Asianet Suvarna News Asianet Suvarna News

ಟೈಗರ್​ ಶ್ರಾಫ್​ಗೆ ಅಕ್ಷಯ್​ ಕುಮಾರ್​ ಹೀಗ್​ ಮಾಡೋದಾ? ವಿಡಿಯೋಗೆ ಸೆಲೆಬ್ರಿಟಿಗಳಿಂದಲೂ ಕಮೆಂಟ್ ಸುರಿಮಳೆ​!

ಟೈಗರ್​ ಶ್ರಾಫ್​ಗೆ ಅಕ್ಷಯ್​ ಕುಮಾರ್​ ಹೀಗ್​ ಮಾಡೋದಾ? ವಿಡಿಯೋ ವೈರಲ್​ ಆಗಿದ್ದು, ನಟ-ನಟಿಯರೂ ಇದಕ್ಕೆ ಕಮೆಂಟ್​ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 

Bade Miyan Chote Miyan fans Still Laughing At Akshay Kumar And Tiger Shroffs LOL Video suc
Author
First Published Mar 16, 2024, 3:55 PM IST

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್​ ಇದೇ ಮೊದಲ ಬಾರಿಗೆ ಸಿನಿಮಾ ಒಂದಕ್ಕಾಗಿ ಕೈ ಜೋಡಿಸಿದ್ದಾರೆ. ಇವರಿಬ್ಬರೂ ನಟಿಸಿರುವ ಬಡೇ ಮಿಯಾನ್ ಚೋಟೆ ಮಿಯಾನ್‌ ಏಪ್ರಿಲ್​ 10ರಂದು ತೆರೆಗೆ ಬರಲಿದೆ. ಇದೇ ಹೆಸರಿನ ಚಿತ್ರ 1998 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ  ಅಮಿತಾಭ್​ ಬಚ್ಚನ್ ಮತ್ತು ಗೋವಿಂದ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿತ್ತು. ಮೂಲ ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ ಮತ್ತು ರಮ್ಯಾ ಕೃಷ್ಣನ್, ರವೀನಾ ಟಂಡನ್, ಅನುಪಮ್ ಖೇರ್ ಮತ್ತು ಪರೇಶ್ ರಾವಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವು ವರ್ಷದ ಅತ್ಯಂತ ದೊಡ್ಡ ಹಿಟ್‌ಗಳಲ್ಲಿ ಒಂದಾಗಿತ್ತು. ಇದೀಗ ಅದೇ ಹೆಸರಿನ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್​ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ  ಚಿತ್ರದ ಪ್ರಚಾರದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಟೈಗರ್ ಸಿನಿಮಾಗಳಲ್ಲಿ ಆ್ಯಕ್ಷನ್​ಗೆ ಕೊರತೆ ಇರುವುದಿಲ್ಲ. ಇದೊಂದು ಬಿಗ್ ಆಕ್ಷನ್ ಸಿನಿಮಾವಾಗಿದ್ದು, ಈ ಸಿನಿಮಾದಲ್ಲೂ ಭರ್ಜರಿ ಫೈಟಿಂಗ್ ಇರಲಿದೆ ಎನ್ನಲಾಗುತ್ತಿದೆ. ಇವರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ.  ಹಿಂದಿ, ಕನ್ನಡ ಸೇರಿ ಐದು ಭಾಷೆಗಳಲ್ಲಿ ಇದು ತೆರೆಗೆ ಬರುತ್ತಿದೆ.

 ಸುಮಾರು 200 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ತಯಾರಿಸಲಾಗಿದ್ದು, ಇದರ ನಿರ್ದೇಶಕರು  ಅಲಿ ಅಬ್ಬಾಸ್ ಝಫರ್. ಮಲಯಾಳಂ ನಟ ಪೃಥ್ವಿರಾಜ್‌ ಸುಕುಮಾರನ್ ಅವರು  ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಉಳಿದಂತೆ, ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್, ರೋನಿತ್ ರಾಯ್ ಮುಂತಾದವರು ಚಿತ್ರದಲ್ಲಿದ್ದಾರೆ.  ಅಕ್ಷಯ್ ಕುಮಾರ್ ಮತ್ತು ಟೈಗರ್ ಅವರು ಸಹೋದರರಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಪೂಜಾ ಎಂಟರ್‌ಟೇನ್‌ಮೆಂಟ್‌ನ ವಶು ಭಗ್ನಾನಿ ಜೊತೆಗೆ ನಿರ್ದೇಶಕ ಅಲಿ ಅಬ್ಬಾಸ್ ಝಫರ್, ದೀಪ್ಶಿಕಾ ದೇಶಮುಖ್‌, ಜಾಕಿ ಭಗ್ನಾನಿ, ಹಿಮಾನ್ಷು ಕಿಶನ್ ಮೆಹ್ರಾ ಕೂಡ ಚಿತ್ರಕ್ಕೆ  ಹಣ ಹಾಕಿದ್ದಾರೆ. 

