ಪತಿ ನಿಕ್​ ಹಾಡುವಾಗ ಕಣ್ಣೀರಿಟ್ಟ ಪ್ರಿಯಾಂಕಾ: ಮಕ್ಕಳು ಹಾಡಿದ್ರೆ ಹೀಗೇ ಅನ್ನೋದಾ ಟ್ರೋಲಿಗರು!

ಪತಿ ನಿಕ್​ ಜೋನಸ್​ ಅವರು ಸಂಗೀತ ಕಛೇರಿ ನಡೆಸಿಕೊಡುವ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಬಿಡದ ಫ್ಯಾನ್ಸ್​ ಸಕತ್​ ಟ್ರೋಲ್​  ಮಾಡುತ್ತಿದ್ದಾರೆ. 
 

Priyanka Chopra Gets Emotional at Nick Jonas Perform At  New York suc

ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ, ನಿಕ್ ಜೋನಾಸ್ ಮನರಂಜನಾ ಇಂಡಸ್ಟ್ರಿಯಲ್ಲಿ ಮುದ್ದಾದ ಜೋಡಿಗಳಲ್ಲಿ ಒಂದು. ಆದರೆ ಈ ಜೋಡಿ ಆಗುವಷ್ಟು ಟ್ರೋಲ್​ ಮತ್ಯಾರೂ ಆಗುವುದಿಲ್ಲ ಎನ್ನಬಹುದೇನೋ. ಇದಕ್ಕೆ ಕಾರಣ, ಭಾರತೀಯ ಸಂಪ್ರದಾಯದಲ್ಲಿ ಪತಿ ದೊಡ್ಡವನಾಗಿಯೇ ಇರಬೇಕು, ಪತ್ನಿ ಚಿಕ್ಕವಳಾಗಿ ಇರಬೇಕು ಎಂದು ಹೇಳಲಾಗುತ್ತದೆ. ಇದಕ್ಕೆ ಹಲವಾರು ರೀತಿಯಲ್ಲಿ  ವೈಜ್ಞಾನಿಕ ಕಾರಣಗಳನ್ನೂ ನೀಡಲಾಗುತ್ತದೆ. ಅದೇ ಕಾರಣಕ್ಕೆ ಪತಿ ಪತ್ನಿಗಿಂತ ಚಿಕ್ಕವರಾಗಿಬಿಟ್ಟರೆ ಟ್ರೋಲ್​ ಆಗುವುದು ಸಹಜ. ಆದರೆ ಪ್ರಿಯಾಂಕಾ ಚೋಪ್ರಾ ವಿಷಯದಲ್ಲಿ ಪತಿ-ಪತ್ನಿಯ ವಯಸ್ಸಿನ ಅಂತರ ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಇರುವ ಕಾರಣ, ಅದರಲ್ಲಿಯೂ ಇಬ್ಬರೂ ಪಬ್ಲಿಕ್​ ಫಿಗರ್​ ಆಗಿರುವುದರಿಂದ ಈ ಜೋಡಿ ಟ್ರೋಲಿಗರಿಗೆ ಆಹಾರವಾಗುವುದು ನಡೆದೇ ಇದೆ. ಇದಕ್ಕೆ ಕಾರಣ ನಿಕ್​ ಅವರು ಪ್ರಿಯಾಂಕಾಗಿಂತ 10 ವರ್ಷ ಚಿಕ್ಕವರು. ಸಾಮಾನ್ಯವಾಗಿ ಪತಿ ಪತ್ನಿಗಿಂತ 10 ವರ್ಷ ದೊಡ್ಡವರಾದರೇನೇ ಸಾಕಷ್ಟು ಟೀಕೆಗಳು ಕೇಳಿಬರುವ ಈ ಹೊತ್ತಿನಲ್ಲಿ, ಪತ್ನಿಯೇ ಪತಿಗಿಂತ 10 ವರ್ಷ ದೊಡ್ಡವಳಾದರೆ ಬಿಟ್ಟಾರೆಯೇ? ಇದೇ  ಕಾರಣಕ್ಕೆ ಈ ಜೋಡಿ ಟ್ರೋಲ್​ಗೆ ಒಳಗಾಗುತ್ತಲೇ ಇರುತ್ತದೆ. 

ಮಿಸ್‌ ವರ್ಲ್ಡ್ ಪಟ್ಟ ಗೆದ್ದು ನಂತರ ಬಾಲಿವುಡ್‌ಗೆ ಪದಾರ್ಪಣೆ ಮಾಡಿ ಇಂದಿಗೂ ಟಾಪ್‌ ಹಿರೋಯಿನ್‌ಗಳ ಪಟ್ಟಿಯಲ್ಲಿದ್ದಾರೆ ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ. ದೊಡ್ಡ ದೊಡ್ಡ ಹಿಟ್‌ ಸಿನಿಮಾ, ಜಾಹೀರಾತು ಅದು ಇದು ಅಂತಾ ಬ್ಯುಸಿ ಇದ್ದ ಚೆಲುವೆ. ಇನ್ನು ನಿಕ್​ ಜೋನಸ್​ ಅವರ ಬಗ್ಗೆ ಹೇಳುವುದಾದರೆ, ಅವರು ಖ್ಯಾತ ಸೆಲೆಬ್ರಿಟಿ ಗಾಯಕ. ಇವರಿಬ್ಬರೂ ಡಿಸೆಂಬರ್ 1, 2018ರಂದು ಮದುವೆಯಾಗಿದ್ದು, 2022ರಲ್ಲಿ ಮಾಲ್ತಿ ಮೇರಿ ಎಂಬ ಮಗುವನ್ನು ಬಾಡಿಗೆ ತಾಯ್ತತನದ ಮೂಲಕ ಪಡೆದಿದ್ದಾರೆ. 

