ಸರ್ಕಾರ ಸರಿಯಿಲ್ಲ ಎಂದು ಬೈತಾ ಕೂತ್ಕೊಳೋಕೆ ಆಗತ್ತಾ? ಸಿನಿ ಇಂಡಸ್ಟ್ರಿ ಬಗ್ಗೆ ಕಿರಣ್ ರಾಜ್ ಹೇಳಿದ್ದೇನು?
ಕನ್ನಡತಿ ಸೀರಿಯಲ್ ಮೂಲಕ ಫೇಮಸ್ ಆಗಿರೋ ಕಿರಣ್ ರಾಜ್ ಅವರ ರಾನಿ ಚಿತ್ರ ಇಂದು ಬಿಡುಗಡೆಯಾಗಿದೆ. ಇದರ ನಡುವೆಯೇ ಸಿನಿಮಾ ಇಂಡಸ್ಟ್ರಿಯ ಬಗ್ಗೆ ನಟ ಹೇಳಿದ್ದೇನು?
ಕನ್ನಡತಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ನಟ ಕಿರಣ್ ರಾಜ್ ಅವರ ರಾನಿ ಸಿನಿಮಾ ಇಂದು ಬಿಡುಗಡೆಯಾಗಿದೆ. ಆದರೆ ಇದರ ನಡುವೆಯೇ ನಟ ಅಪಘಾತವೊಂದರಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿಗೆ ಅಡ್ಡ ಬಂದ ಮುಂಗುಸಿಯೊಂದನ್ನು ತಪ್ಪಿಸಲು ಹೋಗಿ ನಟನಿಗೆ ಗಂಭೀರ ಗಾಯಗಳಾಗಿದ್ದು, ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿಗೆ ಹೋಗುವ ಸಂದರ್ಭದಲ್ಲಿ ಮುದ್ದರಾಯನ ಪಾಳ್ಯ ಬಳಿ ಬರುವ ವೇಳೆ ರಸ್ತೆಗೆ ಮುಂಗುಸಿ ಅಡ್ಡ ಬಂತು. ಅದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಕಾರಿನ ಹಿಂದೆ ಕುಳಿತಿದ್ದ ಕಿರಣ್ ಅವರ ಎದೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಕಿರಣ್ ಅವರು ತಮ್ಮ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ. ನಿನ್ನೆಯ ಘಟನೆ ನಂತರ ನಾನು ಈಗ ಆರಾಮಾವಾಗಿದ್ದೇನೆ ಎಂದು ನಿಮಗೆ ತಿಳಿಸುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಕಾಳಜಿಯ ಮೆಸೇಜ್ಗಳನ್ನು ನಾನು ನೋಡಿದೆ. ನಿಮ್ಮ ಕಾಳಜಿಯ ಮಾತುಗಳು ಹಾಗೂ ಹಾರೈಕೆಗಳಿಗೆ ಧನ್ಯವಾದ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆಯೇ ಕಿರಣ್ ರಾಜ್ ಅವರು, ರ‍್ಯಾಪಿಡ್ ರಶ್ಮಿ ಷೋನಲ್ಲಿ ಸಿನಿಮಾ ಇಂಡಸ್ಟ್ರಿಯ ಕುರಿತು ಕೆಲವೊಂದು ನೋವಿನ ನುಡಿಗಳನ್ನು ಆಡಿದ್ದಾರೆ. ಈ ಷೋನಲ್ಲಿ ತಮ್ಮ ಜೀವನದ ಹಲವಾರು ಮಜಲುಗಳ ಬಗ್ಗೆ ಮಾತನಾಡಿರುವ ಕಿರಣ್ ರಾಜ್, ಸಿನಿಮಾ ಕ್ಷೇತ್ರದಲ್ಲಿ ಬೆಳೆಯಬೇಕು ಎಂದರೆ ಏನು ಮಾಡಬೇಕು ಎಂದು ಹೇಳುತ್ತಲೇ ಕನ್ನಡದ ಇಂಡಸ್ಟ್ರಿಯ ಬಗ್ಗೆಯೂ ಸ್ವಲ್ಪ ಅಸಮಾಧಾನವನ್ನು ಹೊರಹಾಕಿದ್ದಾರೆ. ಅದಕ್ಕೆ ಉದಾಹರಣೆ ಕೊಟ್ಟಿರುವ ಕಿರಣ್, ನೋಡಿ ಒಂದು ಟೈಟಲ್ ರಿಲೀಸ್ಗೆ ಎಂದು ಸ್ಕೈಡೈವಿಂಗ್ ಮಾಡಿದೆ. ಬೇರೆ ಇಂಡಸ್ಟ್ರಿಯಲ್ಲಿ ಆಗಿದ್ರೆ ಇದೊಂದು ಬೂಮ್ ಆಗಿರುತ್ತಿತ್ತು. ಆದರೆ ಇಲ್ಲಿಯವರು ಅದನ್ನು ಗುರುತಿಸಲೇ ಇಲ್ಲ. ಇಲ್ಲಿಯವರು ಯಾವ ರೀತಿಯ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ ಎಂದು ಹೇಳುವುದೇ ಕಷ್ಟ. ಆದರೂ ನಾವು ನಮ್ಮ ಕೆಲಸವನ್ನು ಮಾಡಬೇಕಷ್ಟೇ ಎಂದು ನೋವಿನ ನುಡಿಗಳನ್ನಾಡಿದ್ದಾರೆ.