ನನ್​ ಮಕ್ಕಳು ಓಡೋಗಿ ಮದ್ವೆಯಾಗ್ಲಪ್ಪಾ ಎಂದ ಅಕ್ಷಯ್​ ಕುಮಾರ್​ ಪತ್ನಿ ನಟಿ ಟ್ವಿಂಕಲ್​ ಖನ್ನಾ! ಇದರ ಹಿಂದಿದೆ ಇಂಟರೆಸ್ಟಿಂಗ್​ ಕಾರಣ...

ಇದೀಗ ಪ್ರಚಾರದ ಭಾಗವಾಗಿ  ಅಕ್ಷಯ್ ಕುಮಾರ್  ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹೊಸ ಮೋಜಿನ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದರ ನಟ-ನಟಿಯರು ಸೇರಿದಂತೆ ಸಹಸ್ರಾರು ಮಂದಿಯಿಂದ ತಮಾಷೆಗಳ ಸುರಿಮಳೆಯೇ ಆಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಮೊದಲಿಗೆ ಅಕ್ಷಯ್​ ಕುಮಾರ್​ ಜಿಗಿಯುತ್ತಿರುವ ಸಮಯದಲ್ಲಿ, ಟೈಗರ್​ ಶ್ರಾಫ್​ ಅವರನ್ನು ಹಿಡಿದುಕೊಂಡಿದ್ದಾರೆ. ನಂತರ ಟೈಗರ್​ ಶ್ರಾಫ್​ ಪಾಳಿ. ನೀವು ಸರಿಯಾಗಿ ಹಿಡಿದುಕೊಳ್ಳುತ್ತೀರಿ ತಾನೆ ಎಂದು ಟೈಗರ್​, ಅಕ್ಷಯ್​ ಅವರನ್ನು ಕೇಳಿದ್ದಾರೆ. ಹೌದು. ಹಿಡಿಯುತ್ತೇನೆ, ಜಿಗಿ ಎಂದಿದ್ದಾರೆ. ಹೀಗೆ ರೆಡಿನಾ ರೆಡಿನಾ ಎಂದು ಅನೇಕ ಬಾರಿ ಟೈಗರ್​ ಕೇಳಿದ್ದಾರೆ. ಹೌದು, ಹೌದು ಎಂದರೂ ಪ್ರಶ್ನೆ ಕೇಳುತ್ತಲೇ ಇದ್ದ ಕಾರಣ, ಅಕ್ಷಯ್​ ಕುಮಾರ್​ ಅಲ್ಲಿಂದ ಹೋಗಿದ್ದಾರೆ. ಅವರು ಹೋಗುವ ಸಮಯಕ್ಕೇ ಸರಿಯಾಗಿ ಟೈಗರ್​ ಶ್ರಾಫ್​ ಮೇಲಕ್ಕೆ ಹಾರಿದ್ದಾರೆ!

ಇವಿಷ್ಟು ತಮಾಷೆಯ ವಿಡಿಯೋ ಶೇರ್​ ಮಾಡಲಾಗಿದೆ. ಬಾಲಿವುಡ್​ ನಟಿ ಕತ್ರಿನಾ ಕೈಫ್ ಕಮೆಂಟ್‌ಗಳ ವಿಭಾಗದಲ್ಲಿ "ಓಹ್" ಎಂದು ಕಮೆಂಟ್ ಮಾಡಿದ್ದರೆ, ನಟಿ ಆಯೇಶಾ ಶ್ರಾಫ್, "Awwwww" ಎಂದಿದ್ದಾರೆ,   ನಟರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಹುಮಾ ಖುರೇಷಿ LOL ಎಮೋಜಿ ಹಾಕಿದ್ದಾರೆ. ಅಕ್ಷಯ್​ ಕುಮಾರ್​ ಟೈಗರ್ ಶ್ರಾಫ್​ಗೆ ಹೀಗೆಲ್ಲಾ ಮಾಡೋದಾ ಎಂದು ಅನೇಕ ಮಂದಿ ತಮಾಷೆಯಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.  ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಜೊತೆಗೆ, ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಸೋನಾಕ್ಷಿ ಸಿನ್ಹಾ, ಮಾನುಷಿ ಛಿಲ್ಲರ್, ಅಲಯಾ ಎಫ್ ಸಹ ನಟಿಸಿದ್ದಾರೆ. ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸುತ್ತಿದ್ದಾರೆ ಮತ್ತು ಇದನ್ನು ಜಾಕಿ ಭಗ್ನಾನಿ, ವಶು ಭಗ್ನಾನಿ, ದೀಪಶಿಖಾ ದೇಶಮುಖ್, ಅಲಿ ಅಬ್ಬಾಸ್ ಬೆಂಬಲಿಸಿದ್ದಾರೆ. ಪೂಜಾ ಎಂಟರ್ಟೈನ್ಮೆಂಟ್ ಮತ್ತು AAZ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜಾಫರ್ ಮತ್ತು ಹಿಮಾಂಶು ಕಿಶನ್ ಮೆಹ್ರಾ.

ಅಮಿತಾಭ್ ಆಸ್ಪತ್ರೆಗೆ ದಾಖಲಾಗ್ಲೇ ಇಲ್ವಾ? ಅಭಿ-ಐಷ್​ ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಇದೇನಿದು ಹೊಸ ವಿಷ್ಯ?

Follow Us:
Download App:
  • android
  • ios