Asianet Suvarna News Asianet Suvarna News

ಬಾಲಿವುಡ್​ ಶ್ರೀಮಂತೆ ಐಶ್ವರ್ಯರನ್ನು ಹಿಂದಿಕ್ಕಿ ಏಷ್ಯಾದ ಟಾಪ್​-1 ಸ್ಥಾನಕ್ಕೇರಿದ್ದಾರೆ ಹೆಸರೇ ಕೇಳದ ಈ ನಟಿ!

ಬಾಲಿವುಡ್​ನ ಶ್ರೀಮಂತೆ ಐಶ್ವರ್ಯಾ ರೈ ಅವರನ್ನು ಹಿಂದಿಕ್ಕಿ ಏಷ್ಯಾದ ಟಾಪ್​-1 ಶ್ರೀಮಂತೆಯಾಗಿದ್ದಾರೆ ಈ ನಟಿ. ಅವರ್ಯಾರು ಗೊತ್ತಾ?
 

Asias richest actress is a name you have never heard suc
Author
First Published Aug 21, 2023, 3:29 PM IST

ಭಾರತೀಯ ಚಲನಚಿತ್ರೋದ್ಯಮವನ್ನು ವಿಶ್ವದ ಅತ್ಯಂತ ಶ್ರೀಮಂತ ಉದ್ಯಮವೆಂದು ಪರಿಗಣಿಸಲಾಗಿದೆ. ಭಾರತೀಯ ನಟ-ನಟಿಯರು ಕೂಡ ಪ್ರತಿ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಕೂಡ ಸೇರಿದ್ದಾರೆ. ಆದರೆ ಲೀಡಿಂಗ್ ಲೇಡಿಸ್ ಅಂದರೆ ಹೀರೋಯಿನ್‌ಗಳ ವಿಷಯಕ್ಕೆ ಬಂದರೆ ಬೇರೆ ದೇಶಗಳ ನಟಿಯರೇ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂದು ನಾವು ಏಷ್ಯಾದ ಶ್ರೀಮಂತ ನಟಿಯ ಬಗ್ಗೆ ಮಾತನಾಡುತ್ತೇವೆ. ಅವರು ಶ್ರೀಮಂತ ಬಾಲಿವುಡ್​ ನಟಿಯರೆಂದೇ ಪ್ರಸಿದ್ಧಿ ಪಡೆದಿರುವ ಪ್ರಿಯಾಂಕಾ ಚೋಪ್ರಾ ಅಲ್ಲ, ದೀಪಿಕಾ ಪಡುಕೋಣೆ ಅಲ್ಲ, ಐಶ್ವರ್ಯ ರೈ ಬಚ್ಚನ್ ಅಲ್ಲ. ಹೌದು... ಏಷ್ಯಾದ ಶ್ರೀಮಂತ ನಟಿ ಯಾರು ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ಅಸಲಿಗೆ ಏಷ್ಯಾದ ಶ್ರೀಮಂತ ನಟಿಯರು ಯಾವುದೇ ಬಾಲಿವುಡ್​ ತಾರೆಯರು ಅಲ್ಲವೇ ಅಲ್ಲ.  ಏಕೆಂದರೆ ಬಾಲಿವುಡ್​ನ  ಶ್ರೀಮಂತ ನಟಿಯರನ್ನು ಹಿಂದಿಕ್ಕೆ ಏಷ್ಯಾದ ನಂ1 ಶ್ರೀಮಂತ ನಟಿಯಾದಾಕೆ ಚೀನಾದ ಚೆಲುವೆ. ಈಕೆಯ ಹೆಸರು  ಫ್ಯಾನ್ ಬಿಂಗ್‌ಬಿಂಗ್.

ಚೀನಾದ ಚಲನಚಿತ್ರೋದ್ಯಮದ ನಟಿ ಫ್ಯಾನ್ ಬಿಂಗ್‌ಬಿಂಗ್ (Fan Binbbing)  ಏಷ್ಯಾದ ಅತ್ಯಂತ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಎಲ್ಲಾ  ಬಾಲಿವುಡ್​​ ತಾರೆಯರನ್ನೂ ಹಿಂದಿಕ್ಕಿ ಚೀನಾದ ಸುಂದರಿ ನಂಬರ್​1 ಪಟ್ಟಕ್ಕೆ ಬಂದಿದ್ದಾರೆ. ಬಹುತೇಕ ಎಲ್ಲರೂ  ಈ ಹೆಸರು ಕೇಳಿದ್ರೆ ಶಾಕ್ ಆಗಬಹುದು. ಏಕೆಂದರೆ ಈ ಹೆಸರನ್ನು ಬಹುಶಃ ಯಾರೂ ಈ ಹಿಂದೆ ಕೇಳಿರಲಿಕ್ಕೇ ಇಲ್ಲ. ಆದರೆ ಇದು ಸತ್ಯ. ವರದಿಗಳ ಪ್ರಕಾರ, ಫ್ಯಾನ್ ಬಿಂಗ್‌ಬಿಂಗ್ ಏಷ್ಯಾದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು. ಸುದ್ದಿ ಪ್ರಕಾರ, ನಟಿಯ ನಿವ್ವಳ ಮೌಲ್ಯ 100-110 ಮಿಲಿಯನ್ ಡಾಲರ್ ಅಂದರೆ 820-900 ಕೋಟಿ ರೂಪಾಯಿ. ಚೀನೀ ಚಲನಚಿತ್ರೋದ್ಯಮದಲ್ಲಿ ಹಲವು ವರ್ಷಗಳಿಂದ ಪ್ರಮುಖ ನಟಿಯಾಗಿ ಕೆಲಸ ಮಾಡುತ್ತಿರುವ ಫ್ಯಾನ್ ಬಿಂಗ್‌ಬಿಂಗ್, ನಿವ್ವಳ ಮೌಲ್ಯದ ವಿಷಯದಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಕೊರಿಯನ್ ಚಲನಚಿತ್ರೋದ್ಯಮದಲ್ಲಿಯೂ ಅನೇಕ ಖ್ಯಾತನಾಮರನ್ನು ಹಿಂದಕ್ಕಟ್ಟಿದ್ದಾರೆ.   

