ಐಷಾರಾಮಿ ಹೋಟೆಲ್‌ಗೆ ಗುಡ್‌ಬೈ, ಸುನಿಲ್ ಶೆಟ್ಟಿ ಬಂಗಲೆಯಲ್ಲೇ ಮದುವೆಗೆ ಸಜ್ಜಾದ ರಾಹುಲ್ - ಅತಿಯಾ ಶೆಟ್ಟಿ

ರಾಹುಲ್ ಮತ್ತು ಅತಿಯಾ ಇಬ್ಬರು ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್ ನಲ್ಲಿ ನಡೆಯಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಇಬ್ಬರೂ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಯಾಗುವ ಯೋಜನೆಯನ್ನು ಕೈಬಿಟ್ಟು ಸುನಿಲ್ ಶೆಟ್ಟಿ ನಿವಾಸದಲ್ಲೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. 

Athiya Shetty and KL Rahul to tie the knot at Suniel Shettys Khandala bungalow sgk

ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಮದುವೆ ವಿಚಾರ ಕಳೆದ ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ತಿಂಗಳ ಹಿಂದಿಯೆ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಇಬ್ಬರ ಮದುವೆ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಈ ಸ್ಟಾರ್ ಜೋಡಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗಷ್ಟೆ ಅತಿಯಾ ಶೆಟ್ಟಿ ವ್ಯಂಗ್ಯವಾದ ಪೋಸ್ಟ್ ಒಂದನ್ನು ಶೇರ್ ಮಾಡಿ ಮದುವೆ ವಿಚಾರವಾಗಿ ಪರೋಕ್ಷ ಪ್ರತಿಕ್ರಿಯೆ ನೀಡಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದ ಅತಿಯಾ, 'ಮೂರು ತಿಂಗಳಲ್ಲಿ ಆ ಸ್ಥಳದಲ್ಲಿ ನಡೆಯುವ ಮದುವೆಗೆ ನನ್ನನ್ನು ಆಹ್ವಾನಿಸಲಾಗಿದೆ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದರು. ಅಂದಹಾಗೆ ಅತಿಯಾ ಮದುವೆ ವಿಚಾರವನ್ನು ಪರೋಕ್ಷವಾಗಿ ಖಚಿತ ಪಡಿಸಿದ್ರಾ ಅಥವಾ ವ್ಯಂಗ್ಯವಾಡಿದ್ರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿಸಿತ್ತು.

ಇದೆಲ್ಲ ಹಳೆಯ ವಿಚಾರ ಲೆಟೆಸ್ಟ್ ಅಪ್ ಡೇಟ್ ಎಂದರೆ ಇಬ್ಬರ ಮದುವೆಯ ಸ್ಥಳ ಬಹಿರಂಗವಾಗಿದೆ. ಹೌದು ರಾಹುಲ್ ಮತ್ತು ಅತಿಯಾ ಇಬ್ಬರು ಸುನಿಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್ ನಲ್ಲಿ ನಡೆಯಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಆಂಗ್ಲ ವೆಬ್ ಸೈಟ್ ಪಿಂಕ್ಲಿಲ್ಲಾ ವರದಿ ಪ್ರಕಾರ ಇಬ್ಬರೂ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಯಾಗುವ ಯೋಜನೆಯನ್ನು ಕೈಬಿಟ್ಟು ಸುನಿಲ್ ಶೆಟ್ಟಿ ನಿವಾಸದಲ್ಲೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ತೀರ ಹತ್ತಿದವರು ಮತ್ತು ಕುಟುಂಬದ ಸಮ್ಮುಖದಲ್ಲಿ ರಾಹುಲ್ ಮತ್ತು ಅತಿಯಾ ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. 

ಕೆಎಲ್ ರಾಹುಲ್ ಜೊತೆ ಮಗಳ ಮದುವೆ ಬಗ್ಗೆ ದೊಡ್ಡ ವಿಷಯ ಬಹಿರಂಗಪಡಿಸಿದ ಸುನೀಲ್ ಶೆಟ್ಟಿ

ಡಿಸೆಂಬರ್ ತಿಂಗಳಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ. ಅಂದಹಾಗೆ ರಾಹುಲ್ ಅವರ ಕ್ರಿಕೆಟ್ ವೇಳಪಟ್ಟಿ ಆಧರಿಸಿ ಮದುವೆ ದಿನಾಂಕ ಫಿಕ್ಸ್ ಆಗಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕುಟುಂಬದ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇತ್ತೀಚೆಗೆ, ಸಂವಾದದ ಸಂದರ್ಭದಲ್ಲಿ, ನಟ ಸುನೀಲ್ ಶೆಟ್ಟಿ 'ಮಕ್ಕಳು ನಿರ್ಧರಿಸಿದ ತಕ್ಷಣ, ಪ್ರಸ್ತುತ ರಾಹುಲ್‌ಗೆ ವಿವಿಧ ಪಂದ್ಯಗಳಿವೆ. ಅವರು ಏಷ್ಯಾ ಕಪ್, ವಿಶ್ವಕಪ್, ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ಆಸ್ಟ್ರೇಲಿಯಾ ಪ್ರವಾಸವನ್ನು ಹೊಂದಿದ್ದಾರೆ. ಕೆಲಸದ ಬದ್ಧತೆಗಳಿಂದ ವಿರಾಮ ಪಡೆದಾಗ, ಅವರು ಮದುವೆಯಾಗುತ್ತಾರೆ. ಅವರು ಒಂದೇ ದಿನದಲ್ಲಿ ಮದುವೆಯಾಗಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಈ ಮೂಲಕ ಮೊದಲ ಬಾರಿಗೆ ರಾಹುಲ್ ಜೊತೆ ಮಗಳ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಮೌನ ಮುರಿದ್ದರು. 

ಕೊನೆಗೂ ಮೌನ ಮುರಿದ ನಟಿ ಅತಿಯಾ ಶೆಟ್ಟಿ; ರಾಹುಲ್ ಜೊತೆಗಿನ ಮದುವೆ ಬಗ್ಗೆ ಹೇಳಿದ್ದೇನು?

ಅಂದಹಾಗೆ ಈ ಸ್ಟಾರ್ ಜೋಡಿ ಈಗಾಗಲೇ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಮದುವೆಗೂ ಮೊದಲು ಇಬ್ಬರು ಮುಂಬೈನ ಬಾಂದ್ರಾದಲ್ಲಿ ಹೊಸ ಮನೆ ಖರೀದಿ ಮಾಡಿದ್ದು ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 4BHK ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮನೆಗೆ ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರಂತೆ. ಅಂದಹಾಗೆ ಅತಿಯಾ ಶೆಟ್ಟಿ ಆಗಾಗ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಹುಲ್ ಕೂಡ ಸುನಿಲ್ ಶೆಟ್ಟಿ ಅವರ ಸಿನಿಮಾ ಕಾರ್ಯಕ್ರಮಗಳಲ್ಲಿ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗಷ್ಟೆ ರಾಹಲ್ ಸರ್ಜರಿಗೆಂದು ವಿದೇಶಕ್ಕೆ ಹಾರಿದ ಸಮಯದಲ್ಲೂ ಅತಿಯಾ ಕೂಡ ಜೊತೆಯಲ್ಲಿ ಪಯಣ ಬೆಳೆಸಿದ್ದರು. ಸದ್ಯ ರಾಹುಲ್ ಏಷ್ಯ ಕಪ್‌ನಲ್ಲಿ ಬ್ಯುಸಿಯಾಗಿದ್ದಾರೆ.  

Latest Videos
Follow Us:
Download App:
  • android
  • ios