಳು ಮಲೈಕಾ ಅರೋರಾಗೆ ಕರೆ ಮಾಡಿ ನೋವು ತೋಡಿಕೊಂಡಿದ್ದ ಅನಿಲ್​ ಮೆಹ್ತಾ!

ಬಾಲಿವುಡ್​ ನಟಿ ಮಲೈಕಾ ಅರೋರಾ ಅವರ ತಂದೆ  ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮಗಳಿಗೆ ಕರೆ ಮಾಡಿ ಹೇಳಿದ್ದೇನು? 
 

Before death Anil Kuldip Mehta made a final phone call to daughters Malaika Arora and Amrita Arora suc
Author
First Published Sep 12, 2024, 2:01 PM IST | Last Updated Sep 12, 2024, 2:01 PM IST

ಬಾಲಿವುಡ್​ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್​ ಅರೋರಾ ಅವರು ಟೆರೇಸ್​ನಿಂದ ಬಿದ್ದು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಅವರ ಅಂತ್ಯಕ್ರಿಯೆ ನೆರವೇರಿದೆ. ಆದರೆ ಇದು ಆತ್ಮಹತ್ಯೆಯೋ, ಆಕಸ್ಮಿಕವೋ ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹಗಳು ಇದ್ದವು. ಮಲೈಕಾ ಅಮ್ಮ ಜಾಯ್ಸ್​ ಪಾಲಿಕಾರ್ಪ್ ಮತ್ತು ಅನಿಲ್​ ಅವರು ಡಿವೋರ್ಸ್​ ಪಡೆದು ಪ್ರತ್ಯೇಕವಾಗಿದ್ದರೂ ಕೆಲ ವರ್ಷಗಳಿಂದ ಒಟ್ಟಿಗೇ ನೆಲೆಸುತ್ತಿದ್ದಾರೆ. ಆದ್ದರಿಂದ ಇದು ಆತ್ಮಹತ್ಯೆ ಅಲ್ಲ ಎಂದೇ ಅಂದುಕೊಳ್ಳಲಾಗಿತ್ತು. ಜಾಯ್ಸ್ ಪಾಲಿಕಾರ್ಪ್ ಅವರು ಪೊಲೀಸರಿಗೆ ನೀಡಿದ್ದ ಹೇಳಿಕೆಯಲ್ಲಿ, ಅನಿಲ್​ ಅವರ ಚಪ್ಪಲಿಗಳು ಲಿವಿಂಗ್ ರೂಮಿನಲ್ಲಿ ಕಂಡುಬಂದಿದ್ದವು.  ಬಾಲ್ಕನಿಯಲ್ಲಿ ಅವರನ್ನು ಹುಡುಕಲು ಹೋದೆ. ಅಲ್ಲಿ ಕುಳಿತು ಪೇಪರ್ ಓದುವ ಅಭ್ಯಾಸವನ್ನು ಹೊಂದಿದ್ದರು. ಅವರು ಬಾಲ್ಕನಿಯನ್ನು ತಲುಪಿದಾಗ, ಅನಿಲ್ ಅಲ್ಲಿ ಇರಲಿಲ್ಲ. ನಂತರ ಅವರು ಕೆಳಗೆ ನೋಡಿದಾಗ, ಕಾವಲುಗಾರ ಜೋರಾಗಿ ಕಿರುಚುತ್ತಿದ್ದರು ಮತ್ತು ಅನಿಲ್ ಕೆಳಗೆ ಬಿದ್ದಿದ್ದರು ಎಂದು ತಿಳಿಸಿದ್ದರು. ಆಗಲೂ ಇದು ಆತ್ಮಹತ್ಯೆಯೋ ಹೌದೋ ಅಲ್ಲವೋ ಎನ್ನುವ ಸಂದೇಹವೇ ಇತ್ತು.

