ಅಮಿತಾಭ್ ಆಸ್ಪತ್ರೆಗೆ ದಾಖಲಾಗ್ಲೇ ಇಲ್ವಾ? ಅಭಿ-ಐಷ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಇದೇನಿದು ಹೊಸ ವಿಷ್ಯ?
ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗುತ್ತಲೇ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿರುವ ಅವರು ಎಲ್ಲವೂ ಫೇಕ್ ಎಂದಿದ್ದಾರೆ. ನಿಜಕ್ಕೂ ನಡೀತಿರೋದೇನು?
ಬಿಗ್-ಬಿ ಅಮಿತಾಭ್ ಬಚ್ಚನ್ ಕುಟುಂಬ ದಿನದಿಂದ ದಿನಕ್ಕೆ ಕುತೂಹಲದ ತಾಣವಾಗುತ್ತಲೇ ಸಾಗಿದೆ. ಇತ್ತೀಚೆಗಷ್ಟೇ ಮಗ ಅಭಿಷೇಕ್ ಮತ್ತು ಐಶ್ವರ್ಯ ರೈ ನಡುವಿನ ಡಿವೋರ್ಸ್ ಸುದ್ದಿ ದಿನದಿಂದ ದಿನಕ್ಕೆ ರೆಕ್ಕೆಪುಕ್ಕದೊಂದಿಗೆ ಹರಡುತ್ತಲೇ ಇತ್ತು. ಡಿವೋರ್ಸ್ ಆದವರಂತೆ ಖುದ್ದು ಈ ಜೋಡಿ ಪೋಸ್ಟ್ ಹಾಕುವುದು, ನಂತರ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಲೇ ಒಟ್ಟಿಗೇ ಕಾಣಿಸಿಕೊಳ್ಳುವುದು, ಸ್ವಲ್ಪ ದಿನದ ಅಂತರದಲ್ಲಿ ಮತ್ತೊಂದು ಭಾವನಾತ್ಮಕ ಪೋಸ್ಟ್ ಹಾಕಿ ಮತ್ತೆ ಪ್ರಚಾರಕ್ಕೆ ಬರುವುದು, ಈ ಬಗ್ಗೆ ಖುದ್ದು ಅಮಿತಾಭ್ ಬಚ್ಚನ್ ಕೂಡ ಅಡ್ಡ ಗೋಡೆಯ ಮೇಲೆ ದೀಪ ಇಟ್ಟವರಂತೆ ಉತ್ತರಿಸುವುದು... ಇವೆಲ್ಲವೂ ನಡೆಯುತ್ತಲೇ ಇದೆ. ಇಷ್ಟೆಲ್ಲಾ ವರದಿಯಾಗುತ್ತಿದ್ದರೂ ಖುದ್ದು ಅಮಿತಾಭ್ ಆಗಲೀ, ಐಶ್ವರ್ಯ, ಅಭಿಷೇಕ್ ಆಗಲಿ ಈ ವಿಷಯ ಹೌದೋ, ಅಲ್ಲವೋ ಎಂದು ನೇರವಾಗಿ ಸ್ಪಷ್ಟನೆ ಕೊಡದೇ ಪ್ರಚಾರ ಆದಷ್ಟು ಆಗಲಿ ಎಂಬಂತೆ ದಿನಕ್ಕೊಂದು ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಡಿವೋರ್ಸ್ ವಿಷಯ ತಣ್ಣಗಾಗುತ್ತಿರುವಂತೆ ನಿನ್ನೆಯಷ್ಟೇ ಬಿಗ್-ಬಿ ಅಮಿತಾಭ್ ಬಚ್ಚನ್ ಫ್ಯಾನ್ಸ್ಗೆ ಬಿಗ್ ಶಾಕ್ ಎದುರಾಗಿತ್ತು. ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿನಲ್ಲಿ ಹೆಪ್ಪುಗಟ್ಟುವಿಕೆಗಾಗಿ ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಅಮಿತಾಭ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿತ್ತು. ಅಮಿತಾಭ್ ಬಚ್ಚನ್ ಅವರು ಸಾಮಾನ್ಯ ತಪಾಸಣೆಗಾಗಿ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಕೆಲ ವರದಿಗಳು ಆಗಿದ್ದರೆ, ಇನ್ನೂ ಕೆಲವು ಆಂಜಿಯೋಪ್ಲಾಸ್ಟಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವರದಿಗಳು ಪ್ರಸಾರವಾಗುವ ಮೂಲಕ ಈ ವದಂತಿ ಹಬ್ಬಲು ಪ್ರಾರಂಭವಾಗಿತ್ತು. ಬಿಗಿ ಭದ್ರತೆಯ ನಡುವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಸ್ವಲ್ಪ ಮುಂಚೆ ‘ಯಾವಾಗಲೂ ಕೃತಜ್ಞರಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.
ಅಮಿತಾಭ್-ಅಭಿಷೇಕ್ ಒಟ್ಟಿಗೇ ಇಲ್ವಾ? ಇನ್ಸ್ಟಾದಲ್ಲಿನ ಚಾಟ್ ನೋಡಿ ಇದೆಲ್ಲಾ ಯಾಕೆ ಬೇಕು ಕೇಳ್ತಿದ್ದಾರೆ ಫ್ಯಾನ್ಸ್!
ಈ ಸುದ್ದಿ ಕಾಳ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ ವರದಿಯಾಗುತ್ತಿದ್ದರೂ ಕುಟುಂಬಸ್ಥರು ಯಾವೊಂದು ಸ್ಪಷ್ಟನೆ ಕೊಟ್ಟಿರಲಿಲ್ಲ. ಆದರೆ ಇದೀಗ ಕುತೂಹಲ ಎಂಬಂತೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯ ಕೆಲವೇ ಗಂಟೆಗಳ ಬಳಿಕ ಮಗ ಅಭಿಷೇಕ್ ಜೊತೆಗೆ ಥಾಣೆಯ ದಾಡೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದದಾರೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನ ಮಝಿ ಮುಂಬೈ ಮತ್ತು ಕೋಲ್ಕತಾದ ಟೈಗರ್ಸ್ ನಡುವಿನ ಅಂತಿಮ ಪಂದ್ಯದ ವೇಳೆ ಇವರು ಫುಲ್ ಜೋಷ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ತೆಂಡೂಲ್ಕರ್ ಅವರನ್ನೂ ಭೇಟಿಯಾಗಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ವರದಿಯ ಕುರಿತು ಅಲ್ಲಿಯೇ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದಾಗ, ನಗುತ್ತಲೇ ಅಮಿತಾಭ್ ಬಚ್ಚನ್ ಫೇಕ್ ನ್ಯೂಸ್ ಎಂದಿದ್ದಾರೆ! ಎಲ್ಲರ ಬಳಿಯೂ ಕೈಮಾಡಿ, ಚೆನ್ನಾಗಿದ್ದೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ತಮ್ಮ ಮತ್ತು ಕುಟುಂಬದ ಬಗ್ಗೆ ಎಚ್ಚರ ವಹಿಸಿ ಎಂದು ಎಲ್ಲರಿಗೂ ಪರೋಕ್ಷವಾಗಿ ಬಿಗ್-ಬಿ ಹೇಳಿದಂತಿದೆ. ಅಷ್ಟಕ್ಕೂ ಇವರ ಆಸ್ಪತ್ರೆಗೆ ದಾಖಲಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಕ್ಕೆ ಬಂದಿರಲಿಲ್ಲ. ಆದರೆ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು ಹೇಗೆ ಎನ್ನುವುದು ಮಾತ್ರ ತಿಳಿದಿಲ್ಲ. ಅದೇ ರೀತಿ, ಬಿಗ್ ಬಿ ಕುಟುಂಬದಲ್ಲಿ ಈಚಿನ ದಿನಗಳಲ್ಲಿ ಎಲ್ಲವೂ ನಿಗೂಢದಂತೆ ಕಾಣುತ್ತಿವೆ!
ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧರಿಸಿದ್ದ ಆಮೀರ್ ಖಾನ್ ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?