Asianet Suvarna News Asianet Suvarna News

ಅವಕಾಶಕ್ಕಾಗಿ ಯಶ್​ ಕಣ್ಣೀರು ಹಾಕಿದ್ದ, ನಾನೇ ಊಟ ಕೊಟ್ಟಿದ್ದೆ: ತಮಿಳು ನಟನ ವಿಡಿಯೋ ವೈರಲ್​

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಗುರುತಿಸುವವರೇ ಇಲ್ಲದೇ ತಮಿಳು ನಟನ ಮುಂದೆ ಕಣ್ಣೀರು ಹಾಕಿದ್ದರಂತೆ ಯಶ್​. ನಟನ ವಿಡಿಯೋ ವೈರಲ್​ 
 

Yash Cried To Me Tamil Actors Statement Goes Viral suc
Author
First Published Aug 17, 2023, 5:16 PM IST

ರಾಕಿಂಗ್​ ಸ್ಟಾರ್​ ಯಶ್​​ (Yash) ಇಂದು ಕನ್ನಡ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿಯೂ ಬೆಳೆದು ನಿಂತಿದ್ದಾರೆ. ಕೆಜಿಎಫ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದ ಯಶ್​,  ನ್ಯಾಷನಲ್​ ಸ್ಟಾರ್​ ಆಗಿ ಹೊಮ್ಮಿದ್ದಾರೆ. ಈ ಮೂಲಕ ಸ್ಯಾಂಡಲ್​​ವುಡ್​ನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬೆಳೆದು ನಿಂತಿರುವ ನಟ ಯಶ್​, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಏರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಯಾವುದೇ ಗಾಡ್​ ಫಾದರ್​ ಇಲ್ಲದೇ ಇಂಥದ್ದೊಂದು ಯಶಸ್ಸು ಗಳಿಸುವುದು ಹಲವರಿಗೆ ಕನಸಿನ ಮಾತೇ. ನುರಿತ ಕೌಶಲ, ಅದ್ಭುತ ಅಭಿನಯದ ಪ್ರತಿಭೆ ಏನೇ ಇದ್ದರೂ ಎಷ್ಟೋ ಮಂದಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಗುವುದೇ ಕಷ್ಟ. ಒಂದೇ ಗಾಡ್​ ಫಾದರ್​ ಇರಬೇಕು ಇಲ್ಲವೇ ಸ್ಟಾರ್​ ಕಿಡ್​ ಆಗಿರಬೇಕು ಎನ್ನುವ ಸ್ಥಿತಿ ಇದೆ. ಆದರೆ ನಟ ಯಶ್​ ಅವರು ಕಷ್ಟದಿಂದ ಹಂತಹಂತವಾಗಿ ಮೇಲೆ ಬಂದವರು.

ಆದರೆ ಇದೀಗ ಅವರು ಹಿಂದೆ ಪಟ್ಟಂಥ ಕಷ್ಟ, ಅವಕಾಶವಿಲ್ಲದೇ ನೊಂದುಕೊಂಡು ಕಣ್ಣೀರು ಹಾಕಿದ ಪರಿಯನ್ನು ತಮಿಳು ನಟ ಜೈ ಆಕಾಶ್‌ ಅವರು ಹೇಳಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಯಶ್​ ಕುರಿತ ಈ ಹೊಸ ವಿಚಾರವನ್ನು ಕೇಳಿ ಫ್ಯಾನ್ಸ್​ ತಮ್ಮ ನೆಚ್ಚಿನ ನಟನ ಹಿನ್ನೆಲೆ ಹೀಗಿತ್ತಾ ಎಂದು ಶಾಕ್​ ಆಗಿದ್ದಾರೆ. ಆರಂಭದ ದಿನಗಳಲ್ಲಿ ಯಶ್​ ಅವರಿಗೆ ಅವಕಾಶಗಳೇ  ಇರಲಿಲ್ಲ.  ಈ ವೇಳೆ   ನಟ ಜೈ ಆಕಾಶ್‌ (Jai Akash) ಅವರನ್ನು ಭೇಟಿಯಾಗಿ ಅವರ ಮುಂದೆ ಕಣ್ಣೀರು ಸುರಿಸಿದ್ದರು. ಈ ವಿಷಯವನ್ನು ಜೈ ಆಕಾಶ್​ ಹೇಳಿದ್ದಾರೆ. ಯಶ್​ ಕುರಿತು ಮಾತನಾಡಿದ ಅವರು,  'ನಿಮಗೆಲ್ಲರಿಗೂ ಈಗ ಕೆಜಿಎಫ್‌ ಸಿನಿಮಾದ ಯಶ್‌ ಗೊತ್ತು. ಆದರೆ ಅವರ ಮೊದಲ ಸ್ಥಿತಿ ಬೇರೆಯದ್ದೇ ಆಗಿತ್ತು' ಎಂದಿರುವ ಜೈ ಆಕಾಶ್​ ಅವರು, ಯಶ್‌ ಮೊದಲಿಗೆ ಇಂಟ್ರಡ್ಯೂಸ್‌ ಆಗಿದ್ದು, ನಾನು ಹೀರೋ ಆಗಿ ನಟಿಸಿದ್ದ ಸಿನಿಮಾದಲ್ಲಿ. ನನ್ನ ತಮ್ಮನಾಗಿ ಯಶ್‌ ನಟಿಸಿದ್ದಾರೆ. ಆತನನ್ನು ನಾನೇ ಸೆಲೆಕ್ಟ್‌ ಮಾಡಿದ್ದೆ. ಆತನ ಮುಖ ನನ್ನ ಮುಖವನ್ನು ಹೋಲುತ್ತಿತ್ತು. ಅದಕ್ಕಾಗಿ ತಮ್ಮನ ಪಾತ್ರ ನೀಡಿದ್ದೆ' ಎಂದಿದ್ದಾರೆ.

