ನನ್ನನ್ನ ‘ರಾಣಿ’ ಅಂತ ಕರಿತಾರೆ ಎನ್ನುತ್ತಾ ಸೀರೆಲಿ ಹೀಗೆ ಪೋಸ್ ಕೊಟ್ರು ಚೈತ್ರಾ ಆಚಾರ್
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಭಿನ್ನ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುವ ಚೈತ್ರಾ ಆಚಾರ್ ಇದೀಗ, ಬ್ಲ್ಯಾಕ್ ಸೀರೆಯಲ್ಲಿ ಬೆಂಕಿ ಥರ ಮಿಂಚುತ್ತಿದ್ದಾರೆ.
ಚೈತ್ರಾ ಆಚಾರ್ (Chitra Achar) ಕನ್ನಡ ಚಿತ್ರರಂಗದ ಭರವಸೆಯ ನಟಿ. ಚೈತ್ರಾ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದ ಮೂಲಕವೇ ಮಿಂಚುತ್ತಿರುತ್ತಾರೆ. ಹೊಸ ಹೊಸ ಫೋಟೊ ಶೂಟ್ ಮೂಲಕ ಅಭಿಮಾನಿಗಳ ಹೃದಯದಲ್ಲಿ ಕಚಗುಳಿ ಇಡುತ್ತಿರುತ್ತಾರೆ.
ಚೈತ್ರಾ ಆಚಾರ್ ಅತ್ಯದ್ಭುತ ನಟಿ ಹೌದು, ಇವರ ನಟನೆಯ ಟೋಬಿ, ಸಪ್ತಸಾಗರದಾಚೆ ಎಲ್ಲೋ (Sapthasagaradache Ello) , ಬ್ಲಿಂಕ್ ಸಿನಿಮಾಗಳಲ್ಲಿನ ಇವರ ಪಾತ್ರಗಳು ವೀಕ್ಷಕರನ್ನು ಮೋಡಿ ಮಾಡಿದ್ದಂತೂ ಸುಳ್ಳಲ್ಲ. ಅದೇ ರೀತಿಯ ಇವರು ಶೇರ್ ಮಾಡೋ ಫೋಟೊಗಳು ಸಹ ಇಂಟರ್ನೆಟಲ್ಲಿ ಸಾಕಷ್ಟು ಸದ್ದು ಮಾಡುತ್ತಿರುತ್ತವೆ.
ಚೈತ್ರಾ ಆಚಾರ್, ತಮ್ಮ ಕಾಮೆಂಟ್ ಸೆಕ್ಷನ್ ಸೀಮಿತ ಸೆಲೆಬ್ರಿಟಿಗಳಿಗಷ್ಟೇ ಕಾಮೆಂಟ್ ಮಾಡಲು ಸಾಧ್ಯವಾಗುವಂತೆ ಎಡಿಟ್ ಮಾಡ್ಕೊಂಡು, ತಮ್ಮ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವೊಂದು ಫೋಟೊಗಳು ಎಷ್ಟೊಂದು ಬೋಲ್ಡ್ ಆಗಿರುತ್ತವೆ ಅಂದ್ರೆ, ನೋಡುಗರನ್ನ ಹುಬ್ಬೇರಿಸುವಂತೆ ಮಾಡುತ್ತೆ.
ಇದೀಗ ನಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಕಪ್ಪು ಸೀರೆ ಜೊತೆಗೆ, ವೆಲ್ವೆಟ್ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿರುವ ಸುಂದರವಾದ ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೋಟೊಗಳಲ್ಲೂ ನಟಿ ಬೋಲ್ಡ್ ಮತ್ತು ಬ್ಯೂಟಿ ಫುಲ್ ಆಗಿ ಕಾಣಿಸುತ್ತಿದ್ದಾರೆ. ತಮ್ಮ ಫೋಟೊ ಜೊತೆಗೆ ಚೈತ್ರಾ I’m called RANI at home…and I also feel like one sometimes ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.
ಚೈತ್ರಾ ಆಚಾರ್ ಫೋಟೊಗಳಿಗೆ ನಟಿ ಆಶಿಕಾ ರಂಗನಾಥ್ (Ashika Ranganath) ಬ್ಯೂಟಿ ಎಂದು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಉಫ್, ಬೆಂಕಿ ಎನ್ನುತ್ತಾ ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಫುಲ್ ಸ್ಲೀವ್ಸ್, ಫುಲ್ ನೆಕ್ ಬ್ಲೌಸ್ ಧರಿಸಿ, ಜ್ಯುವೆಲ್ಲರಿ ಧರಿಸಿದ್ದರೂ ನಟಿಯ ಲುಕ್ ಮಾತ್ರ ತುಂಬಾನೆ ಬೋಲ್ಡ್ ಆಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ ಚೈತ್ರಾ ಆಚಾರ್ ಸದ್ಯ ಎರಡು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಕನ್ನಡದಲ್ಲಿ ಸ್ಟ್ರಾಬೆರ್ರಿ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ತಯಾರಾಗಿದೆ, ಅದೇ ರೀತಿ ಬಹು ನಿರೀಕ್ಷೆಯ ಉತ್ತರಕಾಂಡ ಸಿನಿಮಾದಲ್ಲೂ ಚೈತ್ರಾ ಬಣ್ಣ ಹಚ್ಚಿದ್ದಾರೆ. ನಟನೆಯ ಜೊತೆ ಜೊತೆಗೆ ಚೈತ್ರಾ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ಅದ್ಭುತ ಕಂಠದಲ್ಲಿ ಹಾಡುವ ಮೂಲಕ ಕೂಡ ಸುದ್ದಿಯಲ್ಲಿರುತ್ತಾರೆ.