DDLJ ಸಿನಿಮಾಗೆ ಭರ್ತಿ 26 ವರ್ಷಗಳು ಸಹನಟ ಕಷ್ಟದಲ್ಲಿದ್ದದ್ದು ಕಾಣಲೇ ಇಲ್ಲ ಕಾಜೊಲ್‌ಗೆ ಶಾರೂಖ್ ನೋವಲ್ಲಿರುವಾಗ ನಟಿಯ ಸಂಭ್ರಮ

ಅ.20ಕ್ಕೆ ಬಾಲಿವುಡ್‌ನ ಖ್ಯಾತ ಸಿನಿಮಾ ದಿಲ್ ವಾಲೆ ದುಲ್ಹಾನಿಯಾ ಲೇ ಜಾಯೇಂಗೇಗೆ(DDLJ) 26 ವರ್ಷಗಳ ಸಂಭ್ರಮ. ಕಳೆದ ವರ್ಷ 25ರ ಮೈಲಿಗಲ್ಲು ತಲುಪಿದ್ದ ಸಿನಿಮಾ ಸಂಭ್ರಮಾಚರಿಸಿತ್ತು. ಇಂದಿಗೂ ಬಾಲಿವುಡ್(Bollywood) ಸಿನಿಪ್ರಿಯರು ಮತ್ತೆ ಮತ್ತೆ ನೋಡಬಯಸುವ ಸಿನಿಮಾ ಇದು. ಸಿನಿಮಾ 26 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಟಿ ಕಾಜೊಲ್(Kajol) ಈ ಸಂಭ್ರಮವನ್ನು ಆಚರಿಸಿದ್ದಾರೆ.

ಸಿನಿಮಾದ ಒಂದು ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ನಟಿ ಈ ಸಂಭ್ರಮವನ್ನು ನೆನಪಿಸಿಕೊಂಡಿದ್ದಾರೆ. ಆದರೆ ಕಿಂಗ್ ಖಾನ್ ಅಭಿಮಾನಿಗಳು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಸಹನಟ ಶಾರೂಖ್ ಖಾನ್(Shah Rukh Khan) ಮಗ ಜೈಲಿನಲಿದ್ದು ನಟ ಇಷ್ಟೊಂದು ಕಷ್ಟದಲ್ಲಿರುವಾಗ ಕಾಜೊಲ್ ಸಹನಟನನ್ನು ಬೆಂಬಲಿಸಿಲ್ಲ ಎಂದು ಟ್ರೋಲ್ ಮಾಡಿದ್ದಾರೆ.

ಸತತ 20 ವರ್ಷ ಪ್ರದರ್ಶನ ಕಂಡ ದಿಲ್‌ವಾಲೆ ದುಲ್ಹಾನಿಯಾ ಲೇಜಾಯೇಂಗೆ ಸಿನಿಮಾಗೆ 25 ವರ್ಷ

ಮುಂಬೈ ಐಷರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ ಮಾಡಿದಾಗ ಅರೆಸ್ಟ್ ಆದ ಶಾರೂಖ್ ಮಗ ಆರ್ಯನ್ ಖಾನ್ ಜೈಲಿನಲ್ಲಿದ್ದಾನೆ. ಈ ಸಂದರ್ಭ ಸಹನಟ, ಗೆಳೆಯ ಶಾರೂಖ್ ಬೆಂಬಲಕ್ಕೆ ಕಾಜೊಲ್ ಬರದಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣ.

ಕಾಜೋಲ್ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಡಿಡಿಎಲ್‌ಜೆಯಿಂದ ರಾಜ್ ಮತ್ತು ಸಿಮ್ರಾನ್ ಅವರ ಲೆಜೆಂಡ್ ಟ್ರೈನ್ ಸೀನ್ ದೃಶ್ಯವನ್ನು ಪೋಸ್ಟ್ ಮಾಡಿದ್ದು, ಚಿತ್ರ ಬಿಡುಗಡೆಯಾದ 26 ವರ್ಷಗಳನ್ನು ಗುರುತಿಸಿ ಸಂಭ್ರಮಿಸಿದ್ದಾರೆ.

ವೀಡಿಯೊವನ್ನು ಹಂಚಿಕೊಂಡ ಕಾಜೋಲ್, ಸಿಮ್ರಾನ್ 26 ವರ್ಷಗಳ ಹಿಂದೆಯೇ ರೈಲು ಹಿಡಿದಾಯಿತು. ಈ ಎಲ್ಲ ಪ್ರೀತಿಗಾಗಿ ನಾವು ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೇವೆ. #26YearsOfDDLJ ಎಂದು ನಟಿ ಬರೆದಿದ್ದಾರೆ.

