T20 World cup ರಾಹುಲ್ ಕಳಪೆ ಪ್ರದರ್ಶನಕ್ಕೆ ಅಥಿಯಾ ಶೆಟ್ಟಿ ಟ್ರೋಲ್!
ಟಿ20 ವಿಶ್ವಕಪ್ ಟೂರ್ನಿಯಿಂದ ಟೀಂ ಇಂಡಿಯಾ ಹೊರಬಿದ್ದಿದೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಕೆಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪ್ರತಿ ಪಂದ್ಯದಲ್ಲಿ ಆರಂಭಿಕರಿಂದ ಉತ್ತಮ ಹೋರಾಟ ಮೂಡಿಬಂದಿಲ್ಲ. ರಾಹುಲ್ ಕಳಪೆ ಪ್ರದರ್ಶನಕ್ಕೆ ಇದೀಗ ರಾಹುಲ್ ಗೆಳತಿ ಅಥಿಯಾ ಶೆಟ್ಟಿ ಕೂಡ ಟ್ರೋಲ್ ಆಗಿದ್ದಾರೆ.
ಆಡಿಲೇಡ್(ನ.10): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ ಅಂತ್ಯಗೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿನ ವೈಫಲ್ಯ ಭಾರತ ಸೋಲಿಗೆ ಕಾರಣವಾಗಿದೆ. ಅದರಲ್ಲೂ ಈ ಟೂರ್ನಿಯಲ್ಲಿ ಕೆಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆರಂಭಿಕನಾಗಿ ಭಾರತಕ್ಕೆ ಉತ್ತಮ ಆರಂಭವೇ ಸಿಕ್ಕಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ಕೆಎಲ್ ರಾಹುಲ್ ಕಳಪೆ ಬ್ಯಾಟಿಂಗ್ ಕೂಡ ಒಂದು ಕಾರಣ ಎಂದು ಟ್ರೋಲ್ ಮಾಡಲಾಗುತ್ತಿದೆ. ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರಾಹುಲ್ ಗೆಳತಿ ಅಥಿಯಾ ಶೆಟ್ಟಿಯನ್ನು ಟ್ರೋಲ್ ಮಾಡಿದ್ದಾರೆ. ಅಥಿಯಾ ಜೊತೆ ಹೆಚ್ಚಾಗಿ ಕಾಣಸಿಕೊಂಡ ಬಳಿಕ ರಾಹುಲ್ ಪ್ರದರ್ಶನ ಕಳಪೆಯಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಕಳಪೆ ಪ್ರದರ್ಶನಕ್ಕೆ ಹಲವರು ಅನವಶ್ಯಕವಾಗಿ ಅಥಿಯಾ ಶೆಟ್ಟಿಯನ್ನು ಎಳೆದು ತಂದಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಹೀಗಾಗಿ ಅಥಿಯಾ ಶೆಟ್ಟಿ ಜೊತೆ ರಾಹುಲ್ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ಬಳಸಿಕೊಂಡ ಟ್ರೋಲಿಗರು ರಾಹುಲ್ ಜೊತೆಗೆ ಅಥಿಯಾ ಶೆಟ್ಟಿಯನ್ನು ಟ್ರೋಲ್ ಮಾಡಿದ್ದಾರೆ.
T20 WORLD CUP ಭಾರತ ಮನೆಗೆ, ಇಂಗ್ಲೆಂಡ್ ಫೈನಲ್‌ಗೆ..! ಸೆಮೀಸ್‌ನಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು
ಇಂಗ್ಲೆಂಡ್ ವಿರುದ್ದದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ 5 ಎಸೆತದಲ್ಲಿ 5 ರನ್ ಸಿಡಿಸಿ ಔಟಾದರು. ಆದರೆ ಹಾರ್ದಿಕ್ ಪಾಂಡ್ಯ ಅಬ್ಬರದಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿತ್ತು. ಈ ಟಾರ್ಗೆಟ್ ಇಂಗ್ಲೆಂಡ್ ಯಾವುದೇ ಆತಂಕ ಎದರಿಸದೇ ಚೇಸ್ ಮಾಡಿದೆ. ವಿಕೆಟ್ ನಷ್ಟವಿಲ್ಲದೆ 16 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದರೆ, ಭಾರತ ಟೂರ್ನಿಯಿಂದ ಹೊರಬಿದ್ದಿತು.
ಟೀಂ ಇಂಡಿಯಾ ಪ್ರತಿ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿ, ಸೆಮಿಫೈನಲ್ ಪ್ರವೇಶಿಸಿತ್ತು. ಇತ್ತ ಬ್ಯಾಟಿಂಗ್ ಪ್ರಮುಖವಾಗಿ ನೆಚ್ಚಿಕೊಂಡಿರುವ ಟೀಂ ಇಂಡಿಯಾ ಈ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಒಂದು ಪಂದ್ಯದಲ್ಲಿ ಆಡಿ ಮತ್ತೊಂದು ಪಂದ್ಯದಲ್ಲಿ ಮುಗ್ಗಿಸಿದ್ದಾರೆ. ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ ಸೇರಿದಂತೆ ಬಹುತೇಕರ ಅಂಕಿ ಅಂಶ ಭಿನ್ನವಾಗಿಲ್ಲ.
"ಅವರು ಬೇರೆ ಪ್ಲಾನೆಟ್‌ನಲ್ಲಿದ್ದಾರೋ ಅಥವಾ ನಮಗೇ ಆಡಲು ಬರಲ್ವೋ
ಪಾಕಿಸ್ತಾನ ವಿರುದ್ದದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಬಳಿಕ ಎಲ್ಲಾ ಪಂದ್ಯದಲ್ಲಿ ಕೊಹ್ಲಿ ಏಕದಿನ ಶೈಲಿಯಲ್ಲಿ ಆಟವಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಮಾತ್ರ ಅಬ್ಬರಿಸಿದ್ದಾರೆ. ಹೀಗಾಗಿ ಭಾರತ ಬೃಹತ್ ಮೊತ್ತ ಪೇರಿಸಿಲ್ಲ. ಇನ್ನೂ ಬೌಲಿಂಗ್ ವೇಳೆ ಎದುರಾಳಿಗಳು ಮಾಡಿದ ತಪ್ಪುಗಳಿಂದ ಭಾರತ ಗೆಲುವು ಸಾಧಿಸಿತ್ತೇ ಹೊರತು ಭಾರತದ ಪರಾಕ್ರಮದಿಂದ ಗೆಲುವು ಸಿಕ್ಕಿಲ್ಲ.