ಸ್ಟಾರ್ಸ್‌ಗೆ ನಿರ್ದೇಶಕರು ಬೇಕಾಗಿದ್ದಾರೆ: ಯಾರಾದರೂ ಇದ್ದಾರಾ, ನಿಮಗ್ಗೊತ್ತಾ?

 ಆ ದಿನಗಳಲ್ಲಿ ಯಶ್​ ಕಿರುತೆರೆಯಲ್ಲಿ ನಟಿಸುತ್ತಿದ್ದರು. ಆದರೆ ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ಆದರೆ ಯಾರೂ ತಮ್ಮನ್ನು ಗುರುತಿಸುತ್ತಿಲ್ಲ ಎನ್ನುವ ನೋವು ಇತ್ತು. ಅದಕ್ಕಾಗಿ ತಮ್ಮ ಮುಂದೆ ಬಂದು ಕಣ್ಣೀರು ಸುರಿಸಿದ್ದರು ಎಂದಿರುವ ಜೈ ಆಕಾಶ್​ ಅವರು, 'ಅಂದು ಯಶ್​, ಸದ್ಯಕ್ಕೆ ನನಗೆ ಸೀರಿಯಲ್‌ ಎಲ್ಲಾ ಬೇಡ. ಸಿನಿಮಾಗಳಲ್ಲಿ ನಟಿಸಬೇಕು. ಅವಕಾಶಗಳು ಸಿಗುತ್ತಿಲ್ಲ ಎಂದಿದ್ದ. ಆಗ ನಾನೇ ಅವನನ್ನು ಕರೆದು  ಸಮಾಧಾನ ಪಡಿಸಿದ್ದೆ, ಊಟವನ್ನೂ ಮಾಡಿಸಿದ್ದೆ. ಜೊತೆಗೆ ನನ್ನ ಸಿನಿಮಾ ಜಂಬದ ಹುಡುಗಿದಲ್ಲಿ  ನಟಿಸುವ ಅವಕಾಶವನ್ನೂ ಕೊಟ್ಟೆ' ಎಂದಿದ್ದಾರೆ.  

'ಜಂಬದ ಹುಡುಗಿ (Jambada Hugudi) ಸಿನಿಮಾ ಆರಂಭವಾದ ಬಳಿಕ ಅವನನ್ನು ನಾನೇ ಪಿಕಪ್‌ ಮತ್ತು ಡ್ರಾಪ್‌ ಮಾಡುತ್ತಿದ್ದೆ. ಆವತ್ತು ಆ ಸಿನಿಮಾ ಹಿಟ್‌ ಆಗಿತ್ತು.  ಅದಾದ ಬಳಿಕ ನಾನು ತೆಲುಗು, ತಮಿಳು ಕಡೆ ಗಮನ ಹರಿಸಿದೆ. ಯಶ್‌ ಕನ್ನಡದಲ್ಲಿ ನಾಯಕನಾಗಿ ಗುರುತಿಸಿಕೊಂಡ. ಇದೀಗ ಯಶ್‌ ಸ್ಟಾರ್‌ ಆಗಿ ಬೆಳೆದಿದ್ದಾನೆ' ಎಂದಿದ್ದಾರೆ  ಜೈ ಆಕಾಶ್‌. ಅಂದಹಾಗೆ ಜಂಬದ ಹುಡುಗಿ  ಯಶ್​ ಅವರ ಮೊದಲ ಸಿನಿಮಾ.  

 

Follow Us:
Download App:
  • android
  • ios