ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಹಿಟ್ ಸಿನಿಮಾ ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ 2 : ಕನ್ಕ್ಲೂಷನ್ ಶೀಘ್ರವೇ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ವೀಕ್ಷಿಸಬಹುದಾಗಿದೆ. ಜಗತ್ತಿನಾದ್ಯಂತ ಹವಾ ಸೃಷ್ಟಿಸಿದ್ದ ಸೌತ್ ಸಿನಿಮಾ ಮತ್ತೊಮ್ಮೆ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ.

ಬಾಲಿವುಡ್‌ನಲ್ಲಿ ಸಿನಿಮಾ ರಿಲೀಸ್ ಇತ್ಯಾದಿ ಜವಾಬ್ದಾರಿ ಹೊತ್ತುಕೊಂಡಿದ್ದ ನಿರ್ಮಾಪಕ ಕರಣ್ ಜೋಹರ್ ಟ್ವಿಟರ್‌ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ. ಮತ್ತೊಮ್ಮೆ ಮ್ಯಾಜಿಕ್ ಕಾಣಿಸಲಿದೆ. ಬಾಹುಬಲಿ ಭಾಗ 1 ಮತ್ತು 2 ಶೀಘ್ರ ರಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ.

ಡ್ರಗ್ಸ್ ದಂಧೆ: ದೀಪಿಕಾ ಮ್ಯಾನೇಜರ್ ಕೆಲಸದಿಂದ ಔಟ್..!

ಬಾಹುಬಲಿ: ದಿ ಬಿಗಿನಿಂಗ್ ನವೆಂಬರ್ 6ರಂದು ರಿಲೀಸ್ ಆಗಲಿದ್ದು, ಬಾಹುಬಲಿ : ಕನ್ಕ್ಲೂಷನ್ ನವೆಂಬರ್ 13ರಂದು ರಿಲೀಸ್ ಆಗಲಿದೆ. 2015ರಲ್ಲಿ ರಿಲೀಸ್ ಆದ ಸಿನಿಮಾದಲ್ಲಿ ಪ್ರಭಾಸ್ ಜೊತೆ, ರಾಣಾ ದಗ್ಗುಬಾಟಿ, ತಮನ್ನಾ, ಅನಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ಸತ್ಯರಾಜ್ ಸೇರಿ ಪ್ರಮುಖ ಕಲಾವಿದರು ನಟಿಸಿದ್ದರು.

ಎಲ್ಲ ಬಾಕ್ಸ್ ಆಫೀಸ್ ರೆಕಾರ್ಡ್‌ಗಳನ್ನು ಮೀರಿ ದಾಖಲೆ ಸೃಷ್ಟಿಸಿದ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇನ್ನು ವಿದೇಶದ ನೆಲದಲ್ಲಿಯೂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚಗೆ ಹಲವು ರಾಷ್ಟ್ರಗಳಲ್ಲಿ ಬಾಹುಬಲಿ ರಿ ರಿಲೀಸ್ ಆಗಿದೆ.