ಅವಕಾಶಕ್ಕಾಗಿ ಯಶ್​ ಕಣ್ಣೀರು ಹಾಕಿದ್ದ, ನಾನೇ ಊಟ ಕೊಟ್ಟಿದ್ದೆ: ತಮಿಳು ನಟನ ವಿಡಿಯೋ ವೈರಲ್​

 2018 ರಲ್ಲಿ ಸುಮಾರು ಮೂರು ತಿಂಗಳ ಕಾಲ ಫ್ಯಾನ್ ಬಿಂಗ್​ಬಿಂಗ್​ ಬಹಳ ಬಹಳ ಸುದ್ದಿಯಾದದ್ದು ತೆರಿಗೆ ವಿಷಯದಲ್ಲಿ.  ನಟಿ ತೆರಿಗೆ ವಂಚಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿತ್ತು. ನಟಿಯ ನಿವ್ವಳ ಮೌಲ್ಯಕ್ಕಿಂತ ಹೆಚ್ಚಿನ ತೆರಿಗೆ ದಂಡವನ್ನು ವಿಧಿಸಲಾಗಿದೆ ಎಂದು ವರದಿಯಾದ ಬೆನ್ನಲ್ಲೇ ಈಕೆ ಚೀನಾದ ಹೊರಗೂ ಬೆಳಕಿಗೆ ಬಂದರು.  ತೆರಿಗೆ ವಂಚನೆಗಾಗಿ ನಟಿಗೆ RMB 883 ಮಿಲಿಯನ್ ($ 127 ಮಿಲಿಯನ್ ಅಥವಾ ರೂ 1000 ಕೋಟಿ) ದಂಡ ವಿಧಿಸಲಾಯಿತು.  ವರದಿಗಳ ಪ್ರಕಾರ, ನಟಿ ಫ್ಯಾನ್ ಬಿಂಗ್‌ಬಿಂಗ್ ಹದಿಹರೆಯದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಕೇವಲ 16 ನೇ ವಯಸ್ಸಿನಲ್ಲಿ, ಅವರು ಟಿವಿ ಶೋ ಮೈ ಫೇರ್ ಪ್ರಿನ್ಸೆಸ್ (1998-99) ನಡೆಸಿಕೊಟ್ಟು ಅದರಿಂದ  ದೊಡ್ಡ ಬ್ರೇಕ್ ಪಡೆದರು.

ಇನ್ನು ಭಾರತದ ಶ್ರೀಮಂತ ಟಾಪ್​-5 ನಟಿಯರ ವಿಷಯಕ್ಕೆ ಬರುವುದಾದರೆ ಟಾಪ್​-1ನಲ್ಲಿ ಇರುವುದು ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan). ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿರುವ ನಟಿಯ  ಆಸ್ತಿ ಮೌಲ್ಯ 820 ಕೋಟಿ ರೂ.ಗೂ ಹೆಚ್ಚು ಎನ್ನಲಾಗಿದೆ. ಇನ್ನು ಪ್ರಿಯಾಂಕಾ ಚೋಪ್ರಾ ಎರಡನೆಯ ಸ್ಥಾನದಲ್ಲಿದ್ದಾರೆ.  ಪ್ರಿಯಾಂಕಾ ಚೋಪ್ರಾ ಹಾಲಿವುಡ್​​ನಲ್ಲಿಯೂ   ಬಹುಮುಖ ಪ್ರತಿಭೆಯನ್ನು ತೋರಿಸಿದ್ದಾರೆ.  ಅವರ ನಿವ್ವಳ ಮೌಲ್ಯ 620 ಕೋಟಿ ರೂಪಾಯಿ. ಅದರಂತೆಯೇ ಕರೀನಾ ಕಪೂರ್ ಖಾನ್ ನಿವ್ವಳ ಮೌಲ್ಯ 490 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗಿದೆ. ಆಲಿಯಾ ಭಟ್ ಅವರ ಆದಾಯ 99 ಕೋಟಿ ರೂಪಾಯಿ ಆಗಿದ್ದರೆ, ಅನುಷ್ಕಾ ಶರ್ಮಾ ಅವರ ಆಸ್ತಿ  298 ಕೋಟಿ ರೂಪಾಯಿ. 

ಪತಿ ನಿಕ್​ ಹಾಡುವಾಗ ಕಣ್ಣೀರಿಟ್ಟ ಪ್ರಿಯಾಂಕಾ: ಮಕ್ಕಳು ಹಾಡಿದ್ರೆ ಹೀಗೇ ಅನ್ನೋದಾ ಟ್ರೋಲಿಗರು!

Follow Us:
Download App:
  • android
  • ios