ಪ್ರೀತಿಯ ವಿಷಯದಲ್ಲಿ ನೋವುಂಡಿರುವ ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ, ಯುವತಿಗೆ ಹೇಳಿದ ಕಿವಿ ಮಾತೇನು? 

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ಈಗ ಕಿರುತೆರೆ, ಹಿರಿತೆರೆ ಎಲ್ಲಾ ಕಡೆಯೂ ಫೇಮಸ್​ ಆಗಿದ್ದಾರೆ. ಅದರಲ್ಲಿಯೂ ಬಿಗ್​ಬಾಸ್​ ಇವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿದೆ. ಪೆಂಟಗನ್ ಚಿತ್ರದ ಮೂಲಕ ಎಂಥ ಪಾತ್ರಕ್ಕೂ ಸೈ ಎನ್ನುವಂಥ ನಟನೆ ಮಾಡಿದ್ದಾರೆ ತನಿಷಾ. ಇಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಚಗುಳಿ ನೀಡಿದ್ದಾರೆ. . ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿರುವ ನಟಿ ಇದೀಗ ತಮ್ಮ ಮುಂಬರುವ ಪೆನ್​ಡ್ರೈವ್​ ಸಿನಿಮಾದ ತಯಾರಿಯಲ್ಲಿದ್ದಾರೆ. ಇಲ್ಲಿ ಅವರು ಪೊಲೀಸ್​​ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಅವರನ್ನು ಈ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆದರೆ ಬಣ್ಣದ ಲೋಕದ ಎಲ್ಲರ ಬದುಕು ಬಣ್ಣಮಯವೇ ಆಗಿರಬೇಕೆಂದೇನೂ ಇಲ್ಲ. ತನಿಷಾ ಕೂಡ ಪ್ರೀತಿ ವಿಚಾರದಲ್ಲಿ ಬಹಳಷ್ಟು ನೋವನ್ನು ಅನುಭವಿಸಿದವರು. ಈ ಕುರಿತು ಅವರು ರಾಜೇಶ್​ ಗೌಡ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ತನಿಷಾ ಅವರು ಒಬ್ಬರನ್ನು ಪ್ರೀತಿಸುತ್ತಿದ್ದರು. ಅದು ಎಷ್ಟರಮಟ್ಟಿಗೆ ಎಂದರೆ ತಾವು ಒಮ್ಮೆ ಕಮಿಟ್ ಆದ್ರೆ ಬಿಡೋ ಮಾತೇ ಇಲ್ಲ ಅನ್ನುವುದು ನಟಿಯ ಮಾತು. ಇದೇ ಕಾರಣಕ್ಕೆ ಆತನನ್ನು ತುಂಬಾ ಇಷ್ಟಪಟ್ಟಿದ್ದ ತನಿಷಾ ಅವರನ್ನೇ ಮದುವೆಯಾಗುವ ಯೋಚನೆ ಮಾಡಿದ್ದರು. ಆದರೆ, ಅವರಿಬ್ಬರ ನಡುವೆ ಬಿರುಕು ಶುರುವಾದದ್ದು, ಆ ಯುವಕ, 'ನಿನಗೆ ನಾನು ಮುಖ್ಯನಾ ಧಾರಾವಾಹಿ ಮುಖ್ಯನಾ' ಕೇಳಿದಾಗ. ನಟನೆ ಎಂದರೆ ಪಂಚಪ್ರಾಣವಾಗಿದ್ದ ತನಿಷಾ ತನ್ನ ಹುಡುಗನಿಗಾಗಿ ನಟನೆಯನ್ನೂ ಬಿಡಲು ರೆಡಿ ಆಗಿದ್ದರು. ಬಿಟ್ಟರು ಕೂಡ.

