Asianet Suvarna News Asianet Suvarna News

ಸಲ್ಮಾನ್ ಖಾನ್ ಮದುವೆಯಾಗಿಲ್ಲ ಯಾಕೆ, ಜ್ಯೋತಿಷ್ಯ ಮಾತಿಗೆ ಮೀಮ್ಸ್ ಹರಿಬಿಟ್ಟ ಜನ!

ಬಾಲಿವುಡ್ ನಟ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ ಯಾಕೆ? ಯಾವಾಗ ಮದುವೆಯಾಗುತ್ತಾರೆ? ಈ ಕುತೂಹಲಕ್ಕೆ ಹಲವು ಜ್ಯೋತಿಷಿಗಳು ಇದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇದೀಗ ಮತ್ತೊಬ್ಬ ಜ್ಯೋತಿಷಿ ಸಲ್ಮಾನ್ ಖಾನ್ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಯಾಕೆ ಅನ್ನೋದು ವಿವರಿಸಿದ್ದಾರೆ. ಆದರೆ ಈ ಉತ್ತರಿಂದ ಇದೀಗ ಮೀಮ್ಸ್ ಹರಿದಾಡುತ್ತಿದೆ.
 

Astrologer reveals why Bollywood salman khan not married till now netizens react with memes ckm
Author
First Published Sep 10, 2024, 4:29 PM IST | Last Updated Sep 10, 2024, 4:36 PM IST

ಮುಂಬೈ(ಸೆ.10) ಬಾಲಿವುಡ್ ನಟ ಸಲ್ಮಾನ್ ಖಾನ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ತಿರುಗಾಡುತ್ತಿದ್ದಾರೆ. 58 ವರ್ಷವಾದರೂ ಸಲ್ಮಾನ್ ಇನ್ನೂ ಮದುವೆಯಾಗಿಲ್ಲ ಯಾಕೆ ಅನ್ನೋ ಪ್ರಶ್ನೆಗಳು ಹಲವು ವೇದಿಕೆಗಳಲ್ಲಿ, ಹಲವು ಬಾರಿ ಸಲ್ಮಾನ್ ಕಿವಿಗೂ ಬಿದ್ದಿದೆ. ಈ ಪ್ರಶ್ನೆಯಿಂದ ಸಲ್ಮಾನ್ ಖಾನ್ ಪ್ರತಿ ಬಾರಿ ಜಾರಿಕೊಂಡಿದ್ದಾರೆ. ಇದೀಗ ನಿಜಕ್ಕೂ ಸಲ್ಮಾನ್ ಖಾನ್ ಕಂಕಣ ಭಾಗ್ಯಕ್ಕಿರುವ ಸಮಸ್ಯೆ ಏನು ಅನ್ನೋದನ್ನು ಖ್ಯಾಕ ಜ್ಯೋತಿಷಿ ಸಂದೀಪ್ ಕೋಚಾರ್ ವಿವರಿಸಿದ್ದಾರೆ. ಆದರೆ ಸಂದೀಪ್ ಕೋಚಾರ್ ನೀಡಿದ ಉತ್ತರ ಇದೀಗ ಮೀಮ್ಸ್ ಆಗಿ ಹರಿದಾಡುತ್ತಿದೆ.

ಸಂದೀಪ್ ಕೋಚಾರ್ ಕೆಲ ವಿಚಾರಗಳನ್ನು ಹೇಳಿದ್ದಾರೆ. ಈ ಪೈಕಿ ಸಲ್ಮಾನ್ ಖಾನ್ ಮದುವೆಗೆ ಹಲವು ಬಾರಿ ಕಂಕಣ ಕೂಡಿ ಬಂದು ಕೈತಪ್ಪಿದೆ ಎಂದಿದ್ದಾರೆ. ಇದು ಹೇಳಲು ಜ್ಯೋತಿಷ್ಯ ನೋಡಬೇಕಿಲ್ಲ. ಸಲ್ಮಾನ್ ಖಾನ್ ಯಾರು ಎಂದು ನೋಡಿದರೆ ಗೊತ್ತಿಲ್ಲದವರಿಗೂ ತಿಳಿಯುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಮಾತು ಮುಂದುವರಿಸಿದ ಸಂದೀಪ್ ಕೋಚಾರ್ ಮತ್ತೊಂದು ವಿಚಾರ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮದುವೆಗೆ ಅವರ ಮನಸ್ಸೇ ಅಡ್ಜಿಯಾಗುತ್ತಿದೆ ಎಂದಿದ್ದಾರೆ.

