ಬಾಲ್ಯದ ಫೇವರಿಟ್ ರೊಮ್ಯಾಂಟಿಕ್ ಹೀರೋ ಸಿದ್ಧಾರ್ಥ್’ಗೆ ನಾಯಕಿಯಾದ ಖುಷಿ ಹಂಚಿಕೊಂಡ ನಟಿ ಆಶಿಕಾ ರಂಗನಾಥ್

ಕನ್ನಡದ ಚುಟುಚುಟು ಬೆಡಗಿ ಆಶಿಕಾ ರಂಗನಾಥ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದು, ಇದೀಗ ನಟ ಸಿದ್ಧಾರ್ಥ್ ಗೆ ನಾಯಕಿಯಾಗಿ ಮಿಸ್ ಯೂ ಸಿನಿಮಾದಲ್ಲಿ ನಾಯಕಿಯಾಗಿದ್ದು, ಆ ಸಂಭ್ರಮವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ ಆಶಿಕಾ. 
 

Ashika Ranganath shares her happiness for acting with her childhood favourite hero Siddarth pav

ಕ್ರೇಜಿ ಬಾಯ್ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್ (Ashika Ranganath), ನಂತರ ಒಂದಾದ ಮೇಲೆ ಒಂದು ಸಿನಿಮಾದಂತೆ, ಸ್ಟಾರ್ ನಟರ ಹಲವು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚಿದರು. ಅದರಲ್ಲೂ ಶರಣ್ ಜೊತೆ ರಾಂಬೋ 2 ಸಿನಿಮಾದಲ್ಲಿ ನಟಿಸಿದ ಬಳಿಕ, ಸಿನಿಮಾದಲ್ಲಿನ ಚುಟು ಚುಟು ಹಾಡು ಸಖತ್ ಜನಪ್ರಿಯತೆ ಪಡೆಯಿತು, ಅದಾದ ನಂತರ ಜನ ಆಶಿಕಾ ರಂಗನಾಥ್ ಅವರನ್ನು ಚುಟು ಚುಟು ಬೆಡಗಿ ಅಂತಾನೆ ಗುರುತಿಸೋಕೆ ಆರಂಭಿಸಿತು. 

ಇದೀಗ ಆಶಿಕಾ ರಂಗನಾಥ್ ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿದ್ದಾರೆ. ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲೂ ಆಶಿಕಾ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಎರಡು ಸಿನಿಮಾ ಮಾಡಿದ್ದು, ಮತ್ತೊಂದು ಸಿನಿಮಾ ಶೂಟಿಂಗ್ ನಡೆಯುತ್ತಿದೆ. ತಮಿಳಿನಲ್ಲೂ ಕೂಡ ಈಗಾಗಲೇ ಪಟ್ಟತ್ತು ಅರಸನ್  ಸಿನಿಮಾದಲ್ಲಿ ನಟಿಸಿದ್ದರು. ಇದೀಗ ನಟ ಸಿದ್ಧಾರ್ಥ (Siddarth) ಜೊತೆ ಮಿಸ್ ಯೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 13ರಂದು ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಟಿ ಆಶಿಕಾ ರಂಗನಾಥ್ ಅವರು ಸಿದ್ಧಾರ್ಥ್ ಜೊತೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. 

