ಚಾನ್ಸ್‌ ಬೇಕೆಂದ್ರೆ ನಿರ್ದೇಶಕರ ಜೊತೆ ಮಲಗ್ಬೇಕು ಅಂದಿದ್ದ ಬಾಯ್‌ಫ್ರೆಂಡ್‌ ಎಂದು ರಾಹುಲ್‌ ಪಾಂಡ್ಯ ವಿರುದ್ಧ ಬಿಗ್‌ಬಾಸ್‌ ಸ್ಪರ್ಧಿ ಐಶ್ವರ್ಯ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದೇನು? 

 ಇದಾಗಲೇ ಹಲವಾರು ತಾರೆಯರು ಕಾಸ್ಟಿಂಗ್‌ ಕೌಚ್‌ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಟಿಯರು ಮಾತ್ರವಲ್ಲದೇ ಕೆಲವು ನಟರಿಗೂ ಈ ಕೆಟ್ಟ ಅನುಭವ ಆಗಿದ್ದಿದೆ. ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ತಮ್ಮ ಜೊತೆ ಮಲಗಲು ನೇರವಾಗಿ ಆಹ್ವಾನವಿತ್ತ ನಟರು, ನಿರ್ದೇಶಕರು, ನಿರ್ಮಾಪಕರು ಮುಂತಾದವರ ಬಗ್ಗೆ ಇದಾಗಲೇ ಹಲವರು ಮಾತನಾಡಿದ್ದು, ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಅದರಲ್ಲಿಯೂ ಬಾಲಿವುಡ್‌ನಲ್ಲಿ ಸದಾ ಅವಕಾಶ ಸಿಗಬೇಕು ಎಂದರೆ ಇದು ಅನಿವಾರ್ಯ, ಇಲ್ಲದಿದ್ದರೆ ಚಿತ್ರರಂಗದಿಂದಲೇ ಹೊರಹಾಕಲಾಗುತ್ತದೆ ಎನ್ನುವ ಮಾತುಗಳನ್ನೂ ಆಡಿದ್ದಾರೆ. ಇದೀಗ ಅಂಥದ್ದೇ ಒಂದು ವಿಷಯವನ್ನು ಶೇರ್‌ ಮಾಡಿಕೊಂಡಿದ್ದಾರೆ ಹಿಂದಿ ಬಿಗ್‌ಬಾಸ್‌ನಿಂದ ಹೊರಬಂದಿರುವ ಸ್ಪರ್ಧಿ ಐಶ್ವರ್ಯ ಶರ್ಮಾ.

ಅಂದಹಾಗೆ ಈ ಬಾರಿಯ ಹಿಂದಿನ ಬಿಗ್‌ಬಾಸ್‌ ಸ್ಪಲ್ಪ ವಿಶೇಷವಾಗಿತ್ತು. ಈ ಬಾರಿ ದಂಪತಿಯನ್ನು ಒಳಗೆ ಕಳುಹಿಸಲಾಗಿದೆ. ಆ ಪೈಕಿ ಐಶ್ವರ್ಯ ಶರ್ಮಾ ಮತ್ತು ನೀಲ್‌ ಭಟ್‌ ಒಬ್ಬರು. ಬಿಗ್‌ಬಾಸ್‌ ಎಂದರೆ ಇಲ್ಲಿ ಇರುವವರು ಹೆಚ್ಚು ಕಾಂಟ್ರವರ್ಸಿ ಮಾಡಿರುವವರೇ. ಇಂಥವರಿಗೇ ಇಲ್ಲಿ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದೇ ರೀತಿ, ಐಶ್ವರ್ಯ ಕೂಡ ಕಾಂಟ್ರವರ್ಸಿ ಲೇಡಿಯೇ. ಇವರು ನೀಲ್‌ ಭಟ್‌ ಅವರನ್ನು ಮದುವೆಯಾಗು ಮೊದಲು ರಾಹುಲ್‌ ಪಾಂಡ್ಯ ಎನ್ನುವವರ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇದೀಗ ಅವರು ರಾಹುಲ್‌ ಪಾಂಡ್ಯ ಕುರಿತು ಹಲವಾರು ರೀತಿಯ ಆರೋಪ ಮಾಡಿದ್ದಾರೆ.