ಮಗ ಮನೆಗೆ ಬರೋವರೆಗೂ ಸ್ವೀಟ್ಸ್ ಮಾಡಬಾರದು: ಗೌರಿ ಖಾನ್‌ ಅದೇಶ!

ಈ ಪೋಸ್ಟ್ ಶಾರೂಖ್ ಖಾನ್ ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಅವರು ಕಾಮೆಂಟ್ ವಿಭಾಗದಲ್ಲಿ ನಟಿಯೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಶಾರೂಖ್ ಜೊತೆ ನಿಲ್ಲಲಿಲ್ಲ. ಬೆಂಬಲ ವ್ಯಕ್ತಪಡಿಸಿಲ್ಲ ಎಂದಿದ್ದಾರೆ ಅಭಿಮಾನಿಗಳು.

ಹೃತಿಕ್ ರೋಷನ್, ಫರಾ ಖಾನ್, ಸ್ವರಾ ಭಾಸ್ಕರ್, ಹನ್ಸಲ್ ಮೆಹ್ತಾ ಮುಂತಾದ ಮನರಂಜನಾ ಉದ್ಯಮದ ಅನೇಕ ನಟರು ಮತ್ತು ಸೆಲೆಬ್ರಿಟಿಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಎಸ್‌ಆರ್‌ಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಗಮನಿಸಬೇಕು.

View post on Instagram

ಒಬ್ಬ ನೆಟ್ಟಿಗ ಸಿಮ್ರನ್, ರಾಜ್ ಅವರು ಉತ್ತಮ ಮನಸ್ಥಿತಿಯಲ್ಲಿಲ್ಲ, ಅವರಿಗೆ ಸಹಾಯ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿಯ ಕಾಮೆಂಟ್‌ನಲ್ಲಿ, ಕ್ಷಮಿಸಿ ಆದರೆ ನೀವು ಶಾರೂಖ್‌ನನ್ನು ಏಕೆ ಬೆಂಬಲಿಸುವುದಿಲ್ಲ ಎಂದು ಬರೆದಿದ್ದಾರೆ. ಮೂರನೇ ಅಭಿಮಾನಿ ಈ ಕಷ್ಟದ ಸಮಯದಲ್ಲಿ ನೀವು ಶಾರೂಖ್ ಜೊತೆ ನಿಲ್ಲುತ್ತೀರಿ ಎಂದು ನಾನು ಭಾವಿಸುತ್ತೇವೆ ಎಂದಿದ್ದಾರೆ.

Aryan Drug Case:ಮಗನ ಬಂಧನದ ನಂತರ ಮೊದಲ ಬಾರಿಗೆ ಕಾಣಿಸಿಕೊಂಡ ಶಾರುಖ್‌!

ನಾವು ನಿಮ್ಮ ಕಡೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಶಾರೂಖ್ ಬಗ್ಗೆ ಏನನ್ನೂ ನೋಡಲಿಲ್ಲ. ನಾನು ನಿಮ್ಮ ಅಭಿಮಾನಿಯಾಗಿದ್ದೆ ಆದರೆ ಈಗ.. ಎಂದು ಮೌನವಾಗಿದ್ದಾರೆ. ಇನ್ನೊಬ್ಬ ನಿರಾಶೆಗೊಂಡ ಅಭಿಮಾನಿ ಅಸಮಾಧಾನದಿಂದ ನಿಮ್ಮ PR ತಂಡವು ಇದನ್ನು ಮಾಡಿದರೆ, ನಾಚಿಕೆ. ನೀವೇ ಇದನ್ನು ಪೋಸ್ಟ್ ಮಾಡಿದರೆ, ಹರ್ಟ್! ನಿಮ್ಮ ಉತ್ತಮ ಸ್ನೇಹಿತರು ಈಗ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆರ್ಯನ್‌ಗೆ ಜಾಮೀನು ತಿರಸ್ಕರಿಸಿರುವಾಗ ನೀವು ಈ ಬಗ್ಗೆ ಹೇಗೆ ಪೋಸ್ಟ್ ಮಾಡುತ್ತೀರಿ .. ? ಏನಾಗಿದೆ ನಿಮಗೆ..? ಎಂದು ಪ್ರಶ್ನಿಸಿದ್ದಾರೆ.