ಆದರೆ ಇದು ಆತ್ಮಹತ್ಯೆ ಎನ್ನುವುದು ಈಗ ಕನ್​ಫರ್ಮ್​ ಆಗಿದೆ. ಇದಕ್ಕೆ ಕಾರಣ ಅನಿಲ್​  ಅರೋರಾ ಅವರು ಸಾಯುವ ಮುನ್ನ ತಮ್ಮ ಇಬ್ಬರು ಪುತ್ರಿಯರಾದ ಮಲೈಕಾ ಅರೋರಾ ಮತ್ತು ಅಮೃತಾ ಅವರಿಗೆ ಕರೆ ಮಾಡಿ ನೋವು ತೋಡಿಕೊಂಡಿರುವ ವಿಷಯ ತಿಳಿದುಬಂದಿದೆ. ತೀವ್ರವಾದ ಹತಾಶೆಯಲ್ಲಿದ್ದ ಅವರು, ನಾನು ಅನಾರೋಗ್ಯದಿಂದ ತುಂಬಾ ನೊಂದಿದ್ದೇನೆ. ಹತಾಶೆಯಲ್ಲಿದ್ದೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಅದಾದ ಕೆಲವೇ ಗಂಟೆಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಸಮಯದಲ್ಲಿ ಮಲೈಕಾ ಪುಣೆಯಲ್ಲಿದ್ದರು.  ಅನಿಲ್​ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದರೂ, ಮಲೈಕಾ ತಾಯಿ  ಜಾಯ್ಸ್, ಅವರಿಗೆ ಯಾವುದೇ ಅನಾರೋಗ್ಯವಿರಲಿಲ್ಲ.  ಮೊಣಕಾಲು ನೋವಿನಿಂದ ಬಳಲುತ್ತಿದ್ದರು ಅಷ್ಟೇ ಎಂದಿದ್ದಾರೆ. 

ಇಂಥ ಹುಡುಗ ಸಿಕ್ರೆ ಮಾತ್ರ ಮದ್ವೆಯಾಗಿ, ಇಲ್ಲದಿದ್ರೆ ಮತ್ತೊಬ್ರನ್ನ ಹುಡುಕಿ ಅಷ್ಟೇ- ಯುವತಿಯರಿಗೆ ತನಿಷಾ ಕಿವಿಮಾತೇನು?
 
ತಮ್ಮ ತಂದೆಯ ನಿಧನ ಬಗ್ಗೆ ಮಲೈಕಾ ಸೋಷಿಯಲ್​ ಮೀಡಿಯಾದಲ್ಲಿ ದುಃಖದಿಂದ ಪೋಸ್ಟ್​ ಹಾಕಿದ್ದಾರೆ.  ‘ನಮ್ಮ ತಂದೆಯ ಸಾವಿನಿಂದ ಎಲ್ಲರೂ ದುಃಖಿತರಾಗಿದ್ದೇವೆ. ಅವರು ತುಂಬಾ ಸೌಮ್ಯ ವ್ಯಕ್ತಿ, ಪ್ರೀತಿಯ ಅಜ್ಜ, ಪ್ರೀತಿಯ ಪತಿ ಮತ್ತು ನಮ್ಮ ಅತ್ಯುತ್ತಮ ಸ್ನೇಹಿತರಾಗಿದ್ದರು. ಅವರ ನಿಧನದಿಂದ ನಮ್ಮ ಕುಟುಂಬವು ತೀವ್ರ ಆಘಾತಕ್ಕೊಳಗಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು ಮತ್ತು ಹಿತೈಷಿಗಳಿಂದ ಗೌಪ್ಯತೆಯನ್ನು ಕೋರುತ್ತೇವೆ. ನಿಮ್ಮ ಬೆಂಬಲ ಮತ್ತು ಪ್ರೀತಿಗಾಗಿ ನಾವು ಧನ್ಯವಾದಗಳು ಎಂದು ಬರೆದಿದ್ದಾರೆ.
 
ಪಂಜಾಬಿ ಹಿಂದೂ ಕುಟುಂಬಕ್ಕೆ ಸೇರಿದ ಅನಿಲ್ ಮೆಹ್ತಾ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ ನಡೆದಿದೆ.   ಅವರು ಸಿಗರೇಟ್ ಸೇದುವ ನೆಪದಲ್ಲಿ ಬಾಲ್ಕನಿಗೆ ಬಂದು ಆರನೇ ಮಹಡಿಯಿಂದ ಜಿಗಿದು ಜೀವನ ಕೊನೆಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಅನಿಲ್ ಮರ್ಚೆಂಟ್ ನೇವಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಕುಟುಂಬದವರ ಜೊತೆ ಚೆನ್ನಾಗಿಯೇ ಇದ್ದ ಅವರು  ಆಗಾಗ್ಗೆ ಕುಟುಂಬದೊಂದಿಗೆ ಊಟಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಸರ್ಕಾರ ಸರಿಯಿಲ್ಲ ಎಂದು ಬೈತಾ ಕೂತ್ಕೊಳೋಕೆ ಆಗತ್ತಾ? ಸಿನಿ ಇಂಡಸ್ಟ್ರಿ ಬಗ್ಗೆ ಕಿರಣ್​ ರಾಜ್​ ಹೇಳಿದ್ದೇನು?

Latest Videos
Follow Us:
Download App:
  • android
  • ios