ಉರ್ಫಿಯ ಮತ್ತೊಂದು ರೂಪಕ್ಕೆ ಫ್ಯಾನ್ಸ್‌ ಭಾವುಕ! ದುಡ್ಡಿಗೆ ಬೆತ್ತಲಾಗುವರ ಮುಂದೆ ನಿಮಗೊಂದು ಸಲಾಂ ಎಂದ ನೆಟ್ಟಿಗರು

2014 ರಲ್ಲಿ, ಐಶ್ವರ್ಯ ರಾಹುಲ್ ಪಾಂಡ್ಯ ಎಂಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಂಡಸ್ಟ್ರಿಯಲ್ಲಿ ತನ್ನದೇ ಆದ ಐಡೆಂಟಿಟಿಗಾಗಿ ಐಶ್ವರ್ಯಾ ಕಷ್ಟಪಡುತ್ತಿದ್ದ ಸಮಯ ಅದು. ಆಗ ರಾಹುಲ್‌ ಐಶ್ವರ್ಯಗೆ ನಟನೆಯಲ್ಲಿ ಚಾನ್ಸ್​​ ಗಿಟ್ಟಿಸಿಕೊಳ್ಳ ಬೇಕಾದರೆ ನಿರ್ದೇಶಕ-ನಿರ್ಮಾಪಕರ ಜೊತೆ ಮಲಗಿದರೆ ಮಾತ್ರ ಇಂಡಸ್ಟ್ರಿಯಲ್ಲಿ ಕೆಲಸ ಸಿಗುತ್ತದೆ ಎಂದು ಹೇಳಿದ್ದರಂತೆ. ಈ ಕುರಿತು ನಟಿ ಹೇಳಿಕೊಂಡಿದ್ದಾರೆ. 

ಇದೇ ವೇಳೆ ರಾಹುಲ್‌ ಪಾಂಡ್ಯ ಅವರನ್ನು ತಾವು ಮದುವೆಯಾಗದೇ ಇರುವುದಕ್ಕೆ ಸ್ಪಷ್ಟನೆ ನೀಡಿದ ಐಶ್ವರ್ಯ ಅವರು, ರಾಹುಲ್‌ ಅನುಚಿತ ವರ್ತನೆ ಮಾಡುತ್ತಿದ್ದ. ನಟಿಯಾಗಬೇಕು ಎಂದು ನಾನು ಆಸೆ ಪಟ್ಟರೆ, ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಮಲಗಿದ್ರೆ ಮಾತ್ರ ನಿನಗೆ ಅವಕಾಶ ಸಿಗುತ್ತದೆ ಎಂದಿದ್ದ ಎಂದಿದ್ದಾರೆ. ಇದೇ ವೇಳೆ ರಾಹುಲ್‌ ತಾನು ಅವನನ್ನು ಮದುವೆಯಾಗಿರುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾನೆ. ಒಂದು ವೇಳೆ ಮದುವೆಯಾಗಿದ್ದರೆ ಆತ ಮದುವೆಯ ಪ್ರಮಾಣಪತ್ರವನ್ನು ತೋರಿಸಿ. ಆತ ನನ್ನ ಜೀವನದಿಂದ ನಿರ್ಗಮಿಸಿದ್ದಾನೆ. ಅವನ ಜೊತೆಗಿನ ನನ್ನ ಫೋಟೋ ಇಟ್ಟುಕೊಂಡು ಮದ್ವೆಯಾಗಿರುವುದಾಗಿ ಹೇಳುತ್ತಿದ್ದಾನೆ. ಅವನು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಅನಿಮಲ್‌ ನಟ ರಣಬೀರ್‌ ಕಪೂರ್‌ ವಿರುದ್ಧ ದೂರು- ಅಷ್ಟಕ್ಕೂ ಆಗಿದ್ದೇನು?