ಮಗಳಿಗೆ ಚಂದ ಮಾಮನ ತೋರಿಸ್ತಿರೋ ಪ್ರಿಯಾಂಕಾ- ಸೋ ಕ್ಯೂಟ್​ ಎಂದ ಫ್ಯಾನ್ಸ್

ಮೊನ್ನೆ ನ್ಯೂಯಾರ್ಕ್‌ನಲ್ಲಿ ನಿಕ್​ ಅವರ ಸಂಗೀತ ಕಛೇರಿ (Music concert) ನಡೆದಿತ್ತು.   ನ್ಯೂಯಾರ್ಕ್‌ನ ಯಾಂಕೀ ಸ್ಟೇಡಿಯಂನಲ್ಲಿ ಅವರ ಪತಿ ನಿಕ್ ಜೋನಾಸ್ ಅವರು ಸಂಗೀತ ಹೇಳುತ್ತಿರುವಾಗ ಪ್ರಿಯಾಂಕಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕಣ್ಣಿನಲ್ಲಿ ನೀರು ತುಂಬಿಕೊಂಡಿದ್ದು ಅದನ್ನು ಅವರು ಒರೆಸಿಕೊಳ್ಳುವ ಹೊತ್ತಿಗೆ, ಕ್ಯಾಮೆರಾ ಕಣ್ಣು ಅವರ ಮೇಲೆ ಫೋಕಸ್​ ಆಗಿದೆ. ಇದರ ವಿಡಿಯೋ ಸಹಜವಾಗಿ ವೈರಲ್​ ಆಗಿದೆ. ಹಲವಾರು ಮಂದಿ ಈ ಜೋಡಿಗೆ ಸೋ ಕ್ಯೂಟ್​ ಎಂದಿದ್ದರೆ, ಇಲ್ಲಿಯೂ ಇವರ ವಯಸ್ಸಿನ ಅಂತರವನ್ನು ಎಳೆದು ತಂದು ಹಲವರು ಟ್ರೋಲ್​ ಮಾಡಿದ್ದಾರೆ. ಮಕ್ಕಳು ಚೆನ್ನಾಗಿ ಸ್ಟೇಜ್​ ಮೇಲೆ ಹೀಗೆ ಪರ್ಫಾರ್ಮ್ ಮಾಡುವಾಗ ಸಹಜವಾಗಿ ಅಮ್ಮಂದಿರು ಭಾವುಕರಾಗುವುದು ಸಹಜ. ಹೀಗೆಯೇ ಪ್ರಿಯಾಂಕಾ ಅವರಿಗೂ ಆಗಿದೆ ಎಂದಿದ್ದಾರೆ. ಇದಕ್ಕೆ ಹಲವರು ರಿಪ್ಲೈ ಮಾಡಿದ್ದು, ನಿಜ ನಿಜ ಎಂದು ಹೇಳುವ ಮೂಲಕ ಕಾಲೆಳೆಯುತ್ತಿದ್ದಾರೆ. 

ಈ ಹಿಂದೆ ಖುದ್ದು ಪ್ರಿಯಾಂಕಾ ಅವರು, ತಮ್ಮ ಮತ್ತು ನಿಕ್​ ವಯಸ್ಸಿನ ಕುರಿತು ಮಾತನಾಡಿದ್ದರು. ನಾನು  2000ನೇ ಇಸವಿಯಲ್ಲಿ ಅವರು ಮಿಸ್​ ವರ್ಲ್ಡ್​ ಕಿರೀಟ (Miss World) ಮುಡಿಗೇರಿಸಿಕೊಂಡ ಸಂದರ್ಭದಲ್ಲಿ  ನನಗೆ ಆಗಿನ್ನೂ 17 ವರ್ಷ ತುಂಬಿತ್ತು.  ನಾನು ಆ ಪಟ್ಟ ಗೆದ್ದಾಗ ನನ್ನ ಅತ್ತೆಯವರು ಲಂಡನ್‌ನಲ್ಲಿದ್ದರು. ಅವರೂ ನನ್ನನ್ನು ನೋಡಿದ್ದರು. ಆಗ ನಿಕ್​ಗೆ ಇನ್ನೂ 7 ವರ್ಷ ವಯಸ್ಸಾಗಿತ್ತು ಎಂದು ಅತ್ತೆ ಹೇಳುತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೆಲ್ಲಾ ಈಗ ಟ್ರೋಲಿಗರು ನೆನಪಿಸಿಕೊಂಡು ಈ ಕ್ಯೂಟ್​ ದಂಪತಿಗೆ ಅಮ್ಮ-ಮಗನ ಪಟ್ಟ ಕಟ್ಟಿ ಟ್ರೋಲ್​ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios