ಸೈಫ್ ಅಲಿ ಖಾನ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಬಾಲಿವುಡ್‌ನಲ್ಲಿ ಹಿಂದೆ ನಡೆದ ದಾಳಿಗಳ ಸರಣಿಯನ್ನು ಪರಿಶೀಲಿಸಲಾಗಿದೆ. ಸಲ್ಮಾನ್ ಖಾನ್, ಸಂಜಯ್ ಲೀಲಾ ಭನ್ಸಾಲಿ ಸೇರಿದಂತೆ ಹಲವು ನಟ-ನಿರ್ದೇಶಕರ ಮೇಲೆ ದಾಳಿಗಳು ನಡೆದಿವೆ.
ಮುಂಬೈ: ಸೈಫ್ ಅಲಿ ಖಾನ್ ಅವರ ಮೇಲಿನ ದಾಳಿಗೂ ಮುನ್ನ ಹಲವು ಬಾಲಿವುಡ್ ಖ್ಯಾತನಾಮರು ಇದೇ ರೀತಿಯ ದಾಳಿಗಳನ್ನು ಅನುಭವಿಸಿದ್ದಾರೆ. ಕಳೆದ ವರ್ಷ ನಟ ಸಲ್ಮಾನ್ ಖಾನ್ ಆಪ್ತರಾಗಿದ್ದ ಎನ್‌ಸಿಪಿ ಶಾಸಕ ಬಾಬಾ ಸಿದ್ದಿಕ್ಕಿ ಅವರ ಮೇಲೆ ಪಾತಕಿ ಲಾರೆನ್ಸ್ ಬಿಷ್ಣೋಯಿ ಕಡೆಯವರು ಗುಂಡಿನ ದಾಳಿಯಲ್ಲಿ ಕೊಲೆ ಮಾಡಿದ್ದರು. ಮತ್ತೊಂದೆಡೆ ನಟ ಸಲ್ಮಾನ್ ಖಾನ್ ಅವರಿಗೆ ಹಲವು ಬೆದರಿಕೆ ಕೆರಗಳು ಬಂದಿದ್ದು, 2024ರ ಏಪ್ರಿಲ್‌ನಲ್ಲಿ ಇಬ್ಬರು ಬಂಧೂಕುಧಾರಿಗಳು ಮನೆ ಎದುರು ಗುಂಡಿನ ದಾಳಿ ನಡೆಸಿದ್ದರು. ಇದೇ ರೀತಿ 2018ರಲ್ಲಿ ಜೈಪುರದಲ್ಲಿ ಪದ್ಮಾವತ್ ಚಿತ್ರ ಶೂಟಿಂಗ್ ವೇಳೆ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ಅನಾಮಿಕರು ದಾಳಿ ನಡೆಸಿದ್ದರು.
2014ರಲ್ಲಿ ಕಾಶ್ಮೀರದಲ್ಲಿ ನಟ ಶಾಹೀದ್ ಕಪೂರ್, 2014ರಲ್ಲಿ ನಿರ್ದೇಶಕಿ ಗೌಹರ್ ಖಾನ್, 2000ದಲ್ಲಿ ಖ್ಯಾತ ನಿರ್ದೇಶಕ ರಾಕೇಶ್ ರೋಷನ್ ಮತ್ತು 1997ರಲ್ಲಿ ಗುಲ್ಶನ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿತ್ತು. 1993 ಬಾಂಬೆ ಗಲಭೆ ವೇಳೆ ನಟ ಸಂಜಯ್ ದತ್ ಮೇಲೆ ಹಲ್ಲೆಯಾಗಿತ್ತು.
1) 2025 ಸೈಫ್ ಅಲಿ ಖಾನ್ ಮುಂಬೈ
2) 2024 ಬಾಬಾ ಸಿದ್ದಿಕ್ಕಿ (ಕೊಲೆ) ಮುಂಬೈ
3) 2024 ಸಲ್ಮಾನ್ ಖಾನ್ ಮುಂಬೈ
4) 2018 ಸಂಜಯ್ ಲೀಲಾ ಭನ್ಸಾಲಿ ಜೈಪುರ
5) 2014 ಶಾಹೀದ್ ಕಪೂರ್ ಜಮ್ಮು ಕಾಶ್ಮೀರ
6) 2014 ಗೌಹರ್ ಖಾನ್ ಮುಂಬೈ
7) 2000 ರಾಕೇಶ್ ರೋಷನ್ ಮುಂಬೈ
8) 1997 ಗುಲ್ಶನ್ ಕುಮಾರ್ (ಕೊಲೆ) ಮುಂಬೈ
9) 1993 ಸಂಜಯ್ ದತ್ ಮುಂಬೈ
ಇದನ್ನೂ ಓದಿ: ಸೈಫ್ಗೆ ಇರಿತ- ಪಾರ್ಟಿ ಮೂಡ್ನಲ್ಲಿ ಪತ್ನಿ ಕರೀನಾ! ಒಂದು ಗಂಟೆ- ಒಂದು ಕೋಟಿ ರೂ. ಬೇಡಿಕೆ? ನಡೆದಿದ್ದೇನು?