ನನ್ ಕನಸಿನ ಹುಡ್ಗನೇ ಬೇರೆ ಇದ್ದ, ಅವ್ರನ್ನ ಯಾಕೆ ಒಪ್ಪಿಕೊಂಡ್ನೋ ಈಗ್ಲೂ ಗೊತ್ತಾಗ್ತಿಲ್ಲ: ಅದಿತಿ ಹೇಳಿದ್ದೇನು?
ಇದೇ ವೇಳೆ ಸಿನಿಮಾ ಇಂಡಸ್ಟ್ರಿಯಲ್ಲಿ ಕೇಳಿಬರುವ ನೆಪೋಟಿಸಂ, ಫೇವರಿಸಂ ಬಗ್ಗೆಯೂ ಕಿರಣ್ ರಾಜ್ ಮಾತನಾಡಿದ್ದಾರೆ. ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು ಎಂದರೆ ಗಾಡ್ ಫಾದರ್ ಇರಬೇಕು, ಇಲ್ಲವೇ ಕುಟುಂಬದಲ್ಲಿ ಯಾರೋ ದೊಡ್ಡ ಸ್ಟಾರ್ ಆಗಿರಬೇಕು. ಅಂಥವರಿಗೆ ಮಾತ್ರ ಸಿನಿಮಾದಲ್ಲಿ ಮಣೆ ಹಾಕಲಾಗುತ್ತದೆ ಎಂಬ ಆರೋಪವನ್ನು ಇದಾಗಲೇ ಬಹುತೇಕ ನಟ-ನಟಿಯರು ಮಾಡಿದ್ದಾರೆ. ಸ್ಟಾರ್ ನಟರ ಮಕ್ಕಳೋ ಇಲ್ಲವೇ ಸಂಬಂಧಿಕರೋ ಸಿನಿಮಾ ಇಂಡಸ್ಟ್ರಿಗೆ ಬರುವುದು ಬಲು ಸುಲಭ. ಅವರಿಗೆ ನಟನೆ ಗೊತ್ತಿರಬೇಕೆಂದೇನೂ ಇಲ್ಲ, ಇಲ್ಲವೇ ಯಾವುದೇ ಟ್ಯಾಲೆಂಟ್ ಇಲ್ಲದಿದ್ದರೂ ಪರವಾಗಿಲ್ಲ, ಸಿನಿಮಾಗಳಿಗೆ ಎಂಟ್ರಿ ಸುಲಭ ಎನ್ನುವ ಮಾತನ್ನೇ ಕಿರಣ್ ರಾಜ್ ಇಲ್ಲಿಯೂ ಉಲ್ಲೇಖಿಸಿದ್ದಾರೆ.
ಆದರೆ ಕಿರಣ್ ಅವರು ಇದರ ಬಗ್ಗೆ ಹೇಳುತ್ತಲೇ ನೋಡಿ, ನೆಪೋಟಿಸಂ, ಫೇವರಿಸಂ ಎಲ್ಲವೂ ಇದೆ. ಹಾಗೆಂದು ನಾವು ದೂರುತ್ತಾ ಕುಳಿತುಕೊಂಡರೆ ಪ್ರಯೋಜನ ಇಲ್ಲ. ಏಕೆಂದರೆ ಇದು ಬಹಳ ಹಿಂದಿನಿಂದಲೂ ಇದೆ, ಇನ್ನು ನೂರು ವರ್ಷ ಬಿಟ್ಟರೂ ಇರುತ್ತದೆ. ಅದಕ್ಕೆ ಯಾವುದೇ ಪರಿಹಾರ ಇಲ್ಲ ಎನ್ನುತ್ತಲೇ ಸರ್ಕಾರದ ಉದಾಹರಣೆ ಕೊಟ್ಟಿದ್ದಾರೆ. ಸರ್ಕಾರ ಚೆನ್ನಾಗಿಲ್ಲ ಎಂದು ದೂರುತ್ತಾ ಕುಳಿತುಕೊಳ್ಳಲು ಆಗತ್ತಾ ಇಲ್ಲವಲ್ಲ. ಯಾವ ಸರ್ಕಾರ ಇದ್ದರೂ ಅದರ ಜೊತೆ ಬದುಕುವುದು ಅನಿವಾರ್ಯ, ಬದುಕಲೇ ಬೇಕು ತಾನೆ? ಪರಿಹಾರ ಇಲ್ಲ ಎಂದು ಗೊತ್ತಾದಾಗ ಅದನ್ನು ಇಗ್ನೋರ್ ಮಾಡಬೇಕು ಅಷ್ಟೇ. ಹಾಗೆಂದು ನಿರಾಶರಾಗಬೇಕಾಗುವ ಅಗತ್ಯವಿಲ್ಲ. ಎಲ್ಲರಿಗಿಂತಲೂ ಬೆಸ್ಟ್ ಹೇಗೆ ಆಗಬೇಕು ಎಂದು ಕಲಿತುಕೊಂಡರೆ ಅವಕಾಶಗಳು ಸಿಗುತ್ತವೆ ಎಂದು ಕಿರಣ್ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಥ ಹುಡುಗ ಸಿಕ್ರೆ ಮಾತ್ರ ಮದ್ವೆಯಾಗಿ, ಇಲ್ಲದಿದ್ರೆ ಮತ್ತೊಬ್ರನ್ನ ಹುಡುಕಿ ಅಷ್ಟೇ- ಯುವತಿಯರಿಗೆ ತನಿಷಾ ಕಿವಿಮಾತೇನು?