ನಿರ್ಮಾಪಕ ಕರಣ್ ಜೋಹಾರ್ ಅವರ ಧರ್ಮ ಪ್ರೊಡಕ್ಷನ್ ಟ್ವೀಟ್‌ನಲ್ಲಿ ಹಿರಿಯ ನಟನ ಹೆಸರನ್ನೇ ಟ್ಯಾಗ್ ಮಾಡದೆ ಮಿಸ್ ಮಾಡಲಾಗಿದೆ. ಇದಕ್ಕೆ ನಟ ಅನುಪಮ್ ಖೇರ್ ಪ್ರತಿಕ್ರಿಯಿಸಿದ್ದಾರೆ.

ಕುಚ್‌, ಕುಚ್ ಹೋತಾ ಹೇ ಸಿನಿಮಾದ 22 ವರ್ಷಗಳನ್ನು ಸಂಭ್ರಮಿಸಿ ಧರ್ಮ ಪ್ರೊಡಕ್ಷನ್ ಟ್ವೀಟ್ ಮಾಡಿತ್ತು. ಬಹುತೇಕ ನಟ, ನಟಿಯರನ್ನು ಟ್ಯಾಗ್ ಮಾಡಿದ್ದರೂ, ಹಿರಿಯ ನಟನನ್ನೇ ಟ್ಯಾಗ್ ಮಾಡಿರಲಿಲ್ಲ.

ಪೃಥ್ವಿರಾಜ್ ಸಿನಿಮಾ: ಅಕ್ಷಯ್ ಜೊತೆ ಮಾಜಿ ವಿಶ್ವಸುಂದರಿ ಮಾನುಷಿ..!

ಸಿನಿಮಾದ ಹಿಟ್ ಸೀನ್ ಪೋಸ್ಟ್ ಮಾಡಿದ ಧರ್ಮ ಪ್ರೊಡಕ್ಷನ್ಸ್, ಲೀಡ್‌ ಆಕ್ಟರ್‌ಗಳ ಇಂಟರ್‌ವ್ಯೂ ಕೂಡಾ ಪೋಸ್ಟ್ ಮಾಡಿದ್ದರು. ಪೂರ್ಣ ಚಿತ್ರತಂಡವನ್ನೇ ಟ್ಯಾಗ್ ಮಾಡಿದ್ದರೂ ಹಿರಿಯ ನಟ ಅನುಪಮ್ ಅವರನ್ನೇ ಕೈಬಿಡಲಾಗಿತ್ತು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅನುಪಮ್ ಖೇರ್, ಗೆಳೆಯಾ ನಾನು ಇದ್ನಾಪ್ಪಾ ಸಿನಿಮಾದಲ್ಲಿ. ನಮ್ಮನ್ನೂ ಟ್ಯಾಗ್ ಮಾಡ್ಬೋದಿತ್ತು.. ಎನಿವೇ ಈ ಸಿನಿಮಾದ ಭಾಗವಾಗಿದ್ದು ಖುಷಿ ಇದೆ ಎಂದು ಬರೆದಿದ್ದಾರೆ.