ಸೈಫ್, ಕರೀನಾ ಟು ಸಲ್ಮಾನ್ ಖಾನ್‌: ಅಂಬಾನಿ ಮನೆ ಗಣೇಶ ಹಬ್ಬದಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು

ಸಲ್ಮಾನ್ ಖಾನ್ ಮನಸ್ಸು ತಕ್ಷಣ ಸ್ವಿಂಗ್ ಆಗುತ್ತದೆ. ಇಂದು ಇದ್ದ ರೀತಿ ನಾಳೆ ಇರುವುದಿಲ್ಲ. ಇವತ್ತು ಬಯಸಿದ್ದು ನಾಳೆಗೆ ಬೇಡವಾಗುತ್ತದೆ. ಅವರ ಮೂಡ್ ಸ್ವಿಂಗ್ ಆಗುತ್ತದೆ. ಇದನ್ನು ನಿರ್ವಹಿಸುವುದು ಇತರರಿಗೆ ಕಷ್ಟ. ಹೀಗಾಗಿ ಸಲ್ಮಾನ್ ಖಾನ್‌ಗೆ ಕೂಡಿ ಬಂದ ಕಂಕಣ ಕೊನೆಯ ಕ್ಷಣದಲ್ಲಿ ತಪ್ಪಿಹೋಗಿದೆ. ಸಲ್ಮಾನ್ ಖಾನ್ ಮೂಡ್ ಸ್ವಿಂಗ್ ವಿಚಾರದಿಂದ ಹಲವು ಆಪ್ತರು ಸಲ್ಮಾನ್ ಖಾನ್‌ನಿಂದ  ದೂರ ತೆರಳಿದ್ದಾರೆ. ಇದೇ ಕಾರಣದಿಂದ ಸಲ್ಮಾನ್ ಖಾನ್ ಈಗಲೂ ಒಂಟಿಯಾಗಿದ್ದರೆ ಎಂದು ಸಂದೀಪ್ ಕೋಚಾರ್ ಹೇಳಿದ್ದಾರೆ.

ಸಂದೀಪ್ ಕೋಚಾರ್ ಈ ಹೇಳಿಕೆ ನೀಡುತ್ತಿದ್ದಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಸಲ್ಮಾನ್ ಖಾನ್ ಹಲವು ಪ್ರೀತಿಗಳು ಕೈತಪ್ಪಿದೆ. ಇವೆಲ್ಲವು ಸಲ್ಮಾನ್ ಖಾನ್ ಇತಿಹಾಸ ನೋಡಿದರೆ, ಸಲ್ಮಾನ್ ಫಾಲೋ ಮಾಡಿದವರಿಗೆ ಗೊತ್ತಿದೆ. ಇದರಲ್ಲಿ ಜ್ಯೋತಿಷ್ಯ ಅಂಶವೇನು? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

 

SRK once tried to get Salman to marry someone
byu/rn3122 inBollyBlindsNGossip

 

ಸಲ್ಮಾನ್ ಖಾನ್ ಮೂಡ್ ಸ್ವಿಂಗ್ ವಿಚಾರ ಹೇಳಿದ್ದೀರಿ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಗುರೂಜಿ ಈ ರೀತಿ ಹೇಳಿಕೆ ಕೊಡವ ಕಾರಣ ನಾನು ಡ್ರೈವರ್ ಇಟ್ಟುಕೊಂಡಿದ್ದೇನೆ. ಬ್ರೋ ಹೇಳಿದ್ದಾರೆ, ನನ್ನ ಎಲ್ಲಾ ಕೆಲಸಗಳನ್ನು ಡ್ರೈವರ್ ಮಾಡುತ್ತಾರೆ ಎಂದು ಟ್ರೋಲ್ ಮಾಡಿದ್ದಾರೆ.

ಕನ್ನಡ ಬಿಗ್ ಬಾಸ್‌ನಲ್ಲಿ ಕಿಚ್ಚ, ಹಿಂದಿಯಲ್ಲಿ ಸಲ್ಮಾನ್ ನಿರೂಪಣೆ ಖಚಿತ, ಸ್ಪರ್ಧಿಗಳ ಸಂಭಾವ್ಯ ಪಟ್ಟಿ!

ಬಾಲಿವುಡ್ ನಟ ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ ಯಾಕೆ? ಯಾವಾಗ ಮದುವೆಯಾಗುತ್ತಾರೆ? ಈ ಕುತೂಹಲಕ್ಕೆ ಹಲವು ಜ್ಯೋತಿಷಿಗಳು ಇದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇದೀಗ ಮತ್ತೊಬ್ಬ ಜ್ಯೋತಿಷಿ ಸಲ್ಮಾನ್ ಖಾನ್ ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ ಯಾಕೆ ಅನ್ನೋದು ವಿವರಿಸಿದ್ದಾರೆ. ಆದರೆ ಈ ಉತ್ತರಿಂದ ಇದೀಗ ಮೀಮ್ಸ್ ಹರಿದಾಡುತ್ತಿದೆ.

 

Comment
byu/itsmenandini from discussion
inBollywoodShaadis

 

Latest Videos
Follow Us:
Download App:
  • android
  • ios