ನನ್ನನ್ನ ‘ರಾಣಿ’ ಅಂತ ಕರಿತಾರೆ ಎನ್ನುತ್ತಾ ಸೀರೆಲಿ ಹೀಗೆ ಪೋಸ್ ಕೊಟ್ರು ಚೈತ್ರಾ ಆಚಾರ್

ಆಶಿಕಾ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಸಿನಿಮಾದ ಪೋಸ್ಟರ್ ಗಾಗಿ ತೆಗೆಸಿದಂತಹ ಫೋಟೊ ಶೂಟ್ ವಿಡಿಯೋ ಶೇರ್ ಮಾಡಿ, ನನ್ನ ಬಾಲ್ಯದಿಂದಲೂ ನಾನು ಮೆಚ್ಚಿದ ವ್ಯಕ್ತಿ... ಅವರ ಪ್ರೇಮ ಚಲನಚಿತ್ರಗಳನ್ನು ನೋಡುತ್ತಾ ಬೆಳೆದವಳು ನಾನು, ಇದೀಗ ಮಿಸ್ ಯೂ (Miss You) ಎನ್ನುವ ಪ್ರೇಮಕಥೆಯಲ್ಲಿ ಅವರ ಜೊತೆಗೆ ನಟಿಸುತ್ತಿರೋದು ನೆನಪಿಟ್ಟುಕೊಳ್ಳಬೇಕಾದ ಜರ್ನಿಯಾಗಿದೆ. ಜೀವನವು ಈ ರೀತಿಯಾಗಿ ಸುಂದರವಾದ ಸ್ಕ್ರಿಪ್ಟ್ ಗಳನ್ನು ನಿಮ್ಮ ದಾರಿಗೆ ಹೇಗೆ ತರುತ್ತದೆ ಎಂಬುದು ನನಗೆ ಆಶ್ಚರ್ಯವನ್ನುಂಟುಮಾಡುತ್ತದೆ, ಅದರಲ್ಲೂ ವಿಶೇಷವಾಗಿ ನಿಮ್ಮ ಫೇವರಿಟ್ ನಟನ ಜೊತೆಗೆ ನಟಿಸೋ ಅವಕಾಶ ಸಿಕ್ಕಿರೋದು ಅಚ್ಚರಿಯೇ ಸರಿ.  ಮಿಸ್ ಯೂ ಸೆಟ್ ಗಳಲ್ಲಿ ಕಳೆದ ಪ್ರತಿಯೊಂದು ನೆನಪುಗಳನ್ನು ನಾನು ನಿಜವಾಗಿಯೂ ನೆನಪಿಸಿಕೊಳ್ಳುತ್ತೇನೆ, ಮತ್ತು ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ, ಸಿದ್ಧಾರ್ಥ್ ಸರ್. ಎಂದು ಬರೆದುಕೊಂಡಿದ್ದಾರೆ. 

ಅಷ್ಟೇ ಅಲ್ಲದೇ ಈಗ ಸಿನಿಮಾ ಡಿಸೆಂಬರ್ 13 ರಂದು ಬಿಡುಗಡೆಯಾಗಿದ್ದು, ನಿಮ್ಮೊಂದಿಗೆ ನನ್ನನ್ನು ಪರದೆಯ ಮೇಲೆ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ! ನಾನು ಕನಸಿನಲ್ಲಿಯೂ ಕನಸು ಕಾಣಲು ಧೈರ್ಯ ಮಾಡದ ಕನಸು ನಾಳೆ ನನಸಾಗುತ್ತಿದೆ ಎಂದು ಎರಡು ದಿನದ ಹಿಂದೆ ಪೋಸ್ಟ್ ಮಾಡಿದ್ದರು. ಜೊತೆಗೆ ದಯವಿಟ್ಟು ಸುಬ್ಬು ಮತ್ತು ವಾಸು. ಅವರ ಈ ಸುಂದರವಾದ ಕಥೆಯನ್ನು (love story) ನೋಡಿ, ನೀವು ಖಂಡಿತವಾಗಿಯೂ ಸಿನಿಮಾಗೆ ಕನೆಕ್ಟ್ ಆಗುತ್ತೀರಿ ಎಂದು  ಹೇಳಿದ್ದಾರೆ. 

ಆ ಹೀರೋ ಜೊತೆ ಸಿನಿಮಾ ಮಾಡಲ್ಲ ಅಂತ ಹೇಳಿಲ್ಲ, ಪೇಮೆಂಟ್ ಕಡಿಮೆ ಕೊಡ್ತಾರೆ: ಆಶಿಕಾ ರಂಗನಾಥ್

ಈಗಾಗಲೇ ಆಶಿಕಾ ರಂಗನಾಥ್ ಮತ್ತು ಸಿದ್ಧಾರ್ಥ್ ನಟಿಸಿರುವ  ಮಿಸ್ ಯೂ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಮಿಸ್‌ ಯೂ  ರಾಜಶೇಖರ್ ಎನ್ ಬರೆದು ನಿರ್ದೇಶಿಸಿದ ಈ ಚಿತ್ರ. ಬಾಲ ಸರವಣನ್, ಲೊಲ್ಲು ಸಾಬ ಮಾರನ್ ಮತ್ತು ಕರುಣಾಕರನ್ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 7 ಮೈಲ್ಸ್ ಪರ್ ಸೆಕೆಂಡ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ನಿರ್ಮಿಸಿದ ಈ ಸಿನಿಮಾಕ್ಕೆ ಕೆ.ಜಿ. ವೆಂಕಟೇಶ್ ಛಾಯಾಗ್ರಹಣ, ಜಿಬ್ರಾನ್ ಸಂಗೀತ ಮತ್ತು ದಿನೇಶ್ ಪೊನ್ರಾಜ್ ಸಂಕಲನವಿದೆ. 


 

Latest Videos
Follow Us:
Download App:
  • android
  • ios