Asianet Suvarna News Asianet Suvarna News

ಕೊನೆಗೂ ರಿವೀಲ್ ಆಯ್ತು ಆತಿಯಾ ಶೆಟ್ಟಿ-ಕೆಎಲ್ ರಾಹುಲ್ ಮದುವೆ ಡೇಟ್; ಇಲ್ಲಿದೆ ಸಂಪೂರ್ಣ ವಿವರ

ಕೆ ಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ ಮದುವೆ ದಿನಾಂಕ ಕೊನೆಗೂ ಬಹಿರಂಗವಾಗಿದೆ. 

athiya shetty and kl rahul celebrate their wedding events from 21st to 23rd January 2023 sgk
Author
First Published Dec 13, 2022, 6:52 PM IST

ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಮದುವೆ ವಿಚಾರ ಕಳೆದ ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೀಗ ಇಬ್ಬರ ಮದುವೆ ಮುಂದಿನ ವರ್ಷಕ್ಕೆ ಶಿಫ್ಟ್ ಆಗಿದೆ. ಅಂದಹಾಗೆ ಮುಂದಿನ ವರ್ಷನಾ ಅಂತ ಅಚ್ಚರಿ ಪಡಬೇಡಿ. 2023 ಜನವರಿಯಲ್ಲಿ ಇಬ್ಬರೂ ಹಸೆಮಣೆ ಏರುತ್ತಿರುವುದು ಕನ್ಫರ್ಮ್ ಎನ್ನುತ್ತಿವೆ ಮೂಲಗಳು. ಹೌದು ಸುನಿಲ್ ಶೆಟ್ಟಿ ಮತ್ತು ರಾಹುಲ್ ಕುಟುಂಬ ಸದ್ಯ ಮದುವೆ ದಿನಾಂಕ ಅಂತಿಮ ಗೊಳಿಸಿದೆ. ಈ ಬಗ್ಗೆ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಪಿಂಕ್‌ವಿಲ್ಲಾ ವರದಿ ಪ್ರಕಾರ ರಾಹುಲ್ ಮತ್ತು ಆತಿಯಾ ಶೆಟ್ಟಿ ಜನವರಿ 23ಕ್ಕೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ. 

ಜನವರಿ 21ರಿಂದ ಇಬ್ಬರ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ.  ರಾಹುಲ್ ಮತ್ತು ಆತಿಯಾ ಜೋಡಿ ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಆಹ್ವಾನ ನೀಡಲು ಪ್ರಾರಂಭಿಸಲಿದ್ದು ಮದುವೆ ಡೇಟ್ ಬಹಿರಂಗ ಪಡಿಸದಂತೆ ಕೇಳಿಕೊಂಡಿದ್ದಾರಂತೆ. ಮದುವೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ ಎಂದು ವರದಿ ಆಗಿದೆ. 

ಐಷಾರಾಮಿ ಹೋಟೆಲ್‌ಗೆ ಗುಡ್‌ಬೈ, ಸುನಿಲ್ ಶೆಟ್ಟಿ ಬಂಗಲೆಯಲ್ಲೇ ಮದುವೆಗೆ ಸಜ್ಜಾದ ರಾಹುಲ್ - ಅತಿಯಾ ಶೆಟ್ಟಿ

21ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ, ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದ್ದಂತೆ ಎಲ್ಲಾ ಶಾಸ್ತ್ರಗಳನ್ನು ಸಾಂಪ್ರದಾಯಬದ್ದವಾಗಿ ಮಾಡಲು ಎರಡು ಕುಟುಂಬಗಳ ನಿರ್ಧರಿಸಿದೆಯಂತೆ. ರಾಹುಲ್ ಮತ್ತು ಆತಿಯಾ ಶೆಟ್ಟಿ ಮದುವೆ ಪಕ್ಕ ದಕ್ಷಣ ಭಾರತದ ಶೈಲಿಯಲ್ಲಿ ನಡೆಸಲು ಎರಡು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಶೇಷ ಎಂದರೆ ಇಬ್ಬರ ಮದುವೆ ಯಾವುದೇ ಖಾಸಗಿ ಹೋಟೆಲ್ ಅಥವಾ ವಿದೇಶದಲ್ಲಿ ನಡೆಯುತ್ತಿಲ್ಲ. ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್ ನಲ್ಲೇ ನಡೆಯಲಿದೆ.  

T20 World cup ರಾಹುಲ್ ಕಳಪೆ ಪ್ರದರ್ಶನಕ್ಕೆ ಅಥಿಯಾ ಶೆಟ್ಟಿ ಟ್ರೋಲ್!

ಸದ್ಯ ಇಬ್ಬರ ಮದುವೆ ದಿನಾಂಕ ವೈರಲ್ ಆಗಿದೆ. ಮದುವೆ ಬಗ್ಗೆ ರಾಹುಲ್ ಅಥವಾ ಆತಿಯಾ ಕಡೆಯಿಂದ ಯುವುದೇ ಅಧಿಕೃತ ಹೇಳಿಕೆ ರಿಲೀಸ್ ಆಗಿಲ್ಲ. ಇತ್ತೀಚಿಗಷ್ಟೆ ಸುನಿಲ್ ಶೆಟ್ಟಿ ಆತಿಯಾ ಮತ್ತು ರಾಹುಲ್ ಮದುವೆ ಬಗ್ಗೆ ಬಹಿರಂಗ ಪಡಿಸಿದ್ದರು. ಆದರೆ ದಿನಾಂಕದ ಬಗ್ಗೆ ರಿವೀಲ್ ಮಾಡಿರಲಿಲ್ಲ. ಹಾಗಾಗಿ ಸದ್ಯ ಬಹಿರಂಗ ಆಗಿರುವ ಡೇಟ್ ನಿಜನಾ ಎಂದು ಕಾದುನೋಡಬೇಕಿದೆ. 

Follow Us:
Download App:
  • android
  • ios