ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಅವರ ಸಹೋದರಿ ರಂಗೋಲಿ ಚಂಡೇಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಾಂದ್ರಾ ಕೋರ್ಟ್ ಆದೇಶ ನೀಡಿದೆ. ಬಾಂದ್ರಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಆದೇಶ ಹೊರಡಿಸಿದೆ.

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಹಿಂದೂ ಮತ್ತು ಮುಸ್ಲಿಂ ನಡುವೆ ಕೋಮು ಸೌಹಾರ್ದ ಕದಡಿದ ಆರೋಪ ಬಾಲಿವುಡ್ ಸೆಲೆಬ್ರಿಟಿ ಸಹೋದರಿಯರ ಮೇಲಿದೆ.

ಟ್ಯಾಗ್‌ನಲ್ಲಿ ಅನುಪಮ್ ಖೇರ್‌ನನ್ನು ಕೈಬಿಟ್ಟ ಕರಣ್: ಹೀಗಿತ್ತು ಹಿರಿಯ ನಟನ ರಿಯಾಕ್ಷನ್

295ಎ(ಧರ್ಮ ನಿಂದಿಸಿ ವಿವಾದ ಸೃಷ್ಟಿಸುವುದು), 153ಎ(ಎರಡು ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವುದು), 124ಎರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಿನಿಮಾ ಇಂಡಸ್ಟ್ರಿಯ ಫಿಟ್‌ನೆಸ್‌ ಟ್ರೈನರ್ ಮುನ್ನಾವರಾಲಿ ಸಯ್ಯದ್ ಎಂಬವರು ದೂರು ನೀಡಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮಾಡಲಾದ ಹಲವು ಟ್ವೀಟ್‌ಗಳನ್ನು ದೂರಿನಲ್ಲಿ ನಮೂದಿಸಲಾಗಿದೆ. ಮುಂಬೈಯನ್ನು ಪಾಕ್ ಎಂದು ಕರೆದಿದ್ದು ಸೇರಿ ಹಲವು ಆರೋಪಗಳಿವೆ. ಕರ್ನಾಟಕದಲ್ಲಿಯೂ ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಕೃಷಿಕರನ್ನು ವಿರೋಧಿಸಿ ಟ್ವೀಟ್ ಮಾಡಿದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.