100ಕ್ಕೆ 90 ಗಂಡಸರು ಕೆಟ್ಟದೃಷ್ಟಿಯಿಂದ ನೋಡ್ತಾರೆ: ಬಿಗ್​ಬಾಸ್​ ತನಿಷಾ ಕುಪ್ಪಂಡ ನೋವಿನ ನುಡಿ

ನಟನೆ ಬಿಟ್ಟು ಮತ್ತೆ ಹುಡುಗನ ಬಳಿ ಹೋದಾಗ ಮತ್ತೆ ಕಿರಿಕ್​ ಶುರುವಾಗಿತ್ತು. ಆತನಿಗೆ ತುಂಬಾ ಅನುಮಾನದ ಸ್ವಭಾವ ಎನ್ನುವುದು ತನಿಷಾ ಮಾತು. ನಾನು ಯಾರ ಜೊತೆ ಮಾತನಾಡಿದರೂ ಇಷ್ಟವಾಗುತ್ತಿರಲಿಲ್ಲ. ಸೀರಿಯಲ್​ ಸೆಟ್​ನಲ್ಲಿ ನಟನ ಜೊತೆ ಕೂಡ ಮಾತನಾಡುವಂತೆ ಇರಲಿಲ್ಲ. ಆನ್‌ಸ್ಕ್ರೀನ್ ಯಾರೊಬ್ಬ ನಟನ ಜೊತೆ ಕೊಂಚ ಹತ್ತಿರ ಕಂಡರೂ ಜಗಳ ಮಾಡುತ್ತಿದ್ದ. ಆತನಿಗಾಗಿ ಹಲವು ನಟನೆಯ ಛಾನ್ಸ್ ಬಿಟ್ಟೆ. ಅವನೇ ಸರ್ವಸ್ವ ಎಂದುಕೊಂಡೆ ಎಂದಿರುವ ತನಿಷಾರಿಗೆ ಕೊನೆಗೂ ಈ ಸಂಬಂಧ ಉಳಿಸಿಕೊಳ್ಳಲು ಆಗಲೇ ಇಲ್ಲ. ಒಂದು ಹಂತದವರೆಗೆ ಸಹಿಸಿಕೊಂಡ ತನಿಷಾ, ಕೊನೆಗೆ ಯುವಕನ ಜೊತೆ ಬ್ರೇಕಪ್​ ಆದರು. ಈ ನೋವಿನ ಬಗ್ಗೆ ರಾಜೇಶ್​ ಗೌಡ ಅವರ ಷೋನಲ್ಲಿ ನಟಿ ವಿವರಿಸುತ್ತಲೇ ತಮ್ಮಂತೆ ನೋವು ಅನುಭವಿಸುತ್ತಿರುವ ನಟಿಯರಿಗೆ ಕಿವಿ ಮಾತನ್ನು ಹೇಳಿದ್ದಾರೆ.

ಅದೇನೆಂದರೆ, ನೀವು ಮದುವೆಯಾಗು ಹುಡುಗ ಹೇಗಿರಬೇಕು ಎಂದರೆ, ನಿಮ್ಮನ್ನು ನೀವು ಎಷ್ಟು ಇಷ್ಟಪಡುತ್ತೀರೋ, ಅದಕ್ಕಿಂತಲೂ ಹೆಚ್ಚು ಆತ ನಿಮ್ಮನ್ನು ಇಷ್ಟಪಡುವಂತೆ ಇರಬೇಕು. ಒಂದು ವೇಳೆ ಆತ ಹೀಗೆ ಇಲ್ಲಾ ಎಂದರೆ ಈಗಲ್ಲದಿದ್ದರೂ ಮುಂದೊಂದು ದಿನ ಅದು ನಿಮಗೆ ಸಮಸ್ಯೆ ತಂದೊಡ್ಡುತ್ತದೆ. ಆದ್ದರಿಂದ ನಿಮ್ಮನ್ನು ಆ ರೀತಿ ಇಷ್ಟ ಪಡುವ ಕ್ಯಾರೆಕ್ಟರ್​ ನಿಮ್ಮ ಹುಡುಗನಿಗೆ ಇಲ್ಲ ಎನಿಸಿದರೆ ನಿರ್ದಾಕ್ಷಿಣ್ಯವಾಗಿ ಬಿಟ್ಟುಬಿಡಿ, ಇಲ್ಲದಿದ್ದರೆ ತುಂಬಾ ಸಫರ್​ ಆಗಬೇಕಾಗುತ್ತದೆ. ಮತ್ತೊಂದು ಹುಡುಗನ ಹುಡುಕಿ. ಎಲ್ಲಕ್ಕಿಂತಲೂ ಮುಖ್ಯವಾದದ್ದು ನಿಮ್ಮ ಜೀವನ. ಇಲ್ಲದಿದ್ದರೆ ಇಡೀ ಲೈಫ್​ ಹಾಳಾಗುತ್ತದೆ ಎನ್ನುವ ಅರ್ಥದಲ್ಲಿ ತನಿಷಾ ಮಾತನಾಡಿದ್ದಾರೆ. ಈ ಮೂಲಕ ತಾವು ಪ್ರೇಮದ ವಿಷಯದಲ್ಲಿ ಅನುಭವಿಸಿರುವ ನೋವುಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಹಸಿಬಿಸಿ ದೃಶ್ಯದ ಬಳಿಕ 'ಪೆನ್​ಡ್ರೈವ್'​ನಲ್ಲಿ ಬಿಗ್​ಬಾಸ್​ ತನಿಷಾ! ಥೋ ಥೋ... ವಿಡಿಯೋ ವೈರಲ್​